HomeSportsಟಿ-20 ವಿಶ್ವಕಪ್: ಬಲಿಷ್ಠ ತಂಡವನ್ನು ಘೋಷಿಸಿದ ಪಾಕಿಸ್ತಾನ

ಟಿ-20 ವಿಶ್ವಕಪ್: ಬಲಿಷ್ಠ ತಂಡವನ್ನು ಘೋಷಿಸಿದ ಪಾಕಿಸ್ತಾನ

ಭಾರತದಲ್ಲಿ ಟಿ-20 ವಿಶ್ವಕಪ್ ಆಡುವುದಿಲ್ಲ ಎಂಬ ಬಾಂಗ್ಲಾದೇಶದ ನಿಲುವನ್ನು ಸಮರ್ಥಿಸಿಕೊಂಡು ಕೂತಿದ್ದ ಪಾಕಿಸ್ತಾನ ಟೂರ್ನಿಗೆ ತನ್ನ 15 ಸದಸ್ಯರ ತಂಡವನ್ನು ಘೋಷಣೆ ಮಾಡಿದೆ. ಅವರ ಪ್ರಕಾರ ಬಲಿಷ್ಠ ತಂಡವನ್ನು ಆಯ್ಕೆ ಮಾಡಲಾಗಿದ್ದು, ಕಪ್ ಗೆಲ್ಲುವುದು ಗುರಿಯಾಗಿದೆ.

ಟಿ-20 ವಿಶ್ವಕಪ್ ಬಹಿಷ್ಕಾರ ಮಾಡುವ ಬೆದರಿಕೆಯ ಒಂದು ದಿನದ ನಂತರ ಪಾಕಿಸ್ತಾನ 15 ಸದಸ್ಯರ ತಂಡವನ್ನು ಘೋಷಣೆ ಮಾಡಿದೆ. ನಾಯಕರಾಗಿ ಸಲ್ಮಾನ್ ಅಲಿ ಆಗಾ ಫೆಬ್ರವರಿ 7ರಿಂದ ಪ್ರಾರಂಭವಾಗುವ ಪಂದ್ಯಾವಳಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಪಾಕಿಸ್ತಾನ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುತ್ತದೆ. ಆತಿಥೇಯ ಭಾರತಕ್ಕೆ ಪ್ರಯಾಣಿಸಲು ಸಿದ್ಧವಿಲ್ಲ ಎಂದು ಈಗಾಗಲೇ ತಂಡ ಹೇಳಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಬಾಂಗ್ಲಾದೇಶವನ್ನು ಬಹಿಷ್ಕಾರ ಮಾಡಿರುವುದನ್ನು ಟೀಕಿಸಿದ ಬಳಿಕ ವಿಶ್ವಕಪ್‌ಗೆ ಪಾಕ್ ತಂಡವನ್ನು ಘೋಷಣೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರೆಹಮಾನ್ ಅವರನ್ನು ಬಿಸಿಸಿಐ ಆದೇಶದ ಮೇರೆಗೆ ಐಪಿಎಲ್ ತಂಡ ಕೆಕೆಆರ್‌ನಿಂದ ಕೈಬಿಟ್ಟ ನಂತರ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಬಾಂಗ್ಲಾದೇಶ ಭಾರತದಲ್ಲಿ ಟಿ-20 ವಿಶ್ವಕಪ್ ಆಡಳು ನಿರಾಕರಿಸಿತ್ತು. ಈಗ ಟೂರ್ನಿಯಿಂದಲೇ ತಂಡವನ್ನು ಹೊರ ಹಾಕಲಾಗಿದೆ.

ಪಾಕಿಸ್ತಾನವು ಬಾಂಗ್ಲಾದೇಶದ ಪಂದ್ಯಗಳನ್ನು ಆಯೋಜಿಸಲು ಮುಂದಾಗಿತ್ತು ಮತ್ತು ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವ ಬಾಂಗ್ಲಾದೇಶದ ಬೇಡಿಕೆಯನ್ನು ಬೆಂಬಲಿಸಿತ್ತು. ಆದರೆ ಐಸಿಸಿ ಆ ಪ್ರಸ್ತಾಪವನ್ನು ತಿರಸ್ಕರಿಸಿತ್ತು.

ಈ ಎಲ್ಲಾ ಬೆಳವಣಿಗೆ ಬಳಿಕ ಭಾನುವಾರ ಲಾಹೋರ್‌ನ ಗಡ್ಡಾಫಿ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಸಿಬಿಯ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಸದಸ್ಯ ಅಕಿಬ್ ಜಾವೇದ್ ಮತ್ತು ವೈಟ್-ಬಾಲ್ ಮುಖ್ಯ ತರಬೇತುದಾರ ಮೈಕೆಲ್ ಜೇಮ್ಸ್ ಹೆಸನ್ ವಿಶ್ವಕಪ್‌ಗೆ ತಂಡವನ್ನು ಘೋಷಿಸಿದರು.

ಮುಂದಿನ ವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯಲ್ಲಿರುವ ಆಟಗಾರರ ಅನೇಕರು ಟಿ-20 ವಿಶ್ವಕಪ್ ತಂಡದಲ್ಲಿಯೂ ಸ್ಥಾನ ಪಡೆದಿದ್ದಾರೆ. ಲಾಹೋರ್‌ನಲ್ಲಿ ಜನವರಿ 29 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಸರಣಿಗೆ ವೇಗಿ ಮೊಹಮ್ಮದ್ ವಾಸಿಮ್ ಜೂನಿಯರ್ ಅವರನ್ನು ಮಾತ್ರ ತಂಡದಿಂದ ಕೈಬಿಡಲಾಗಿದೆ.

ಸ್ಪಿನ್ ಬೌಲಿಂಗ್ ಆಲ್ರೌಂಡರ್‌ಗಳಾದ ಮೊಹಮ್ಮದ್ ನವಾಜ್, ಶಾದಾಬ್ ಖಾನ್ ಮತ್ತು ಸೈಮ್ ಅಯೂಬ್ ಜೊತೆಗೆ ಇಬ್ಬರು ವಿಶೇಷ ಸ್ಪಿನ್ನರ್ನ್‌ಗಳಾದ ಅಬ್ರಾರ್ ಅಹ್ಮದ್ ಮತ್ತು ಉಸ್ಮಾನ್ ತಾರಿಕ್ ಅವರನ್ನು ಸೇರಿಸಿಕೊಳ್ಳಲಾಗಿದೆ.

ಹಾರ್ಡ್ ಹಿಟ್ಟರ್ ಖ್ವಾಜಾ ನಫಾಯ್, ನಾಯಕ ಆಘಾ, ಫಹೀಮ್ ಅಶ್ರಫ್, ಖ್ವಾಜಾ ಮೊಹಮ್ಮದ್ ನಫಾಯ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ಸಾಹಿಬ್ಜಾದಾ ಫರ್ಹಾನ್ ಮತ್ತು ಉಸ್ಮಾನ್ ತಾರಿಕ್ ಮೊದಲ ಬಾರಿಗೆ ಪಂದ್ಯಾವಳಿಯಲ್ಲಿ ಆಡಲಿದ್ದಾರೆ.

ಪಾಕಿಸ್ತಾನ ತಂಡ ಹೀಗಿದೆ

  • ಸಲ್ಮಾನ್ ಅಲಿ ಆಗಾ (ನಾಯಕ)
  • ಅಬ್ರಾರ್ ಅಹ್ಮದ್
  • ಬಾಬರ್ ಅಜಮ್
  • ಫಹೀಮ್ ಅಶ್ರಫ್
  • ಫಖರ್ ಜಮಾನ್
  • ಖ್ವಾಜಾ ಮೊಹಮ್ಮದ್ ನಫಾಯ್ (ವಿಕೆಟ್ ಕೀಪರ್)
  • ಮೊಹಮ್ಮದ್ ನವಾಜ್
  • ಮೊಹಮ್ಮದ್ ಸಲ್ಮಾನ್ ಮಿರ್ಜಾ
  • ನಸೀಮ್ ಶಾ
  • ಸಾಹಿಬ್ಜಾದಾ ಫರ್ಹಾನ್ (ವಿಕೆಟ್ ಕೀಪರ್)
  • ಸೈಮ್ ಅಯೂಬ್
  • ಶಾಹೀನ್ ಶಾ ಅಫ್ರಿದಿ
  • ಶಾದಾಬ್ ಖಾನ್
  • ಉಸ್ಮಾನ್ ಖಾನ್ (ವಿಕೆಟ್ ಕೀಪರ್)
  • ಉಸ್ಮಾನ್ ತಾರಿಕ್

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular