HomeLatest Newsಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ಚರ್ಚೆಗೆ ಬರಲಿ: ಅವರೇ ಡೇಟ್ ಫಿಕ್ಸ್ ಮಾಡಲಿ; ಕುಮಾರಸ್ವಾಮಿಗೆ...

ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ಚರ್ಚೆಗೆ ಬರಲಿ: ಅವರೇ ಡೇಟ್ ಫಿಕ್ಸ್ ಮಾಡಲಿ; ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿ ಸವಾಲು

ಬೆಂಗಳೂರು: ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಜತೆ ಚರ್ಚೆಗೆ ಸಿದ್ಧನಿದ್ದೇನೆ. ಅವರು ಮುಖ್ಯಮಂತ್ರಿಯಾಗಿದ್ದಾಲೇ ಅವರ ಸವಾಲನ್ನು ಸ್ವೀಕಾರ ಮಾಡಿದ್ದೇನೆ. ಈಗಲೂ ಸಹ ಬಹಳ ನಮ್ರತೆಯಿಂದ ಅವರ ಸವಾಲು ಸ್ವೀಕರಿಸುತ್ತೇನೆ. ಚರ್ಚೆಗೆ ಬರಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕನಕಪುರದ ದೊಡ್ಡ ಆಲಹಳ್ಳಿಯಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಡದಿ ಟೌನ್ ಶಿಪ್ ಯೋಜನೆ ವಿಚಾರವಾಗಿ ಡಿ.ಕೆ. ಸಹೋದರರು ನನ್ನ ಜೊತೆ ಚರ್ಚೆ ಬರಲಿ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ, ಕುಮಾರಸ್ವಾಮಿ ಅವರು ಯಾವತ್ತು ಚರ್ಚೆಗೆ ಸಿದ್ಧ ಎಂದು ಹೇಳುವರೋ ಅಂದು ಚರ್ಚೆ ಮಾಡಲು ನಾನು ತಯಾರಿದ್ದೇನೆ. ಮಾಧ್ಯಮಗಳೇ ದಿನಾಂಕ ನಿಗದಿ ಮಾಡಲಿ. ರಾಮಮಂದಿರದ ಮುಂದೆ ಪ್ರಶ್ನೆ ಕೇಳಿದ್ದೀರಿ. ನಾನು ಇದೇ ರಾಮ ಮಂದಿರದಲ್ಲಿ ಕುಳಿತು, ನುಡಿದಂತೆ ನಡೆಯುತ್ತೇನೆ. ಪೂರ್ವನಿಯೋಜಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಈ ಚರ್ಚೆಯ ದಿನಾಂಕದ ಬಗ್ಗೆ ಮೂರು ದಿನ ಮುಂಚಿತವಾಗಿ ತಿಳಿಸಿ, ನಾನು ಚರ್ಚೆಗೆ ಬರುತ್ತೇನೆ ಎಂದರು.

ಕುಮಾರಸ್ವಾಮಿ ಅವರು ರಾಜಕಾರಣ ಮಾಡಬೇಕು ಮಾಡುತ್ತಿದ್ದಾರೆ. ಯೋಜನೆಯನ್ನು ನಾನು ಮಾಡಿದ್ದಲ್ಲ, ಅವರೇ ಮಾಡಿದ್ದು. ರೈತರಿಗೆ 800 ಅಡಿ ಭೂಮಿಯನ್ನು ನೀಡುತ್ತೇನೆ ಎಂದು ಭರವಸೆ ಕೊಟ್ಟಿದ್ದೆ ಎಂದು ಅವರೇ ಹೇಳಿದ್ದಾರೆ. ಅವರು ಹೇಳಿದ್ದನ್ನು ನಾವು ಈಗ ಮುಂದುವರೆಸುತ್ತಿದ್ದೇವೆ ಅಷ್ಟೇ ಎಂದರು‌.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಲ್ಲಿ ನಾನು ಹಾಗೂ ಕುಮಾರಸ್ವಾಮಿ ಇಬ್ಬರೂ ಶಾಶ್ವತವಲ್ಲ. ಆದರೆ ನಾವು ತೆಗೆದುಕೊಂಡ ತೀರ್ಮಾನ ಶಾಶ್ವತವಾಗಿ ಉಳಿಯುತ್ತದೆ. ನಾನು ಹಾಗೂ ಅವರು ಇಲ್ಲದೇ ಹೋದರೂ ಯೋಜನೆಯಿಂದ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ. ಮುಂದಿನ ಜನಾಂಗ ನಮ್ಮನ್ನು ನೆನಪಿಸಿಕೊಳ್ಳಲಿದೆ. ನನ್ನ‌ ಕ್ಷೇತ್ರದ ರಸ್ತೆಗಳ ಅಗಲೀಕರಣ ಮಾಡಲಾಗಿದೆ. ಇದಕ್ಕೆ ಎಷ್ಟು ಪರಿಹಾರ ದೊರಕಿದೆ ಎಂದು ದೊಡ್ಡಆಲಹಳ್ಳಿ, ಸಾತನೂರು, ಕನಕಪುರದವರನ್ನು ಕೇಳಿ. ದೊಡ್ಡ ಆಲಹಳ್ಳಿಯಲ್ಲಿ ಅಡಿಗೆ 1,500 ರೂಪಾಯಿ ಪರಿಹಾರ ಕೊಡಿಸಿದ್ದೇನೆ. ನಗರ ಭಾಗದ ಸೌಲಭ್ಯಗಳನ್ನು ಇಲ್ಲಿ ಮಾಡಿಕೊಡಲಾಗಿದೆ. ನಾನು ಮಾಧ್ಯಮಗಳಿಗೆ ಉತ್ತರಿಸುವ ಬದಲು ನೇರವಾಗಿ ಕುಮಾರಸ್ವಾಮಿ ಅವರಿಗೇ ಉತ್ತರ ನೀಡುತ್ತೇನೆ ಎಂದರು.

ಇನ್ನು ಹೆಚ್.ಡಿ.ಕೆ ರಾಜ್ಯ ರಾಜಕಾರಣಕ್ಕೆ ಬನ್ನಿ ಎಂದು ಜನ ಅಪೇಕ್ಷಿಸುತ್ತಿದ್ದಾರೆ ಎಂದು ಹೇಳಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ, ಬರುವವರನ್ನು ಬೇಡ ಎನ್ನಲು ಆಗುತ್ತದೆಯೇ? ಈಗಲೂ ರಾಜಕಾರಣದಲ್ಲಿ ಇದ್ದಾರೆ ಅಲ್ಲವೇ. ರಾಷ್ಟ್ರ ಏನು, ರಾಜ್ಯ ಏನು ಎಂದು ನನಗೆ ಗೊತ್ತಿಲ್ಲ ಎಂದರು.

For Latest News Updates, Join Our Whatsapp Community🚩
RELATED ARTICLES

Most Popular