HomeIndiaಭಾರತದ ಎಸ್‌‍-400 ಕ್ಷಿಪಣಿ ಮಾಹಿತಿಗೆ ಪರದಾಡಿತ್ತು ಪಾಕ್‌: ಜೀತೇಂದ್ರ ಮಿಶ್ರಾ

ಭಾರತದ ಎಸ್‌‍-400 ಕ್ಷಿಪಣಿ ಮಾಹಿತಿಗೆ ಪರದಾಡಿತ್ತು ಪಾಕ್‌: ಜೀತೇಂದ್ರ ಮಿಶ್ರಾ

ನವದೆಹಲಿ-ಭಾರತದಲ್ಲಿ ಎಸ್‌‍-400 ಕ್ಷಿಪಣಿಗಳನ್ನು ಎಲ್ಲಿ ನಿಯೋಜನೆ ಮಾಡಲಾಗಿದೆಯೇ ಎಂಬ ಬಗ್ಗೆ ತಿಳಿದುಕೊಳ್ಳಲು ಪಾಕಿಸ್ತಾನ ಹರ ಸಾಹಸಪಟ್ಟಿತ್ತು ಎನ್ನುವುದನ್ನು ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರಾ ಬಹಿರಂಗಗೊಳಿಸಿದ್ದಾರೆ.

ಎಸ್-400 ರಚನೆ ಹಾಗೂ ಕಾರ್ಯವಿಧಾನ

ಪಹಲ್ಗಾಮ್‌ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ್ದ ಆಪರೇಷನ್‌ ಸಿಂರ್ಧೂ ಕಾರ್ಯಾಚರಣೆಯ ಸಮಯದಲ್ಲಿ ರಷ್ಯಾ ನಿರ್ಮಿತ ಎಸ್‌‍-400 ವಾಯು ರಕ್ಷಣಾ ವ್ಯವಸ್ಥೆಯ ಬಲದಿಂದಾಗಿ ಪಾಕಿಸ್ತಾನಿ ಯುದ್ಧ ವಿಮಾನಗಳು ಭಾರತೀಯ ಗಡಿಯ 200 ಕಿಲೋಮೀಟರ್‌ ವ್ಯಾಪ್ತಿಯ ಸಮೀಪಕ್ಕೂ ಬರಲು ಸಾಧ್ಯವಾಗಲಿಲ್ಲ ಎಂದು ಅವರು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತದಲ್ಲಿ ಎಸ್‌‍-400 ಕ್ಷಿಪಣಿ ಸಿಸ್ಟಂ ಎಲ್ಲಿ ನಿಯೋಜನೆಗೊಂಡಿವೆ ಎಂಬುದನ್ನು ತಿಳಿಯಲು ಪಾಕಿಸ್ತಾನ ಹರಸಾಹಸ ಪಟ್ಟಿತ್ತು. ಅದಕ್ಕಾಗಿ ಭಾರತದಲ್ಲಿರುವ ತನ್ನ ಗೂಢಚಾರರು ಹಾಗೂ ಸ್ಲೀಪರ್‌ ಸೆಲ್‌ಗಳನ್ನು ಸಕ್ರಿಯಗೊಳಿಸಿತ್ತು ಎಂದು ಜೀತೇಂದ್ರ ಮಿಶ್ರಾ ಬಹಿರಂಗಪಡಿಸಿದ್ದಾರೆ.

ಎಸ್‌‍-400 ಸಿಸ್ಟಂ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ಪಾಕಿಸ್ತಾನ ತನಗೆ ತಿಳಿದಿದ್ದ ಎಲ್ಲಾ ತಂತ್ರಗಳನ್ನು ಬಳಸಿತ್ತು. ಇತರ ದೇಶಗಳಿಂದ ಉಪಗ್ರಹ ಆಧಾರಿತ ಮಾಹಿತಿಯ ನೆರವನ್ನೂ ಪಡೆಯುತ್ತಿತ್ತು. ಪ್ರತಿ ಬಾರಿ ಅವರ ವಿಮಾನಗಳು ಆಗಸಕ್ಕೇರಿದಾಗಲೂ ಎಸ್‌‍-400 ಅವುಗಳನ್ನು ಹೊಡೆದುರುಳಿಸುತ್ತಿತ್ತು. ಹೀಗಾಗಿ, ಭಾರತದಲ್ಲಿರುವ ತಮ್ಮ ಸ್ಲೀಪರ್‌ ಸೆಲ್‌ಗಳನ್ನು ಅವರು ಸಕ್ರಿಯಗೊಳಿಸಿದ್ದರು ಎಂದು ಏರ್‌ ಮಾರ್ಷಲ್‌ ಹೇಳಿದ್ದಾರೆ.

ಪಾಕಿಸ್ತಾನದ ಪರಿಹಾರ ಪ್ರಯತ್ನಗಳು

ಮೂಲಗಳ ಪ್ರಕಾರ ಚೀನಾ ದೇಶವು ಪಾಕಿಸ್ತಾನಕ್ಕೆ ಭಾರತದ ಬಹಳ ಮುಖ್ಯ ಮಿಲಿಟರಿ ತಾಣಗಳ ಮಾಹಿತಿ ನೀಡುತ್ತಿತ್ತು. ಆಗಸದಲ್ಲಿ ಪಾಕಿಸ್ತಾನದ ರೇಡಾರ್‌ ವಿಮಾನವನ್ನು ಹೊಡೆದುರುಳಿಸಿದ ಘಟನೆಯನ್ನು ನೆನಪಿಸಿಕೊಂಡ ಜೀತೇಂದ್ರ ಮಿಶ್ರಾ, ನನ್ನ ಬಳಿ ಎಸ್‌‍-400 ಆಪರೇಟರ್‌ ದಾಳಿ ಮಾಡಲೇ? ಎಂದು ಕೇಳಿದಾಗ, ದಾಳಿ ಮಾಡಿ ಎಂದು ಆದೇಶಿಸಿದೆ. ನಾವು ಸುಮಾರು 314 ಕಿಲೋಮೀಟರ್‌ ದೂರದಲ್ಲಿದ್ದ ಪಾಕಿಸ್ತಾನದ ವಿಮಾನವನ್ನು ಹೊಡೆದುರುಳಿಸಿದೆವು. ಇದು ವಿಶ್ವದ ಇತಿಹಾಸದಲ್ಲೇ ಸರ್ಫೇಸ್‌‍-ಟು-ಏರ್‌ (ನೆಲದಿಂದ ಆಗಸಕ್ಕೆ) ಕ್ಷಿಪಣಿಯೊಂದರಿಂದ ನಡೆದ ಅತ್ಯಂತ ದೀರ್ಘ ಅಂತರದ ಯಶಸ್ವಿ ದಾಳಿಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular