HomeLatest Newsಬಿಸಿಸಿಐ ಮೌನಕ್ಕೆ ಕಂಗೆಡದ ಅನಾಯಾ ಬಂಗಾರ್: ಆಸ್ಟ್ರೇಲಿಯಾ ಕ್ರಿಕೆಟ್ ನೆರವಿನೊಂದಿಗೆ ಹೊಸ ಇನಿಂಗ್ಸ್ ಆರಂಭ

ಬಿಸಿಸಿಐ ಮೌನಕ್ಕೆ ಕಂಗೆಡದ ಅನಾಯಾ ಬಂಗಾರ್: ಆಸ್ಟ್ರೇಲಿಯಾ ಕ್ರಿಕೆಟ್ ನೆರವಿನೊಂದಿಗೆ ಹೊಸ ಇನಿಂಗ್ಸ್ ಆರಂಭ

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಮಾಜಿ ಕೋಚ್ ಸಂಜಯ್ ಬಂಗಾರ್ ಅವರ ಪುತ್ರಿ ಅನಾಯಾ ಬಂಗಾರ್ ತಮ್ಮ ಜೀವನದ ಅತ್ಯಂತ ಸವಾಲಿನ ಘಟ್ಟವನ್ನು ದಾಟಿ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಲು ಸಜ್ಜಾಗಿದ್ದಾರೆ. 2022ರಲ್ಲಿ ಆರಂಭವಾದ ಲಿಂಗ ಪರಿವರ್ತನೆ ಪ್ರಕ್ರಿಯೆಯು ಈ ವರ್ಷದ ಮಾರ್ಚ್‌ನಲ್ಲಿ ಪೂರ್ಣಗೊಂಡಿದ್ದು, ಪ್ರಸ್ತುತ ಟ್ರಾನ್ಸ್‌-ಅಥ್ಲೀಟ್ ಆಗಿ ತಮ್ಮ ಹೊಸ ಕ್ರೀಡಾ ಪಯಣವನ್ನು ಶುರು ಮಾಡುತ್ತಿದ್ದಾರೆ.

ತಮ್ಮ ನೆಚ್ಚಿನ ಆಟವಾದ ಕ್ರಿಕೆಟ್‌ನಲ್ಲಿ ಸಕ್ರಿಯರಾಗಲು ಅನಾಯಾ ಆರಂಭದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಸಂಪರ್ಕಿಸಿದ್ದರು. ಆದರೆ ಭಾರತೀಯ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆ ಸಿಗದೆ ಸಂಪೂರ್ಣ ಮೌನ ಎದುರಾಯಿತು. ಈ ನಿರಾಸೆಯ ನಡುವೆಯೂ ಧೃತಿಗೆಡದ ಅವರು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಸಮಗ್ರತಾ ವಿಭಾಗವನ್ನು ಸಂಪರ್ಕಿಸಿದರು. ಟ್ರಾನ್ಸ್‌ಜೆಂಡರ್ ಆಟಗಾರರಿಗೆ ಸಂಬಂಧಿಸಿದಂತೆ ಸ್ಪಷ್ಟ ನೀತಿ ಹೊಂದಿರುವ ಆಸ್ಟ್ರೇಲಿಯಾ ಕ್ರಿಕೆಟ್, ಅನಾಯಾ ಅವರಿಗೆ ಕಮ್ಯುನಿಟಿ ಷೀಲ್ಡ್ ಮಟ್ಟದಲ್ಲಿ ಮಹಿಳಾ ಕ್ರಿಕೆಟ್ ಆಡಲು ಹಸಿರು ನಿಶಾನೆ ತೋರಿಸಿದೆ.

ಈ ಕುರಿತು ಮಾತನಾಡಿರುವ ಎಡಗೈ ಸ್ಪcondition ಬೌಲಿಂಗ್ ಆಲ್ ರೌಂಡರ್ ಅನಾಯಾ, ಲಿಂಗ ಪರಿವರ್ತನೆಯ ಹಂತದಲ್ಲಿ ಎದುರಾದ ಮಾನಸಿಕ ಒಂಟಿತನ ಮತ್ತು ಸವಾಲುಗಳನ್ನು ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಕ್ರಿಕೆಟ್ ಮೈದಾನಕ್ಕೆ ಮತ್ತೆ ಮರಳುವ ಭರವಸೆಯೇ ಇರಲಿಲ್ಲ. ಕುಟುಂಬದ ಬೆಂಬಲ ಮತ್ತು ತಮ್ಮ ಆತ್ಮವಿಶ್ವಾಸದ ಬಲದಿಂದ ಈ ಕಠಿಣ ಹಂತವನ್ನು ದಾಟಲು ಸಾಧ್ಯವಾಯಿತು ಎಂದು ಅವರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಸಿಸಿಐನಿಂದ ಸೂಕ್ತ ಸ್ಪಂದನೆ ಸಿಗದಿದ್ದರೂ, ಮುಂಬರುವ ದಿನಗಳಲ್ಲಿ ಭಾರತದಲ್ಲೂ ಟ್ರಾನ್ಸ್‌-ಅಥ್ಲೀಟ್‌ಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರೀಡಾ ನೀತಿಗಳನ್ನು ರೂಪಿಸುವ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಬಿಸಿಸಿಐಗೆ ಅಗತ್ಯವಿರುವ ಸಲಹೆ ಮತ್ತು ಸಹಕಾರ ನೀಡಲು ತಾವು ಸಿದ್ಧರಿರುವುದಾಗಿ ಹೇಳಿದ್ದಾರೆ.

ಸದ್ಯ ಆಸ್ಟ್ರೇಲಿಯಾದ ಸ್ಥಳೀಯ ಕ್ಲಬ್ ಕ್ರಿಕೆಟ್‌ನಲ್ಲಿ ಆಡಲು ಸಿದ್ಧತೆ ನಡೆಸುತ್ತಿರುವ ಅನಾಯಾ, ಉತ್ತಮ ಪ್ರದರ್ಶನ ನೀಡುವ ಮೂಲಕ ಭವಿಷ್ಯದಲ್ಲಿ ಮಹಿಳಾ ಬಿಗ್ ಬ್ಯಾಶ್ ಲೀಗ್‌ ಪ್ರವೇಶಿಸುವ ಗುರಿ ಹೊಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular