ನವದೆಹಲಿ- ದೇಶದಲ್ಲಿರುವ ಎಕ್‌್ಸಪ್ರೆಸ್ ವೇ ಗಳ ಗುಣಮಟ್ಟ ಪರಿಶೀಲನೆಗೆ ಎಂಜಿನಿಯರಿಂಗ್ ಸಲಹಾ ಸಂಸ್ಥೆಯಾಗಿರುವ ಎಂಜಿನಿಯರ್ ಇಂಡಿಯಾ ಲಿಮಿಟೆಡ್ ಸಂಸ್ಥೆಯನ್ನು ನಿಯೋಜನೆ ಮಾಡಿ ರಸ್ತೆ ಸಾರಿಗೆ ಸಚಿವಾಲಯ ಆದೇಶ ಹೊರಡಿಸಿದೆ.
ಹೆದ್ದಾರಿ, ಎಕ್‌್ಸಪ್ರೆಸ್‌ವೇಗಳ ಕಳಪೆ ಗುಣಮಟ್ಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ರಸ್ತೆ ಸಾರಿಗೆ ಸಚಿವಾಲಯ ಹೆದ್ದಾರಿ, ಎಕ್‌್ಸಪ್ರೆಸ್‌ವೇ ಗುಣಮಟ್ಟ ಪರಿಶೀಲನೆಗೆ ಎಂಜಿನಿಯರಿಂಗ್ ಸಲಹಾ ಸಂಸ್ಥೆಯಾದ ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ನಿಯೋಜಿಸಿದೆ.
ಎಕ್‌್ಸಪ್ರೆಸ್‌ವೇಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ಕಾಮಗಾರಿಯ ಕಳಪೆ ಗುಣಮಟ್ಟ ಮತ್ತು ರಸ್ತೆಗಳು ಬೇಗನೆ ಹಾಳಾಗುತ್ತಿರುವ ಬಗ್ಗೆ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಸ್ತೆ ಸಾರಿಗೆ ಸಚಿವಾಲಯವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಎಂಜಿನಿಯರ್ ಇಂಡಿಯಾ ಲಿಮಿಟೆಡ್ ನಿಯೋಜನೆ
ಸುಮಾರು 5,000 ಕಿಲೋಮೀಟರ್ ಉದ್ದದ ಎಕ್‌್ಸಪ್ರೆಸ್‌ವೇ ಮತ್ತು ಹೆದ್ದಾರಿ ಕಾಮಗಾರಿಗಳ ಆರಂಭದಿಂದ ಮುಕ್ತಾಯದವರೆಗೆ ಪರಿಶೀಲನೆ ಮತ್ತು ಪರೀಕ್ಷೆ ನಡೆಸಲು ಸಚಿವಾಲಯವು ಈ ಸಂಸ್ಥೆಯನ್ನು ಆರಂಭದಲ್ಲಿ ಮೂರು ವರ್ಷಗಳ ಅವಧಿಗೆ ನಿಯೋಜಿಸಲಾಗುತ್ತದೆ.
ಪೆಟ್ರೋಲಿಯಂ ಸಚಿವಾಲಯದ ಅಡಿಯಲ್ಲಿ ಬರುವ ಮುಖ್ಯವಾಗಿ ಎಕ್‌್ಸಪ್ರೆಸ್‌ವೇಗಳು, ಆರು ಪಥದ ಮತ್ತು ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟ ಲೆಕ್ಕಪರಿಶೋಧನೆಯನ್ನು (ಆಡಿಟ್) ನಡೆಸಲಿದೆ.ಪ್ರಸ್ತುತ ಸ್ವತಂತ್ರ ಲೆಕ್ಕಪರಿಶೋಧಕರ ಮೂಲಕ ಥರ್ಡ್ ಪಾರ್ಟಿ ಗುಣಮಟ್ಟ ತಪಾಸಣೆಗಳನ್ನು ನಡೆಸಲಾಗುತ್ತಿದೆ. ಇವರು ಹೆಚ್ಚಾಗಿ ಎನ್‌ಎಚ್‌ಎಐ ಮತ್ತು ಇತರ ಸಂಸ್ಥೆಗಳಿಂದ ಪಟ್ಟಿಗೆ ಸೇರಿಸಲ್ಪಟ್ಟ ನಿವೃತ್ತ ಸರ್ಕಾರಿ ಎಂಜಿನಿಯರ್‌ಗಳಾಗಿದ್ದಾರೆ.
ಹಿನ್ನೆಲೆಯ ಕುರಿತು ಮಾಹಿತಿ
ಈ ಹಿಂದೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ದೇಶದ ಮೊದಲ ಹೆಗ್ಗುರುತಿನ ಹೆದ್ದಾರಿ ಅಭಿವೃದ್ಧಿ ಯೋಜನೆಯಾಗಿದ್ದ ಸುವರ್ಣ ಚತುಷ್ಪತ ನಿರ್ಮಾಣದ ಸಂದರ್ಭದಲ್ಲಿಯೂ ಇಐಎಲ್ ಸಂಸ್ಥೆಯು ಮೂರನೇ ವ್ಯಕ್ತಿ ಗುಣಮಟ್ಟ ತಪಾಸಣಾ ಕಾರ್ಯವನ್ನು ನಿರ್ವಹಿಸಿತ್ತು.
ಇತ್ತೀಚಿನ ವರ್ಷಗಳಲ್ಲಿ, ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ಕಳಪೆ ಗುಣಮಟ್ಟದ ಹೆಚ್ಚುತ್ತಿರುವುದು ಸಾರ್ವಜನಿಕರ ತೀವ್ರ ಟೀಕೆಗೆ ಗುರಿಯಾಗಿದ್ದು, ಸಚಿವಾಲಯಕ್ಕೆ ತಲೆನೋವಾಗಿ ಪರಿಣಮಿಸಿದೆ.ಪ್ರಸ್ತುತ ಇರುವ ಸ್ವತಂತ್ರ ಲೆಕ್ಕಪರಿಶೋಧಕರಿಂದ ಬಂದ ಕಳಪೆ ಪ್ರತಿಕ್ರಿಯೆ ಮತ್ತು ಲೋಪಗಳ ಹಿನ್ನೆಲೆಯಲ್ಲಿ ಈ ಹೊಸ ಕ್ರಮ ಅಗತ್ಯವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಐಎಲ್ ಸಂಸ್ಥೆಗೆ 770 ಕಿ.ಮೀ ಉದ್ದದ ಎಕ್‌್ಸಪ್ರೆಸ್‌ವೇಗಳು, 2,200 ಕಿ.ಮೀ ಉದ್ದದ ಆರು ಪಥದ ಹೆದ್ದಾರಿಗಳು ಹಾಗೂ ತಲಾ 1,000 ಕಿ.ಮೀ ಉದ್ದದ ನಾಲ್ಕು ಮತ್ತು ಎರಡು ಪಥಗಳ ರಾಷ್ಟ್ರೀಯ ಹೆದ್ದಾರಿಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ವಹಿಸಲಾಗುತ್ತದೆ.

