HomeLatest Newsಜಿಮ್ ಬೇಡ, ಡಯಟ್ ಬೇಡ ರಾತ್ರಿ ನೆನೆಸಿ ಬೆಳಗ್ಗೆ ಈ ಗಂಜಿ ಕುಡಿದ್ರೆ ಸಾಕು: ಕರಗದ...

ಜಿಮ್ ಬೇಡ, ಡಯಟ್ ಬೇಡ ರಾತ್ರಿ ನೆನೆಸಿ ಬೆಳಗ್ಗೆ ಈ ಗಂಜಿ ಕುಡಿದ್ರೆ ಸಾಕು: ಕರಗದ ಬೊಜ್ಜು ಕೂಡ ಬೆಣ್ಣೆಯಂತೆ ಕರಗುತ್ತೆ

ಬೆಂಗಳೂರು: ನಾವೆಲ್ಲಾ ಚಿಕ್ಕಂದಿನಿಂದ ಬಿಳಿ ಅಕ್ಕಿ (White Rice) ತಿಂದೇ ಬೆಳೆದವರು. ಆದರೆ ಈಗಿನ ಕಾಲದಲ್ಲಿ 40 ದಾಟುವಷ್ಟರಲ್ಲೇ ಮೊಣಕಾಲು ನೋವು, ಸುಸ್ತು ಅಂತ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. ಇದಕ್ಕೆಲ್ಲಾ ಕಾರಣ ನಮ್ಮ ಆಹಾರ ಪದ್ಧತಿ ಈಗಿನ ಟ್ರೆಂಡ್ ಅಂದ್ರೆ ಕಂದು ಅಕ್ಕಿ (Brown Rice) ಕೂಡ ಅಲ್ಲ, ಅದಕ್ಕಿಂತಲೂ ಪವರ್‌ಫುಲ್ ಆಗಿರೋ ಕಪ್ಪು ಕವುನಿ ಅಕ್ಕಿ .

ಹಿಂದಿನ ಕಾಲದಲ್ಲಿ ಇದನ್ನು ಕೇವಲ ರಾಜಮನೆತನದವರು ಮಾತ್ರ ತಿನ್ನುತ್ತಿದ್ದರಂತೆ, ಅದಕ್ಕೇ ಇದಕ್ಕೆ ‘ನಿಷಿದ್ಧ ಅಕ್ಕಿ’ ಎಂಬ ಹೆಸರೂ ಇದೆ. ಈ ಅಕ್ಕಿಯ ವಿಶೇಷತೆ ಏನು? ಇದನ್ನು ಯಾಕೆ ತಿನ್ನಬೇಕು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಏನಿದು ಕಪ್ಪು ಕವುನಿ ಅಕ್ಕಿಯ ಮ್ಯಾಜಿಕ್?

ತಮಿಳುನಾಡಿನ ಇತಿಹಾಸದಲ್ಲಿ ಬಂಗಾರದ ಬೆಲೆ ಹೊಂದಿದ್ದ ಈ ಅಕ್ಕಿ, ಪೋಷಕಾಂಶಗಳ ಗಣಿ. ಬಿಳಿ ಅಕ್ಕಿಗಿಂತ ಇದರಲ್ಲಿ ಹೆಚ್ಚಿನ ಪ್ರಮಾಣದ ಆಂಥೋಸಯಾನಿನ್ (ಆಂಟಿ-ಆಕ್ಸಿಡೆಂಟ್) ಇರುವುದರಿಂದ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ಇದು ಬೆಸ್ಟ್ ಫ್ರೆಂಡ್!

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

70ರಲ್ಲೂ ಯುವಕರಂತೆ ಇರಲು ಇದು ಹೇಗೆ ಸಹಾಯ ಮಾಡುತ್ತೆ?

ಬಲಿಷ್ಠ ಮೂಳೆಗಳು: ವಾರಕ್ಕೆ ಅಥವಾ ತಿಂಗಳಿಗೆ ಕನಿಷ್ಠ ನಾಲ್ಕು ಬಾರಿ ಈ ಅಕ್ಕಿ ಬಳಸಿದರೆ, 70 ವರ್ಷ ದಾಟಿದರೂ ಮೊಣಕಾಲು ನೋವು ಅಥವಾ ದೇಹದ ದೌರ್ಬಲ್ಯ ನಿಮ್ಮ ಹತ್ತಿರ ಸುಳಿಯುವುದಿಲ್ಲ.

ರೋಗನಿರೋಧಕ ಶಕ್ತಿ: ಇದರಲ್ಲಿರುವ ಪ್ರೋಟೀನ್ ಮತ್ತು ವಿಟಮಿನ್‌ಗಳು ನಿಮ್ಮ ದೇಹವನ್ನು ಒಳಗಿನಿಂದ ಬಲಪಡಿಸುತ್ತವೆ.

ಜೀರ್ಣಕ್ರಿಯೆಗೆ ಸೂಪರ್: ಇದರಲ್ಲಿ ನಾರಿನಂಶ (Fiber) ಅತಿ ಹೆಚ್ಚಾಗಿರುವುದರಿಂದ ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗೆ ಇದು ಪಕ್ಕಾ ಮದ್ದು.

ತೂಕ ಇಳಿಸಬೇಕಾ? ಈ ಗಂಜಿ ಟ್ರೈ ಮಾಡಿ

ತೂಕ ಇಳಿಸಿಕೊಳ್ಳಲು ಜಿಮ್‌ನಲ್ಲಿ ಬೆವರಿಳಿಸಿ, ಅರುಚಿಕರ ಆಹಾರ ತಿಂದು ಸುಸ್ತಾಗಿದ್ದೀರಾ? ಹಾಗಿದ್ದರೆ ಕಪ್ಪು ಕವುನಿ ಅಕ್ಕಿ ಮತ್ತು ಹುರುಳಿ (Horse Gram) ಸೇರಿಸಿ ತಯಾರಿಸಿದ ಗಂಜಿ ಕುಡಿಯಿರಿ.

ಈ ಗಂಜಿ ಕುಡಿದರೆ ಹೊಟ್ಟೆಯ ಬೊಜ್ಜು ರಾಕೆಟ್ ವೇಗದಲ್ಲಿ ಕರಗುತ್ತದೆ.

ಇದು ದೇಹದ ಮೆಟಾಬಾಲಿಸಮ್ ಅನ್ನು ಎರಡು ಪಟ್ಟು ಹೆಚ್ಚಿಸುತ್ತದೆ.

ಮಧುಮೇಹ (Diabetes), ಹೃದ್ರೋಗ ಮತ್ತು ಅಲ್ಝೈಮರ್‌ನಂತಹ ಕಾಯಿಲೆಗಳನ್ನು ತಡೆಯಲು ಇದು ಸಹಕಾರಿ.

ಯಾರು ತಿನ್ನಬಹುದು?

ಇದು ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರಿಗೂ ಸೂಕ್ತ. ಪ್ರತಿದಿನ ತಿನ್ನಲು ಸಾಧ್ಯವಾಗದಿದ್ದರೂ, ವಾರಕ್ಕೊಮ್ಮೆಯಾದರೂ ಈ ಅಕ್ಕಿಯ ಗಂಜಿ ಅಥವಾ ಅನ್ನ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ನೀವು ಕೊಡುವ ಬೆಸ್ಟ್ ಗಿಫ್ಟ್

ಮ್ಯಾಜಿಕ್ ಗಂಜಿ ತಯಾರಿಸಲು ಬೇಕಾಗುವ ಸಾಮಗ್ರಿಗಳು:

ಕಪ್ಪು ಕವುನಿ ಅಕ್ಕಿ: 1 ಕಪ್

ನೀರು: 4 ಕಪ್

ಈರುಳ್ಳಿ: 1 (ಸಣ್ಣಗೆ ಹೆಚ್ಚಿದ್ದು)

ಹಸಿ ಮೆಣಸಿನಕಾಯಿ: 3

ಕ್ಯಾರೆಟ್: 1 (ತುರಿದದ್ದು)

ಬೆಳ್ಳುಳ್ಳಿ: 6 ಎಸಳು (ಜಜ್ಜಿದ್ದು)

ಜೀರಿಗೆ: 1 ಚಮಚ

ರುಚಿಗೆ ತಕ್ಕಷ್ಟು ಉಪ್ಪು

ತೆಂಗಿನ ತುರಿ & ಕೊತ್ತಂಬರಿ ಸೊಪ್ಪು: ಒಂದು ಹಿಡಿ

ತಯಾರಿಸುವ ಸರಳ ವಿಧಾನ:

ಮೊದಲು ಅಕ್ಕಿಯನ್ನು ತೊಳೆದು 8 ಗಂಟೆಗಳ ಕಾಲ 4 ಕಪ್ ನೀರಿನಲ್ಲಿ ನೆನೆಸಿ.

ಮರುದಿನ ಆ ನೀರನ್ನು ಪ್ರತ್ಯೇಕವಾಗಿ ಎತ್ತಿಟ್ಟು, ಅಕ್ಕಿಯನ್ನು ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ.

ಕುಕ್ಕರ್‌ಗೆ ರುಬ್ಬಿದ ಅಕ್ಕಿ, ಎತ್ತಿಟ್ಟ ನೀರು, ಈರುಳ್ಳಿ, ಹಸಿಮೆಣಸು, ಕ್ಯಾರೆಟ್, ಜಜ್ಜಿದ ಬೆಳ್ಳುಳ್ಳಿ, ಜೀರಿಗೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.

ಮಧ್ಯಮ ಉರಿಯಲ್ಲಿ 3 ರಿಂದ 4 ವಿಸಲ್ ಕೂಗಿಸಿ ಚೆನ್ನಾಗಿ ಬೇಯಲು ಬಿಡಿ.

ಹಬೆ ಆರಿದ ಮೇಲೆ ತೆಂಗಿನ ತುರಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿದರೆ ಬಿಸಿಬಿಸಿಯಾದ ಪೌಷ್ಟಿಕ ಗಂಜಿ ಸವಿಯಲು ಸಿದ್ಧ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular