HomeJobsಹೊರೆಯಾದ ಜಿಬಿಎ: ಹುದ್ದೆಗಳ ಸಂಖ್ಯೆ ಕಡಿತಕ್ಕೆ ಅಧಿಕಾರಿಗಳ ತಯಾರಿ

ಹೊರೆಯಾದ ಜಿಬಿಎ: ಹುದ್ದೆಗಳ ಸಂಖ್ಯೆ ಕಡಿತಕ್ಕೆ ಅಧಿಕಾರಿಗಳ ತಯಾರಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಕಾಂಗ್ರೆಸ್ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಎಂದು ಬದಲಾವಣೆ ಮಾಡಿದೆ. ಬೆಂಗಳೂರು ನಗರವನ್ನು 5 ನಗರ ಪಾಲಿಕೆಯನ್ನಾಗಿ ಮಾಡಿದ್ದು ಒಟ್ಟು ವಾರ್ಡ್‌ಗಳು 369. 

ಆದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸರ್ಕಾರಕ್ಕೆ ಹೊರೆಯಾಗಿದೆ. ಹೌದು 5 ನಗರ ಪಾಲಿಕೆಗಳ ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗಿದ್ದು, ಇದನ್ನು ಕಡಿತಗೊಳಿಸುವಂತೆ ಸೂಚನೆ ನೀಡಲಾಗಿದೆ.

5 ನಗರ ಪಾಲಿಕೆಗಳಿಗಾಗಿ ಐಎಎಸ್, ಕೆಎಎಸ್ ಸೇರಿದಂತೆ ಸುಮಾರು 6,500 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇಮಕ ಮಾಡುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಜಿಬಿಎ ಹೊಸ ಸಾಮಾನ್ಯ ಕೇಡರ್ ಮತ್ತು ನೇಮಕಾತಿ ನಿಯಮವನ್ನು ಪುನರ್ ರೂಪಿಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪ್ರಸ್ತಾವನೆಯ ಅನ್ವಯ ಮಾಸಿಕ 50 ಕೋಟಿ ರೂ.ಗಳ ಆರ್ಥಿಕ ಹೊರೆಯಾಗುತ್ತಿತ್ತು. ಇದರಲ್ಲಿ ಹೆಚ್ಚಿನ ಪಾಲು ಸಿಬ್ಬಂದಿಗಳ ವೇತನಕ್ಕಾಗಿಯೇ ವ್ಯಯವಾಗುತ್ತಿತ್ತು. ಸರ್ಕಾರಿ ಖಜಾನೆಯ ಮೇಲಿನ ಹೆಚ್ಚಿನ ಹೊರೆಯನ್ನು ಉಲ್ಲೇಖಿಸಿ ಸರ್ಕಾರ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಂಖ್ಯೆ ಹಾಗೂ ಹಣಕಾಸಿನ ಲೆಕ್ಕಾಚಾರವನ್ನು ಮರು ಪರಿಶೀಲಿಸುವಂತೆ ಜಿಬಿಎಗೆ ಸೂಚಿಸಿದೆ.

ಪೌರ ಕಾರ್ಮಿಕರು ಮತ್ತು ನೈರ್ಮಲ್ಯ ಕಾರ್ಮಿಕರನ್ನು ಹೊರತುಪಡಿಸಿ ಜಿಬಿಎ ಮತ್ತು 5 ಪಾಲಿಕೆಗಳಿಗೆ ಒಟ್ಟಾರೆಯಾಗಿ ಎ, ಬಿ, ಸಿ ಮತ್ತು ಡಿ ವೃಂದದ ಸುಮಾರು 6,500 ಅಧಿಕಾರಿಗಳು ಮತ್ತು ಸಿಬ್ಬಂದಿಯ ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು.

ಆದರೆ ರಾಜ್ಯ ಸರ್ಕಾರ ಸಿಬ್ಬಂದಿ ಸಂಖ್ಯೆ ಹೆಚ್ಚಿದೆ ಮತ್ತು ಪ್ರತಿ ತಿಂಗಳು 50 ಕೋಟಿ ರೂಪಾಯಿಗಳ ವೆಚ್ಚವು ಸರ್ಕಾರಿ ಖಜಾನೆಗೆ ದೊಡ್ಡ ಹೊರೆಯಾಗಲಿದೆ ಎಂದು ತಿಳಿಸಿದ ಹಿನ್ನಲೆಯಲ್ಲಿ ಹುದ್ದೆಗಳ ಕಡಿತಕ್ಕೆ ಮುಂದಾಗಿದೆ.

ಅಧಿಕಾರಿಗಳ ಪ್ರಕಾರ 6,500 ನೌಕರರ ನೇಮಕಾತಿಗೆ ರಾಜ್ಯ ಹಣಕಾಸು ಇಲಾಖೆಯು ಅನುಮೋದನೆ ನೀಡುವುದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಸಿಬ್ಬಂದಿಗಳ ಅಗತ್ಯತೆ, ಸಂಖ್ಯೆಯನ್ನು ಮತ್ತೊಮ್ಮೆ ಪರಿಶೀಲಿಸಲಾಗುತ್ತಿದೆ.

ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಇರುವ ಸಿಬ್ಬಂದಿಯನ್ನೇ ಸಮರ್ಪಕವಾಗಿ ಬಳಸಿಕೊಂಡು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ, ಒಟ್ಟು ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂಬುದು ಅಧಿಕಾರಿಗಳ ಮಾಹಿತಿಯಾಗಿದೆ.

ಜಿಬಿಎ ಸಿಬ್ಬಂದಿ ನೇಮಕಾತಿಗಾಗಿ ಸಿ&ಆರ್ ನಿಯಮವನ್ನು ಸಲ್ಲಿಸಿದ ತಕ್ಷಣ ಅದು ಅಂತಿಮಗೊಳ್ಳುವುದಿಲ್ಲ. ಇದು ಸಂಬಂಧಪಟ್ಟ ಸಚಿವರ ಬಳಿಗೆ ಹೋಗಲಿದೆ, ನಂತರ ಕಾನೂನು ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅನುಮೋದನೆ ಪಡೆಯಬೇಕಿದೆ. ಅಂತಿಮವಾಗಿ ರಾಜ್ಯ ಹಣಕಾಸು ಇಲಾಖೆಯು ಇದಕ್ಕೆ ಹಸಿರು ನಿಶಾನೆ ನೀಡಬೇಕಾಗುತ್ತದೆ.

ಕರ್ನಾಟಕ ಸರ್ಕಾರ ಶುಕ್ರವಾರ 11 ಸದಸ್ಯರನ್ನು ಸೇರ್ಪಡೆಗೊಳಿಸುವ ಮೂಲಕ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ಪುನರ್ ರಚನೆ ಮಾಡಿದೆ. 2025ರ ಆಗಸ್ಟ್ 26 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ 75 ಸದಸ್ಯರ ಜಿಬಿಎಯನ್ನು ರಚಿಸಿತ್ತು, ಈಗ ಆ ಸಂಖ್ಯೆಯನ್ನು 86ಕ್ಕೆ ಏರಿಸಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular