HomeLatest NewsBREAKING : ಕಲಬುರಗಿಯಲ್ಲೂ ಶಿವಾಜಿ ಮೆರವಣಿಗೆ ವೇಳೆ ಮಾರಾಮಾರಿ : ಕಟ್ಟಿಗೆ, ದೊಣ್ಣೆಗಳಿಂದ ಹೊಡೆದಾಟ.!

BREAKING : ಕಲಬುರಗಿಯಲ್ಲೂ ಶಿವಾಜಿ ಮೆರವಣಿಗೆ ವೇಳೆ ಮಾರಾಮಾರಿ : ಕಟ್ಟಿಗೆ, ದೊಣ್ಣೆಗಳಿಂದ ಹೊಡೆದಾಟ.!

ಕಲಬುರ್ಗಿ ಜಿಲ್ಲೆಯ ರಾವುರ್ ಗ್ರಾಮದಲ್ಲಿ ಶಿವಾಜಿ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ಸೌಂಡ್ ಬಾಕ್ಸ್ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಸಂಘರ್ಷ ನಡೆದಿದೆ.ರಾವುರ್ ಗ್ರಾಮದ ಗೋಕುಲ್ ನಗರದ ಗಣೇಶ್ ಕಟ್ಟಿ ಪ್ರದೇಶದಲ್ಲಿ ಘಟನೆ ನಡೆದಿದೆ.

ಘಟನೆಯ ಹಿನ್ನೆಲೆ: ಗಣೇಶ್ ಕಟ್ಟಿ ಮೇಲೆ ಛತ್ರಪತಿ ಶಿವಾಜಿ ಮಹಾರಾಜರ ಫೋಟೋ ಇಟ್ಟು ಆಚರಣೆ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಸೌಂಡ್ ಬಾಕ್ಸ್ ಹಚ್ಚಿ ಡ್ಯಾನ್ಸ್ ಮಾಡುವಾಗ ಮತ್ತೊಂದು ಸಮುದಾಯದವರು ಸೌಂಡ್ ಕಡಿಮೆ ಮಾಡುವಂತೆ ಸೂಚಿಸಿದ್ದಾರೆ.ಸೌಂಡ್ ಕಡಿಮೆ ಮಾಡುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು, ಎರಡು ಗುಂಪುಗಳ ನಡುವೆ ಗಲಾಟೆ ಆರಂಭವಾಗಿದೆ. ಈ ವೇಳೆ ಜನರು ಪರಸ್ಪರ ಕಲ್ಲು ಮತ್ತು ಕಟ್ಟಿಗೆಗಳಿಂದ ಹೊಡೆದಾಡಿಕೊಂಡಿದ್ದಾರೆ.

ಈ ಮಾರಾಮಾರಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.ಸದ್ಯದ ಮಾಹಿತಿಯ ಪ್ರಕಾರ, ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸಮುದಾಯದವರೂ ಇದುವರೆಗೆ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿಲ್ಲ ಎಂದು ತಿಳಿದುಬಂದಿದೆ.ಕಲಬುರ್ಗಿಯ ಈ ಘಟನೆಯಿಂದಾಗಿ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಂದರ್ಭಿಕ ಚಿತ್ರ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular