HomeLatest Newsನಾಲ್ಕು ವರ್ಷದ ಮಗುವಿನ ಮೇಲೆ ರಾಟ್ ವೀಲರ್ ನಾಯಿ ದಾಳಿ: ಕಿತ್ತು ಬಂದ ಬಾಲಕನ ಕಾಲಿನ...

ನಾಲ್ಕು ವರ್ಷದ ಮಗುವಿನ ಮೇಲೆ ರಾಟ್ ವೀಲರ್ ನಾಯಿ ದಾಳಿ: ಕಿತ್ತು ಬಂದ ಬಾಲಕನ ಕಾಲಿನ ಮಾಂಸಖಂಡ

ಬೆಂಗಳೂರು: ರಾಜ್ಯದ ಜಿಲ್ಲೆ ಜಿಲ್ಲೆಗಳಲ್ಲಿಯೂ ಪ್ರತಿದಿನ ನಾಯಿ ದಾಳಿ ಪ್ರಕರಣ ವರದಿಯಾಗುತ್ತಿದೆ. ನಾಯಿ ದಾಳಿಯಿಂದ ಜನರು ತತ್ತರಿಸುವಂತಾಗಿದೆ. ಮಕ್ಕಳು, ದೊಡ್ದವರು ಕೂಡ ಬೀದಿನಾಯಿಗಳ ದಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿತ್ತಿದ್ದು, ಇಷ್ಟಾದರೂ ಬೀದಿನಾಯಿಗಳ ಕಡಿವಾಣಕ್ಕೆ ಅಧಿಕಾರಿಗಳು ಸೂಕ್ತವಾಗಿ ಕ್ರಮ ಕೈಗೊಳ್ಳದಿರುವುದು ನಿಜಕ್ಕೂ ದುರದೃಷ್ಟಕರ. ಇಲ್ಲೊಂದು ಘಟನೆಯಲ್ಲಿ ರಾಟ್ ವೀಲರ್ ನಾಯಿ ಮಗುವಿನ ಮೇಲೆ ದಾಳಿ ನಡೆಸಿದ್ದು, ಮಗುವಿನ ಸ್ಥಿತಿ ಗಂಭೀರವಾಗಿದೆ.

ಬೆಂಗಳೂರಿನ ಬನಶಂಕರಿಯ 6ನೇ ಹಂತದಲ್ಲಿ ರಾಟ್ ವೀಲರ್ ನಾಯಿಯೊಂದು 4 ವರ್ಷದ ಬಾಲಕನ ಮೇಲೆ ದಾಳಿ ನಡೆಸಿದೆ. ನಾಯಿ ದಾಳಿಯಿಂದ ಬಾಲಕನ ಕಾಲಿನ ಮಾಂಸ ಖಂಡವೇ ಕಿತ್ತು ಬಂದಿದೆ.

ಬನಶಂಕರಿಯ ಮುನಿಯಪ್ಪ ಎಂಬುವವರು ರಾಟ್ ವೀಲರ್ ನಾಯಿಯನ್ನು ಸಾಕಿದ್ದರು. ನಾಯಿ ವಾಕಿಂಗ್ ಗಾಗಿ ಅದರ ಬೆಲ್ಟ್ ಬಿಚ್ಚಿದ್ದರು. ಈ ವೇಳೆ ಬಾಲಕನ್ನು ಕಂಡು ನಾಯಿ ದಾಳಿ ನಡೆಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಯಿ ದಾಳಿಯಿಂದ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಟ್ ವೀಲರ್ ನಾಯಿ ಮಾಲೀಕನ ವಿರುದ್ಧ ಬಾಲಕನ ಪೋಷಕರು ಕೆಂಗೇರಿ ಠಾಣೆಯಲ್ಲಿ ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular