HomeEntertainmentಪ್ರಿಯಾಂಕಾ ಚೋಪ್ರಾ ಬರ್ತ್‌ಡೇ ಗಿಫ್ಟ್ ರಹಸ್ಯ ಬಿಚ್ಚಿಟ್ಟ ನಿಕ್ ಜೋನಸ್: ಇಂಟರೆಸ್ಟಿಂಗ್ ಆಗಿದೆ ಪಾಪ್ ಗಾಯಕನ...

ಪ್ರಿಯಾಂಕಾ ಚೋಪ್ರಾ ಬರ್ತ್‌ಡೇ ಗಿಫ್ಟ್ ರಹಸ್ಯ ಬಿಚ್ಚಿಟ್ಟ ನಿಕ್ ಜೋನಸ್: ಇಂಟರೆಸ್ಟಿಂಗ್ ಆಗಿದೆ ಪಾಪ್ ಗಾಯಕನ ಬ್ಯೂಟಿ ಸೀಕ್ರೆಟ್

ಅಮೆರಿಕದ ಖ್ಯಾತ ಪಾಪ್ ಸಿಂಗರ್ ಹಾಗೂ ನಟ ನಿಕ್ ಜೋನಸ್ ತಮ್ಮ ಅದ್ಭುತ ಗಾಯನದಷ್ಟೇ ಅಲ್ಲದೆ, ಸದಾ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣುವ ಮೂಲಕವೂ ಕೋಟ್ಯಂತರ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸದ್ಯ 33ರ ಹರೆಯದಲ್ಲಿರುವ ನಿಕ್ ಜೋನಸ್ ಇತ್ತೀಚೆಗೆ ವೋಗ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ದಿನನಿತ್ಯದ ಸೌಂದರ್ಯದ ರಹಸ್ಯ ಹಾಗೂ ಪತ್ನಿ ಪ್ರಿಯಾಂಕಾ ಚೋಪ್ರಾ ಅವರ 40ನೇ ಜನ್ಮದಿನದ ಆಚರಣೆಯ ಕುರಿತು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ನಿಕ್ ಜೋನಸ್ ಬ್ಯೂಟಿ ಸೀಕ್ರೆಟ್

ನಿಕ್ ಜೋನಸ್ ಪ್ರತಿದಿನ ಮುಂಜಾನೆ ಸೆಲರಿ ಸೊಪ್ಪು ಮತ್ತು ನಿಂಬೆ ರಸದ ಮಿಶ್ರಣವಿರುವ ಗ್ರೀನ್ ಜ್ಯೂಸ್ ಕುಡಿಯುವ ಮೂಲಕ ದಿನವನ್ನು ಆರಂಭಿಸುತ್ತಾರೆ. ಇದು ಜೀರ್ಣಕ್ರಿಯೆ ಹಾಗೂ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕಾರಿ ಎನ್ನುವುದು ಅವರ ಅಭಿಪ್ರಾಯ. ಇದರ ಬೆನ್ನಲ್ಲೇ ಅವರು ತಮ್ಮ ಚರ್ಮದ ಆರೋಗ್ಯಕ್ಕಾಗಿ ಪ್ರಮುಖ ಹತ್ತು ಹಂತಗಳ ದಿನಚರಿಯನ್ನು ಪಾಲಿಸುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊದಲ ಹಂತವಾಗಿ ಮುಖದ ಬಾವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಐಸ್ ನೀರಿನಲ್ಲಿ ಮುಖವನ್ನು ಅದ್ದುತ್ತಾರೆ. ಬಳಿಕ ಕ್ಲೀನ್ ಅಪ್ ಹಾಗೂ ಶೇವಿಂಗ್ ಮುಗಿಸಿ, ಕ್ಲೆನ್ಸಿಂಗ್ ಜೆಲ್ ಮೂಲಕ ಮುಖವನ್ನು ಸ್ವಚ್ಛಗೊಳಿಸುತ್ತಾರೆ. ಶೂಟಿಂಗ್ ಮುಗಿದ ನಂತರ ಬಿಸಿ ಟವೆಲ್ ಮತ್ತು ಕ್ಲೆನ್ಸರ್ ಬಳಸುವುದು ದಿನದ ಅತ್ಯಂತ ಆರಾಮದಾಯಕ ಕ್ಷಣ ಎಂದು ಅವರು ಹೇಳಿದ್ದಾರೆ.

ದೀರ್ಘಾವಧಿಯ ಶೂಟಿಂಗ್ ಹಾಗೂ ಪ್ರವಾಸದ ಆಯಾಸ ಕಣ್ಣುಗಳ ಮೇಲೆ ಬೀಳದಂತೆ ತಡೆಯಲು ಅವರು ಐ ಜೆಲ್ಸ್ ಮತ್ತು ಐ ಡ್ರಾಪ್ಸ್ ಬಳಸುತ್ತಾರೆ. ಕಣ್ಣಿನ ಕೆಂಪಾಗುವಿಕೆ ಹಾಗೂ ಅಲರ್ಜಿಯಿಂದ ದೂರವಿರಲು ಇದು ಸಹಕಾರಿಯಾಗಿದೆ. ಚರ್ಮದಲ್ಲಿನ ಅತಿಯಾದ ಎಣ್ಣೆಯಂಶ ನಿಯಂತ್ರಿಸಲು ಸೀರಮ್ ಹಚ್ಚುವ ನಿಕ್, ವಯಸ್ಸಾಗುವಿಕೆಯ ಲಕ್ಷಣಗಳನ್ನು ತಡೆಯಲು ಆಂಟಿ ಏಜಿಂಗ್ ಕ್ರೀಮ್ ಉಪಯೋಗಿಸುತ್ತಾರೆ. ಬಾಲ್ಯದಿಂದಲೇ ತಾಯಿ ಕಲಿಸಿಕೊಟ್ಟ ಸನ್‌ಸ್ಕ್ರೀನ್ ಬಳಸುವ ಅಭ್ಯಾಸವನ್ನು ಅವರು ಇಂದಿಗೂ ಮುಂದುವರಿಸಿದ್ದಾರೆ. ತುಟಿಗಳ ತೇವಾಂಶಕ್ಕಾಗಿ ಲಿಪ್ ಬಾಮ್, ಆಕರ್ಷಕ ಸುಗಂಧ ದ್ರವ್ಯ ಹಾಗೂ ಕೂದಲಿನ ಸ್ಟೈಲಿಂಗ್‌ಗಾಗಿ ಫೈಬರ್ ಪೋಮೇಡ್ ಬಳಕೆಯೊಂದಿಗೆ ಅವರ ದಿನಚರಿ ಪೂರ್ಣಗೊಳ್ಳುತ್ತದೆ.

ಪ್ರಿಯಾಂಕಾ ಬರ್ತ್‌ಡೇ ವೇಳೆ ನಡೆದಿದ್ದೇನು

ಸಂದರ್ಶನದ ಮಧ್ಯೆ ಪತ್ನಿ ಪ್ರಿಯಾಂಕಾ ಚೋಪ್ರಾ ಅವರೊಂದಿಗಿನ ಜೀವನದ ಸುಂದರ ನೆನಪನ್ನು ನಿಕ್ ಜೋನಸ್ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಅವರ 40ನೇ ಜನ್ಮದಿನದ ಅಂಗವಾಗಿ ಇಡೀ ಕುಟುಂಬ ಪ್ರವಾಸ ಕೈಗೊಂಡಿತ್ತು. ಆ ವೇಳೆ ತೀವ್ರವಾದ ಬಿಸಿಲಿದ್ದ ಕಾರಣ, ಪ್ರವಾಸಕ್ಕೆ ಬಂದಿದ್ದ ಪ್ರತಿಯೊಬ್ಬ ಅತಿಥಿಗೂ ನಿಕ್ ಜೋನಸ್ ಸನ್‌ಸ್ಕ್ರೀನ್ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡಿದ್ದರಂತೆ. ಅತಿಥಿಗಳ ಚರ್ಮದ ರಕ್ಷಣೆಯ ದೃಷ್ಟಿಯಿಂದ ಈ ವಿಶೇಷ ಗಿಫ್ಟ್ ನೀಡಿದ್ದಾಗಿ ಅವರು ನೆನಪಿಸಿಕೊಂಡಿದ್ದಾರೆ.

ತಾವು ಹೊಸ ಮನೆಗೆ ಕಾಲಿಟ್ಟಾಗ ಇಬ್ಬರೂ ಸೇರಿ ಇಡೀ ಮನೆಗೆ ಒಂದು ಸಿಗ್ನೇಚರ್ ಸುಗಂಧವನ್ನು ಆಯ್ಕೆ ಮಾಡಿದ್ದ ದಿನಗಳನ್ನು ನೆನಸಿಕೊಂಡ ನಿಕ್, ಪ್ರಿಯಾಂಕಾ ಅವರ ಬುದ್ಧಿವಂತಿಕೆ ಮತ್ತು ಸೌಂದರ್ಯವನ್ನು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡಲು ತಮಗೆ ಇಷ್ಟ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular