HomeEntertainmentಅಕ್ಟೋಬರ್ 31ರಂದು ರಿಲೀಸ್ ಆಗಲಿದೆ 'ನೀ ನಂಗೆ ಅಲ್ಲವಾ' ಚಿತ್ರದ ಟ್ರೈಲರ್!

ಅಕ್ಟೋಬರ್ 31ರಂದು ರಿಲೀಸ್ ಆಗಲಿದೆ ‘ನೀ ನಂಗೆ ಅಲ್ಲವಾ’ ಚಿತ್ರದ ಟ್ರೈಲರ್!

ಕನ್ನಡ ಚಿತ್ರರಂಗದಲ್ಲಿ ಹೊಸತನದ ಕಥಾಹಂದರ ಹೊಂದಿರುವ ಸಿನಿಮಾಗಳಿಗೆ ಸದಾ ಆದರ ವ್ಯಕ್ತವಾಗುತ್ತದೆ. ಇದೀಗ ಅದೇ ಸಾಲಿಗೆ ಸೇರಲು ಸಜ್ಜಾಗಿದೆ ‘ನೀ ನಂಗೆ ಅಲ್ಲವಾ’ ಚಿತ್ರ. ರಾಹುಲ್ ಅರ್ಕೋಟ್ ಹಾಗೂ ಕಾಶಿಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾದ ಕುರಿತು ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿದೆ. ಇದೀಗ ಚಿತ್ರತಂಡವು ಪ್ರೇಕ್ಷಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಬರುವ ಅಕ್ಟೋಬರ್ 31 ರಂದು ಸಿನಿಮಾದ ಅಧಿಕೃತ ಟ್ರೈಲರ್ ಬಿಡುಗಡೆ ಮಾಡಲು ಮುಹೂರ್ತ ನಿಗದಿಪಡಿಸಿದೆ.

ಸುರಂ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಜಯರಾಮ್ ದೇವಸಮುದ್ರ ಬಂಡವಾಳ ಹೂಡಿದ್ದಾರೆ. ಕಥೆ, ಚಿತ್ರಕಥೆ ಬರೆದು ಮನೋಜ್ ಪಿ ನಡಲುಮನೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ನಟ ರಾಹುಲ್ ಅರ್ಕೋಟ್ ಮತ್ತು ನಟಿ ಕಾಶಿಮಾ ಜೊತೆಗೆ ಚಿತ್ರದಲ್ಲಿ ಬೃಹತ್ ತಾರಾಗಣವೇ ಅಭಿನಯಿಸಿದೆ.

ತಾಂತ್ರಿಕವಾಗಿಯೂ ಸಿನಿಮಾ ಬಲವಾಗಿದ್ದು, ಉದಯಲೀಲಾ ಅವರ ಛಾಯಾಗ್ರಹಣ (ಡಿಒಪಿ) ಚಿತ್ರಕ್ಕಿದೆ. ಸೂರಜ್ ಜೋಯಿಸ್ ಸಂಗೀತ ಸಂಯೋಜನೆ ಮಾಡಿದ್ದು, ನಾಗೇಂದ್ರ ಉಜ್ಜನಿ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಸಾಹಸ ದೃಶ್ಯಗಳಿಗೆ ನರಸಿಂಹಮೂರ್ತಿ ಸಾಹಸ ನಿರ್ದೇಶನ ಮಾಡಿದ್ದರೆ, ಅಭಿಷೇಕ್ ಮಾತಾಡ್ ನೃತ್ಯ ನಿರ್ದೇಶನ ನೀಡಿದ್ದಾರೆ. ಶಬ್ದ ವಿನ್ಯಾಸ ಹಾಗೂ ಮಿಕ್ಸಿಂಗ್ ಹೊಣೆಯನ್ನು ನವೀನ್ ಕುಮಾರ್ ಬಿ ಆರ್ ನಿರ್ವಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಳಿದಂತೆ ವಿಎಫ್‌ಎಕ್ಸ್ ವಿಭಾಗವನ್ನು ಶ್ರೀನಿವಾಸ್ ಕಲಾಲ್ ಹಾಗೂ ಡಿಐ ಕೆಲಸಗಳನ್ನು ಅನುರಂಜನ್ ಹೆಚ್ ಆರ್ ನಿಭಾಯಿಸಿದ್ದಾರೆ. ಶ್ರೀನಿವಾಸ್ ಅವರ ವಸ್ತ್ರಾಲಂಕಾರ ಮತ್ತು ರಮೇಶ್ ಅವರ ಮೇಕಪ್ ಚಿತ್ರದ ಪಾತ್ರಗಳಿಗೆ ಜೀವ ತುಂಬಿದೆ. ಸುದ್ದಿ ಪ್ರಚಾರದ ಜವಾಬ್ದಾರಿಯನ್ನು ಪ್ರಸಿದ್ಧ ಪಿಆರ್‌ಒ ಸುಧೀಂದ್ರ ವೆಂಕಟೇಶ್ ವಹಿಸಿಕೊಂಡಿದ್ದು, ಅಕ್ಟೋಬರ್ 31 ರಂದು ಹೊರಬರಲಿರುವ ಟ್ರೈಲರ್ ವೀಕ್ಷಿಸಲು ಸಿನಿಪ್ರಿಯರು ಕಾಯುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular