ಬೆಂಗಳೂರು-ರಾಜಧಾನಿ ಬೆಂಗಳೂರಿನಿಂದ ಪ್ರತಿದಿನ ಪ್ರಯಾಣಿಸುವ ವಾಹನ ಸವಾರರ ಜೇಬಿಗೆ ಮತ್ತೊಮ್ಮೆ ಕತ್ತರಿ ಬಿದ್ದಿದೆ.
ಬೆಂಗಳೂರು-ನೆಲಮಂಗಲ, ಬೆಂಗಳೂರು-ಕೋಲಾರ ಹಾಗೂ ನೈಸ್ ರಸ್ತೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮಾರ್ಗಗಳ ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನು ಏರಿಕೆ ಮಾಡಲಾಗಿದ್ದು, ಪ್ರಯಾಣಿಕರಿಗೆ ಪ್ರಯಾಣದ ವೆಚ್ಚ ಮತ್ತಷ್ಟು ದುಬಾರಿಯಾಗಲಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ಸಂಬಂಧಪಟ್ಟ ಸಂಸ್ಥೆಗಳು ಪರಿಷ್ಕೃತ ಟೋಲ್ ದರಗಳನ್ನು ಜಾರಿಗೆ ತಂದಿದ್ದು, ಈ ಹೊಸ ದರಗಳು ಮಾರ್ಚ್ 31, 2027 ರವರೆಗೆ ಜಾರಿಯಲ್ಲಿರಲಿವೆ ಎಂದು ಸ್ಪಷ್ಟಪಡಿಸಲಾಗಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (NE-7): ಹೊಸ ಟೋಲ್ ದರಗಳು
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (NE-7): ಹೊಸ ಟೋಲ್ ವಿವರ
ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ 7 (NE-7) ರ ಬೆಂಗಳೂರು-ಬೇತಮಂಗಲ ವಿಭಾಗದ (70.7 ಕಿ.ಮೀ) ಕರ್ನಾಟಕ ವ್ಯಾಪ್ತಿಯಲ್ಲಿ ಶುಲ್ಕ ಏರಿಕೆಯಾಗಿದೆ.
ಹೊಸಕೋಟೆಯಿಂದ ಆಂಧ್ರಪ್ರದೇಶದ ಗಡಿಯವರೆಗಿನ ಈ ಮಾರ್ಗದಲ್ಲಿ ಒಟ್ಟು 4 ಟೋಲ್ ಪ್ಲಾಜಾಗಳಿದ್ದು, ಕಾರು/ಜೀಪ್/ವ್ಯಾನ್/ಎಲ್‌ಎಮ್‌ವಿ (LMV) ವಾಹನಗಳಿಗೆ ನಿಗದಿಪಡಿಸಿದ ಪರಿಷ್ಕೃತ ಶುಲ್ಕ ಹೀಗಿದೆ:
ಹೆಡಗಿನಬೆಲೆ (ಹೊಸಕೋಟೆ) ಅಗ್ರಹಾರಕ್ಕೆ: ₹50 | ಕೃಷ್ಣರಾಜಪುರಕ್ಕೆ: ₹120 | ಸುಂದರಪಾಳ್ಯಕ್ಕೆ: ₹150 ₹50 – ₹150
ಅಗ್ರಹಾರ (ಮಾಲೂರು) ಹೆಡಗಿನಬೆಲೆಗೆ: ₹50 | ಕೃಷ್ಣರಾಜಪುರಕ್ಕೆ: ₹70 | ಸುಂದರಪಾಳ್ಯಕ್ಕೆ: ₹95 ₹50 – ₹95
ಕೃಷ್ಣರಾಜಪುರ (ಬಂಗಾರಪೇಟೆ) ಹೆಡಗಿನಬೆಲೆಗೆ: ₹120 | ಅಗ್ರಹಾರಕ್ಕೆ: ₹70 | ಸುಂದರಪಾಳ್ಯಕ್ಕೆ: ₹30 ₹30 – ₹120
ಸುಂದರಪಾಳ್ಯ (ಬೇತಮಂಗಲ) ಹೆಡಗಿನಬೆಲೆಗೆ: ₹150 | ಅಗ್ರಹಾರಕ್ಕೆ: ₹95 | ಕೃಷ್ಣರಾಜಪುರಕ್ಕೆ: ₹30
ವಿಶೇಷ ರಿಯಾಯಿತಿ ಸೌಲಭ್ಯಗಳು
ವಿಶೇಷ ರಿಯಾಯಿತಿಗಳು:
24 ಗಂಟೆಗಳ ಒಳಗೆ ಮರುಪ್ರಯಾಣ (Return Journey): ಶೇಕಡಾ 50 ರಷ್ಟು ರಿಯಾಯಿತಿ ಸಿಗಲಿದೆ.
ಮಾಸಿಕ ಪಾಸ್ (50 ಏಕ ಪ್ರಯಾಣಗಳಿಗೆ): ಸಾಮಾನ್ಯ ಶುಲ್ಕಕ್ಕಿಂತ ಮೂರನೇ ಎರಡರಷ್ಟು (2/3rd) ಕಡಿಮೆ ಇರಲಿದೆ.
ಬೆಂಗಳೂರು-ನೆಲಮಂಗಲ (NH-48): ಹೊಸ ದರ ನಿಗದಿ
ಬೆಂಗಳೂರು-ನೆಲಮಂಗಲ (NH-48)
ರಾಷ್ಟ್ರೀಯ ಹೆದ್ದಾರಿ 48 ರ 19.5 ಕಿ.ಮೀ ಉದ್ದದ ಬೆಂಗಳೂರು-ನೆಲಮಂಗಲ ವಿಭಾಗದಲ್ಲೂ ಶುಲ್ಕ ಹೆಚ್ಚಿಸಲಾಗಿದೆ.
ಒಂದು ಮಾರ್ಗದ ಪ್ರಯಾಣ (Single Journey): ₹105
24 ಗಂಟೆಗಳ ಒಳಗೆ ಹಿಂತಿರುಗುವ ಪ್ರಯಾಣ (Return Journey): ₹155
ನೈಸ್ ರಸ್ತೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮಾರ್ಗಗಳಲ್ಲೂ ಏರಿಕೆ
ಇದರ ಜೊತೆಗೆ ನೈಸ್ ರಸ್ತೆ ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಮಾರ್ಗಗಳಲ್ಲೂ ಶುಲ್ಕ ಏರಿಕೆಯಾಗಿದ್ದು, ಪ್ರತಿನಿತ್ಯ ಕಚೇರಿ ಹಾಗೂ ಸರಕು ಸಾಗಣೆಗೆ ಈ ರಸ್ತೆಗಳನ್ನು ನೆಚ್ಚಿಕೊಂಡಿದ್ದ ವಾಹನ ಸವಾರರಿಗೆ ಭಾರೀ ಆರ್ಥಿಕ ಹೊರೆಯಾಗಲಿದೆ.
ಸಾರ್ವಜನಿಕರ ಆಕ್ರೋಶ
ಸಾರ್ವಜನಿಕರ ಅಸಮಾಧಾನ
ನಿರಂತರವಾಗಿ ಹೆಚ್ಚಾಗುತ್ತಿರುವ ಇಂಧನ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮಧ್ಯೆ, ಹೆದ್ದಾರಿ ಟೋಲ್ ದರಗಳನ್ನು ಮತ್ತೆ ಹೆಚ್ಚಿಸಿರುವುದು ಸಾರ್ವಜನಿಕರು ಮತ್ತು ಚಾಲಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. “ರಸ್ತೆಗಳ ನಿರ್ವಹಣೆ ಸರಿಯಾಗಿ ಇರಲಿ ಇಲ್ಲದಿರಲಿ, ಟೋಲ್ ದರಗಳನ್ನು ಮಾತ್ರ ತಪ್ಪದೇ ಏರಿಸಲಾಗುತ್ತಿದೆ” ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಟೋಲ್ ದಾರಿ ಬಲು ದುಬಾರಿ
ಬೆಂಗಳೂರು ಸುತ್ತಮುತ್ತಲಿನ ಹೆದ್ದಾರಿಗಳಲ್ಲಿ ಶುಲ್ಕ ಭಾರಿ ಏರಿಕೆ!