HomeKarnatakaBREAKING : ಮಂಗಳೂರಿನಲ್ಲಿ ಕಡಿಮೆ ಎತ್ತರದಲ್ಲಿ ಹಾರಾಡಿದ ಹೆಲಿಕಾಪ್ಟರ್; ಜನರಲ್ಲಿ ಹೆಚ್ಚಿದ ಆತಂಕ

BREAKING : ಮಂಗಳೂರಿನಲ್ಲಿ ಕಡಿಮೆ ಎತ್ತರದಲ್ಲಿ ಹಾರಾಡಿದ ಹೆಲಿಕಾಪ್ಟರ್; ಜನರಲ್ಲಿ ಹೆಚ್ಚಿದ ಆತಂಕ

ಮಂಗಳೂರು: ನಗರದ ಆಕಾಶದಲ್ಲಿ ಕಡಿಮೆ ಎತ್ತರದಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸಿದ ಹಿನ್ನೆಲೆಯಲ್ಲಿ ಕೆಲಕಾಲ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸೇನಾ ಹೆಲಿಕಾಪ್ಟರ್‌ಗಳು ಸುತ್ತು ಹೊಡೆಯುವುದನ್ನು ಕಂಡು ಸ್ಥಳೀಯರು ಏನಾಗುತ್ತಿದೆ ಎಂದು ಗೊಂದಲಕ್ಕೊಳಗಾಗಿದ್ದರು. ಆದರೆ ಇದು ಯಾವುದೇ ತುರ್ತು ಪರಿಸ್ಥಿತಿ ಅಥವಾ ಅಪಾಯದ ಬೆಳವಣಿಗೆಯಲ್ಲ. ತುರ್ತು ಸಂದರ್ಭಗಳನ್ನು ಎದುರಿಸುವ ಸಾಮರ್ಥ್ಯ ಹೆಚ್ಚಿಸಲು ನಡೆಸಿದ ಅಣಕು ಕಾರ್ಯಾಚರಣೆ (ಮಾಕ್ ಡ್ರಿಲ್) ಆಗಿತ್ತು.

ಹೌದು. ಮಂಗಳೂರಿನ ಆಕಾಶದಲ್ಲಿ ಕಡಿಮೆ ಎತ್ತರದಲ್ಲಿ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು ಹಾಗೂ ಕಟ್ಟಡಗಳ ಮೇಲೆ ಇಳಿದ ಎನ್‌ಎಸ್‌ಜಿ ಕಮಾಂಡೋಗಳನ್ನು ಕಂಡು ಜನರಲ್ಲಿ ಕೆಲಕಾಲ ಆತಂಕ ಮೂಡಿತ್ತು. ಆದರೆ ಇದು ಯಾವುದೇ ತುರ್ತು ಪರಿಸ್ಥಿತಿಯಲ್ಲ, ಬದಲಾಗಿ ಭದ್ರತಾ ಸಿದ್ಧತೆ ಪರಿಶೀಲಿಸಲು ನಡೆಸಿದ ಮಾಕ್ ಡ್ರಿಲ್ ಎಂಬುದು ಬಳಿಕ ಸ್ಪಷ್ಟವಾಗಿದೆ.

ಎನ್‌ಎಸ್‌ಜಿ (NSG) ಕಮಾಂಡೋಗಳ ಮಾಕ್ ಡ್ರಿಲ್ ಭಾಗವಾಗಿ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಲಾಗಿತ್ತು. ಕಟ್ಟಡಗಳ ಮೇಲೆ ಕಮಾಂಡೋಗಳು ಲ್ಯಾಂಡಿಂಗ್ ಮಾಡುವ ಅಭ್ಯಾಸ ನಡೆಸಿದ್ದು, ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಪರಿಶೀಲಿಸಲಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಲಿಕಾಪ್ಟರ್‌ಗಳ ಕಡಿಮೆ ಎತ್ತರದ ಹಾರಾಟ ಹಾಗೂ ಕಟ್ಟಡಗಳ ಮೇಲೆ ಕಮಾಂಡೋಗಳ ಇಳಿಯುವ ದೃಶ್ಯ ಕಂಡು ಜನರು ಆತಂಕ ವ್ಯಕ್ತಪಡಿಸಿದ್ದರು. ಬಳಿಕ ಇದು ಭದ್ರತಾ ಪಡೆಗಳ ಅಭ್ಯಾಸ ಕಾರ್ಯಾಚರಣೆ ಎಂಬ ಮಾಹಿತಿ ತಿಳಿದು ಜನರು ನಿರಾಳರಾದರು. ಭದ್ರತಾ ಸವಾಲುಗಳನ್ನು ಎದುರಿಸಲು ಹಾಗೂ ತುರ್ತು ಸಂದರ್ಭಗಳಲ್ಲಿ ಸಮನ್ವಯ ಕಾರ್ಯಾಚರಣೆ ನಡೆಸಲು ಇಂತಹ ಅಣಕು ಕಾರ್ಯಾಚರಣೆಗಳನ್ನು ಕಾಲಕಾಲಕ್ಕೆ ನಡೆಸಲಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular