ನೊಯ್ಡಾ: ನೆಟ್ ವರ್ಕ್ ಸಮಸ್ಯೆ ಎಂಬುದು ಇಂದು ದೇಶಾದ್ಯಂತ ತಲೆದೂರಿದೆ. ಇದೇ ರೀತಿ ನೆಟ್ ವರ್ಕ್ ಸಮಸ್ಯೆಯಾಗುತ್ತಿದೆ ಎಂದು ಕಟ್ಟಡದ ಮೇಲೆ ಹೋಗಿ ಫೋನ್ ನಲ್ಲಿ ಮಾತನಾಡುತ್ತಿದ್ದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಎಕ್ಸಿಕೂಟಿವ್ ಕಟ್ಟಡಿದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ.
ನೊಯ್ಡಾದ ಸೆಕ್ಟರ್ 104ರಲ್ಲಿ ಈ ದುರಂತ ಸಂಭವಿಸಿದೆ. ದೆಹಲಿಯ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾಅರ್ಯ ನಿರ್ವಹಿಸುತ್ತಿದ್ದ ಅಜಯ್ ಗರ್ಗ್, 17ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರ ಮೂಲದ ಅಜಯ್ ಗರ್ಗ್ ಪತ್ನಿಯೊಂದಿಗೆ ಎಟಿಎಸ್ ಒನ್ ಹ್ಯಾಮೆಟ್ ಸೊಸೈಟಿಯಲ್ಲಿ ವಾಸವಾಗಿದ್ದರು. ಅಜಯ್ ಅವರ ಮೊಬೈಲ್ ಗೆ ಕರೆಯೊಂದು ಬಂದಿತ್ತು. ಮನೆಯಲ್ಲಿ ಸರಿಯಾಗಿ ನೆಟ್ ವರ್ಕ್ ಸಿಗುತ್ತಿರಲಿಲ್ಲ. ಇದರಿಂದ ನೆಟ್ ವರ್ಕ್ ಸಿಗುತ್ತಿಲ್ಲ ಎಂದು ಮಹಡಿಯನ್ನು ಹತ್ತಿ ಮೇಲೆ ಹೋಗಿದ್ದಾರೆ. ಫೋನ್ ನಲ್ಲಿ ಮಾತನಾಡುತ್ತಾ ಮುಂದಡಿ ಇಟ್ಟಿದ್ದಾರೆ ಅಷ್ಟೇ 17ನೇ ಫ್ಲೋರ್ ನಿಂದ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಅಜಯ್ ಅವರನ್ನು ಸೊಸೈಟಿಯವರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.
ಕಟ್ಟಡದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಸಾವನ್ನಪ್ಪಿದದರೋ? ಅಥವಾ ಆತ್ಮಹತ್ಯೆಯೋ ಎಂಬು ಇನ್ನಷ್ಟೇ ಖಚಿತವಾಗಬೇಕಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

