HomeLatest Newsಮೂವರು ಹೆಣ್ಣುಮಕ್ಕಳು ಎಂದು ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಬಿಟ್ಟು ಮತ್ತೋರ್ವ ಯುವತಿಯ ಹಿಂದೆಬಿದ್ದ ಪತಿ!

ಮೂವರು ಹೆಣ್ಣುಮಕ್ಕಳು ಎಂದು ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಬಿಟ್ಟು ಮತ್ತೋರ್ವ ಯುವತಿಯ ಹಿಂದೆಬಿದ್ದ ಪತಿ!

ಬೆಂಗಳೂರು: ಮೂವರು ಹೆಣ್ಣುಮಕ್ಕಳು ಎಂಬ ಕಾರಣಕ್ಕೆ ಪತಿ ಮಹಾಶಯನೊಬ್ಬ ಪತ್ನಿಯನ್ನೇ ಬಿಟ್ಟು ಬೇರೊಂದು ಯುವತಿಯ ಹಿಂದೆ ಬಿದ್ದುರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ.

ಹರೀಶ್ ಎಂಬಾತ ಪತ್ನಿ ಹಾಗೂ ಮೂವರು ಹೆಣ್ಣುಮಕ್ಕಳನ್ನು ಬಿಟ್ಟು ಇನ್ನೋರ್ವ ಯುವತಿಯೊಂದಿಗೆ ಪರಾರಿಯಾಗಿದ್ದಾನೆ ಎಂದು ಪತ್ನಿ ವರಲಕ್ಷ್ಮೀ ಆರೋಪಿಸಿದ್ದಾರೆ. ಹರೀಶ್ ಹಾಗೂ ವರಲಕ್ಷ್ಮೀ ಕೆಲ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಹರೀಶ್ ಸೇಲ್ಸ್ ಎಕ್ಸಿಕುಟೀವ್, ವರಲಕ್ಷ್ಮೀ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ದಂಪತಿಗೆ ಮೂವರು ಹೆಣ್ಣುಮಕ್ಕಳು.

ಮೂರನೇ ಮಗುವಿಗೆ ಇನ್ನೂ ಒಂದೂವರೆ ವರ್ಷ. ಮೂವರೂ ಹೆಣ್ಣು ಮಕ್ಕಳು ಎಂಬ ಕಾರಣಕ್ಕೆ ಪತ್ನಿಯೊಂದಿಗೆ ಸದಾಕಾಲ ಹರೀಶ್ ಜಗಳ, ಗಲಾಟೆ ಮಾಡುತ್ತಿದ್ದನಂತೆ. ನಾನು ಮಕ್ಕಳನ್ನು ನೋಡಿಕೊಳ್ಳಲ್ಲ ಎಂದು ಬೈಯ್ಯುತ್ತಿದ್ದನಂತೆ. ಇದೀಗ ಪತಿ ಹರೀಶ್ ಪತ್ನಿ ಹಾಗೂ ಮೂವರು ಮಕ್ಕಳನ್ನು ಬಿಟ್ಟು ಬೇರೊಂದು ಯುವತಿಯೊಂದಿಗೆ ಪರಾರುಯಾಗಿದ್ದಾನೆ ಎಂದು ವರಲಕ್ಷ್ಮೀ ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಗ್ಗೆ ಒಂದೂವರೆ ತಿಂಗಳ ಹಿಂದೆ ಈಶಾನ್ಯ ವಿಭಾಗದ ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಮೂವರು ಮಕ್ಕಳನ್ನು ಸಾಕುವುದು, ಕುಟುಂಬ ನಿರ್ವಹಣೆ ತನ್ನೊಬ್ಬಳಿಂದ ಕಷ್ಟವಾಗುತ್ತಿದೆ. ನ್ಯಾಯಕೊಡಿಸುವಂತೆ ವರಲಕ್ಷ್ಮೀ ಕಣ್ಣೀರಿಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular