HomeLatest NewsBIG NEWS: ನೇಮೋತ್ಸವದಲ್ಲಿ ಕಳ್ಳಿಯರ ಕೈಚಳಕ: ಗಂಟೆ ಹೊಡೆಯುವ ನೆಪದಲ್ಲಿ ಬಂದು ವೃದ್ಧೆಯ ಸರ ಕದ್ದು...

BIG NEWS: ನೇಮೋತ್ಸವದಲ್ಲಿ ಕಳ್ಳಿಯರ ಕೈಚಳಕ: ಗಂಟೆ ಹೊಡೆಯುವ ನೆಪದಲ್ಲಿ ಬಂದು ವೃದ್ಧೆಯ ಸರ ಕದ್ದು ಎಸ್ಕೇಪ್

ಉಡುಪಿ: ಕಳ್ಳತನವನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಖದೀಮರಿಗೆ ದೇವರು-ದೈವ, ದೇವಸ್ಥಾನಗಳೆಂಬ ಭಯ-ಭಕ್ತಿಯಿಲ್ಲ. ಕಳ್ಳರಿಗೆ ಮನೆಯಾದರೇನು? ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ದೇವಾಲಯ, ಉತ್ಸವಗಳಾದರೇನು? ಕದ್ದು ಪರಾರಿಯಾಗುವುದೇ ಅವರ ಕೆಲಸ. ನೇಮೋತ್ಸವದಲ್ಲಿ ಭಕ್ತರಂತೆ ಬಂದ ಕಳ್ಳಿಯರಿಬ್ಬರು ವೃದ್ಧೆಯ ಚಿನ್ನದ ಸರ ಕದ್ದು ಪರಾರಿಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವದ ವೇಳೆ ಮೂವರು ಕಳ್ಳಿಯರು ವೃದ್ಧೆಯ ಚಿನ್ನದ ಸರ ಕದ್ದು ಎಸ್ಕೇಪ್ ಆಗಿದ್ದಾರೆ. ವೃದ್ಧೆಯನ್ನು ಮೂರು ಕಡೆಯಿಂದ ಸುತ್ತುವರೆದು ಈ ಕೃತ್ಯವೆಸಗಿದ್ದಾರೆ.

ನೇಮೋತ್ಸವದ ಪೂಜೆ ವೇಳೆ ಗಂಟೆಹೊಡೆಯುವ ನೆಪದಲ್ಲಿ ವೃದ್ಧೆಯನ್ನು ಮೂರು ಕಡೆಯಿಂದ ಸುತ್ತುವರಿದ ಕಳ್ಳಿಯರು 2 ಲಕ್ಷ ಮೌಲ್ಯದ ಚಿನ್ನದ ಸರ ಎಗರಿಸಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳಿಯರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular