ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡು ಬಲೂನು ಮಾರುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಕೂಡ ತನಿಖೆಗೆ ಎಂಟ್ರಿಯಾಗಿದೆ.
ಮೈಸೂರಿನ ಅರಮನೆಯ ಜಯಮಾರ್ತಾಂಡ ಗೇಟ್ ಬಳಿ ಡಿಸೆಂಬರ್ 25ರಂದು ಹೀಲಿಯಂ ಸಿಲಿಂಡರ್ ಸ್ಫೋಟಗೊಂಡು ಬಲೂನು ಮಾರುತ್ತಿದ್ದ ಉತ್ತರ ಪ್ರದೇಶ ಮೂಲದ ಸಲೀಂ ಸ್ಥಳದಲ್ಲೇ ಸಾವನ್ನಪ್ಪಿದ್ದ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಲೀಂ ವಾರದ ಹಿಂದಷ್ಟೇ ಮೈಸೂರಿಗೆ ಬಂದು ಬಲೂನು ಮಾರುತ್ತಿದ್ದ. ಹೀಲಿಯಂ ಗ್ಯಾಸ್ ಮೂಲಕ ಬಲೂನು ಊದಿಸಿ ಬಲೂನು ಮಾರುತ್ತಿದ್ದ. ಹೀಲಿಯಂ ಸಿಲಿಂದರ್ ಆನ್ ಹಾಗೂ ಆಫ್ ಮಾಡುವಾಗ ತೀವ್ರ ಒತ್ತಡದಿಂದಾಗಿ ಸ್ಫೋಟಗೊಂಡಿದೆ ಎನ್ನಲಾಗಿದೆ. ಮೈಸೂರು ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.
ಈ ನಡುವೆ ಎನ್ ಐಎ ಅಧಿಕಾರಿಗಳೂ ಕೂಡ ಪ್ರಕರಣದ ತನಿಖೆಗೆ ಮುಂದಾಗಿವೆ. ಇಂದು ಮೈಸೂರಿನ ಘಟನಾ ಸ್ಥಳಕ್ಕೆ ಎನ್ಐಎ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ನಡುವೆ ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ತಿರುವ ಬಲೂನು ಮಾರುತ್ತಿದ್ದ ಸಲಿಂ ಮೈಸೂರಿನಲ್ಲಿ ಲಾಡ್ಜ್ ಮಾಡಿಕೊಂಡು ವಾಸವಾಗಿದ್ದ ಎಂದು ತಿಳಿದುಬಂದಿದೆ. ಒಟ್ಟಾರೆ ಮೈಸೂರಿನಲ್ಲಿ ಹೀಲಿಯಂ ಸಿಲಿಂಡರ್ ಸ್ಫೋಟ ದುರಂತದಲ್ಲಿ ತನಿಖೆಗೆ ಎನ್ಐಎ ಎಂಟ್ರಿ ತೀವ್ರ ಕುತೂಹಲ ಮೂಡಿಸಿದೆ.

