HomeLatest Newsನೀಟ್ ಮರು ಪರೀಕ್ಷೆ: ಕೇವಲ 2 ನಿಮಿಷ ತಡವಾಗಿ ಬಂದಿದ್ದಕ್ಕೆ ಗೇಟ್ ಕ್ಲೋಸ್: ಪರೀಕ್ಷೆಗೆ ಅವಕಾಶ...

ನೀಟ್ ಮರು ಪರೀಕ್ಷೆ: ಕೇವಲ 2 ನಿಮಿಷ ತಡವಾಗಿ ಬಂದಿದ್ದಕ್ಕೆ ಗೇಟ್ ಕ್ಲೋಸ್: ಪರೀಕ್ಷೆಗೆ ಅವಕಾಶ ನೀಡದ ಸಿಬ್ಬಂದಿ: ಕಣ್ಣೀರಿಟ್ಟು ಗೋಳಾಡಿದ ವಿದ್ಯಾರ್ಥಿನಿಯರು

ಬೆಂಗಳೂರು: ದೇಶಾದ್ಯಂತ ನೀಟ್ ಮರು ಪರೀಕ್ಷೆ ಆರಂಭವಾಗಿದೆ. ನೀಟ್ ಪರೀಕ್ಷೆ ಪ್ರಶ್ನೆ ಪತ್ರಿ ಸೋರಿಕೆ ಕಾರಣದಂದ ರದ್ದಾಗಿದ್ದ ನೀಟ್ ಪರೀಕ್ಷೆಯನ್ನು ಭಾರಿ ಬಂದೋಬಸ್ತ್ ಮೂಲಕ ನಡೆಸಲಾಗುತ್ತಿದೆ.

ಇಂದು ಮಧ್ಯಾಹ್ನ 2 ಗಂಟೆಯಿಂದ ಪರೀಕ್ಷೆ ಆರಂಭವಾಗಿದ್ದು, ಸಂಜೆ 5:15ರವರೆಗೂ ಪರೀಕ್ಷೆ ನಡೆಯಲಿದೆ. ಈ ಬಾರಿ ಪರೀಕ್ಷೆಗೆ ಎನ್ ಟಿಎ 15 ನಿಮಿಗಳ ಕಾಲ ಹೆಚ್ಚುವರಿ ಸಮಯಾವಕಾಶ ನೀಡಿದೆ. ಈ ಬಾರಿ ನೀಟ್ ಪರೀಕ್ಷೆ ಮೇಲೆ ಕೇಂದ್ರ ಶಿಕ್ಷಣ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ನಿಯಮಗಳನ್ನು ಕಠಿಣಗೊಳಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯ ರಾಜಧಾನಿ ಬೆಂಗಳೂರಿನ ಕೇಂದ್ರಗಳಲ್ಲಿಯೂ ನೀಟ್ ಪರೀಕ್ಷೆ ಆರಂಭವಾಗಿದೆ. ಜೀನ್ಸ್ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗಿಲ್ಲ. ಜೀನ್ಸ್ ಧರಿಸಿ ಬಂದಿದ್ದ ಐದಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸಿಬ್ಬಂದಿಗಳು, ಬೇರೆ ಬಟ್ಟೆ ಧರಿಸಿಬರುವಂತೆ ವಾಪಸ್ ಕಳುಹಿಸಿದ ಘಟನೆ ನಡೆದಿದೆ.

ಇನ್ನೊಂದೆಡೆ ಆರ್.ಸಿ.ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಮೂವರು ವಿದ್ಯಾರ್ಥಿನಿಯರು ತಡವಾಗಿ ಬಂದಿದ್ದಕ್ಕೆ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಓರ್ವ ವಿದ್ಯಾರ್ಥಿನಿ ಕೇವಲ ಎರಡು ನಿಮಿಷ ತಡವಾಗಿ ಬಂದಿದ್ದಕ್ಕೆ ಪರೀಕ್ಷಾ ಕೊಠಡಿಗೆ ಹೋಗಲು ಹರಸಾಹಸ ಪಟ್ಟಿದ್ದಾಳೆ. ಪರೀಕ್ಷಾ ಕೇಂದ್ರದ ಗೇಟ್ ಮೇಲೆ ಹತ್ತಿ ಅಲ್ಲಿಂದ ಇಳಿದು ಹೋಗಲು ಯತ್ನಿಸಿದ್ದಾಳೆ. ಈ ವೇಳೆ ಪೊಲೀಸ್ ಸಿಬ್ಬಂದಿ ಆಕೆಯನ್ನು ತಡೆದಿದ್ದಾರೆ.

ಇನ್ನಿಬ್ಬರು ವಿದ್ಯಾರ್ಥಿನಿಯರಲ್ಲಿ ಓರ್ವ ವಿದ್ಯಾರ್ಥಿನಿ ಕೊಪ್ಪಳದ ಗಂಗಾವತಿಯಿಂದ ಆಗಮಿಸಿದ್ದು, ಈ ವೇಳೆ ಒಂದೆಡೆ ಟ್ರಾಫಿಕ್ ಜಾಮ್ ಮತ್ತೊಂದೆಡೆ ವಾಹನ ಕೆಟ್ಟು ನಿಂತ ಪರಿಣಾಮ ಪರೀಕ್ಷಾ ಕೇಂದ್ರ ತಲುಪುವಷ್ಟರಲ್ಲಿ ಕೊಂಚ ತಡವಾಗಿದೆ. ಇನ್ನೋರ್ವ ವಿದ್ಯಾರ್ಥಿನಿ ಮಾಗಡಿಯಿಂದ ಪರೀಕ್ಷಾ ಕೇಂದ್ರಕ್ಕೆ ಮೆಜೆಸ್ಟಿಕ್ ಮೂಲಕ ತಲುಪುವಷ್ಟರಲ್ಲಿ ಟ್ರಾಫಿಕ್ ಜಾಮ್ ನಲ್ಲಿಂದಾಗಿ ತಡವಾಗಿದೆ. ಮೂವರು ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೇಂದ್ರದ ಹೊರಗಿನ ಗೇಟ್ ನಲ್ಲಿ ತಪಾಸಣೆ ನಡೆಸಿ ಒಳಬಿಡಲಾಯಿತಾದರೂ ಪರೀಕ್ಷಾ ಕೊಠಡಿ ಬಳಿಯ ಒಳಗಿನ ಗೇಟ್ ನ್ನು ಪರೀಕ್ಷಾ ಕೇಂದ್ರದೊಳಗಿನ ಸಿಬ್ಬಂದಿ ತೆರೆದಿಲ್ಲ.

ಮಧ್ಯಾಹ್ನ 1:30ಕ್ಕೆ ಪರೀಕ್ಷಾ ಕೇಂದ್ರದ ಗೇಟ್ ಗಳನ್ನು ಸಿಬ್ಬಂದಿಗಳು ಬಂದ್ ಮಾಡಿದ್ದರು. ಇನ್ನೂ ಎರಡು ನಿಮಿಷ ಬಾಕಿಯಿದ್ದರೂ ಸಿಬ್ಬಂದಿಗಳು ಪರೀಕ್ಷಾ ಕೇಂದ್ರದ ಗೇಟ್ ತೆರೆದು ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಇದರಿಂದ ಕಂಗಾಲಾದ ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರದ ಬಳಿ ಕಣ್ಣೀರಿಟ್ಟಿದ್ದಾರೆ. ಗೇಟ್ ತೆರೆಯುವಂತೆ ಗೋಳಾಡಿದ್ದಾರೆ. ಆದಾಗ್ಯೂ ಸಿಬ್ಬಂದಿಗಳು ಪರೀಕ್ಷೆಗೆ ಅವಕಾಶ ಕೊಟ್ಟಿಲ್ಲ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular