HomeIndiaBIG NEWS: ಎಲ್.ಕೆ.ಅಡ್ವಾಣಿ ಭೇಟಿಯಾಗಿ ಆಶಿರ್ವಾದ ಪಡೆದ ನರೇಂದ್ರ ಮೋದಿ

BIG NEWS: ಎಲ್.ಕೆ.ಅಡ್ವಾಣಿ ಭೇಟಿಯಾಗಿ ಆಶಿರ್ವಾದ ಪಡೆದ ನರೇಂದ್ರ ಮೋದಿ

ನವದೆಹಲಿ: ಎನ್ ಡಿಎ ಸಂಸದೀಯ ನಾಯಕರಾಗಿ ನರೇಂದ್ರ ಮೋದಿ ಆಯ್ಕೆಯಾಗಿದ್ದು, ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆಸಿದ್ದಾರೆ.

ಜೂನ್ 9ರಂದು ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇಂದು ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ನಡೆದ ಸಭೆ ಬಳಿಕ ಬಿಜೆಪಿ ಭೀಷ್ಮ ಎಲ್.ಕೆ.ಅಡ್ವಾಣಿ ಅವರ ನಿವಾಸಕ್ಕೆ ತೆರಳಿದರು. ಈ ವೇಳೆ ಕೆಲಕಾಲ ಅಡ್ವಾಣಿ ಜೊತೆ ಸಮಾಲೋಚನೆ ನಡೆಸಿದ ನರೇಂದ್ರ ಮೋದಿ ಅವರ ಆಶಿರ್ವಾದ ಪಡೆದರು.

ಅಡ್ವಾಣಿ ನಿವಾಸದಿಂದ ನೇರವಾಗಿ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ನಿವಾಸಕ್ಕೆ ತೆರಳಿ ಆಶಿರ್ವಾದ ಪಡೆದರು. ಬಳಿಕ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ನರೇಂದ್ರ ಮೋದಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಈ ವೇಳೆ ಎನ್ ಡಿಎ ನಿಯೋಗ ಸಾಥ್ ನೀಡಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular