HomeEntertainment'ಯಾವೋ ಇವೆಲ್ಲಾ' ಚಿತ್ರದ ಟ್ರೈಲರ್ ರಿಲೀಸ್

‘ಯಾವೋ ಇವೆಲ್ಲಾ’ ಚಿತ್ರದ ಟ್ರೈಲರ್ ರಿಲೀಸ್

ಹರೀಶ್ ಸಾ ರಾ ನಿರ್ದೇಶನದ ‘ಯಾವೋ ಇವೆಲ್ಲಾ’ ಚಿತ್ರದ ಟ್ರೈಲರ್ ಅನ್ನು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಹರೀಶ್ ಸಾ ರಾ ನಿರ್ದೇಶಸಿ ನಾಯಕನಟನಾಗಿ ಅಭಿನಯಿಸಿರುವ ಈ ಸಿನಿಮಾ ಈಗಾಗಲೇ ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಸುಜಾತ ಎಸ್ ನಿರ್ಮಾಣ ಮಾಡಿದ್ದು, ಹರೀಶ್ ಸೇರಿದಂತೆ, ಜಗನ್ ಶೇಟ್, ಶಿಲ್ಪ ನಾಯಕ್, ಕಾವ್ಯ ಗೌಡ, ಮೌನಿಕ ಪೂಜಾರಿ, ಪಾಲಾಕ್ಷ, ಹನುಮಂತ ಮೂರ್ತಿ ಮತ್ತು ಕೀರ್ತಿ ವೆಂಕಟೇಶ್  ತೆರೆ ಹಂಚಿಕೊಂಡಿದ್ದಾರೆ. ಸುನೈ ಎಸ್ ಜೈನ್ ಸಂಕಲನ, ಗಿರೀಶ್ ಶಿರಗನಹಳ್ಳಿ ಛಾಯಾಗ್ರಹಣ, ಹಾಗೂ ಸಚಿನ್ ನೃತ್ಯ ನಿರ್ದೇಶನವಿದೆ. ಹರ್ಷ ಕಾಗೋಡ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular