ಬೆಂಗಳೂರು : ಹೊಸ ವರ್ಷಾಚರಣೆ ದಿನ ‘ನಮ್ಮ ಮೆಟ್ರೋ’ ( Namma Metro) ಭರ್ಜರಿ ಕಲೆಕ್ಷನ್ ಮಾಡಿದೆ. ಹೌದು, ನಮ್ಮ ಮೆಟ್ರೋ ನಿನ್ನೆ ಒಂದೇ ದಿನ 3 ಕೋಟಿ ಆದಾಯ ಗಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಿನ್ನೆ ಒಂದೇ ದಿನ 8,93,903 ಮಂದಿ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದು, ಒಂದೇ ದಿನ 3 ಕೋಟಿ 8 ಲಕ್ಷ ಆದಾಯ ಗಳಿಸಿದೆ. ನಿನ್ನೆ ಬೆಳಗ್ಗೆ 5 ರಿಂದ ಬೆಳಗಿನ ಜಾವ 3 :10 ರವರೆಗೆ ನಮ್ಮ ಮೆಟ್ರೋ ನಗರದ ವಿವಿಧ ಭಾಗಗಳಿಗೆ ಸಂಚರಿಸಿದೆ. ಹೊಸ ವರ್ಷಾಚರಣೆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದಾರೆ.
ಹೊಸ ವರ್ಷಾಚರಣೆ ಪ್ರಯುಕ್ತ ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ರೈಲು ಸೇವೆ ಅವಧಿಯನ್ನು ವಿಸ್ತರಣೆ ಮಾಡಿತ್ತು. ಪ್ರತಿ 8 ನಿಮಿಷಕ್ಕೊಂದು ರೈಲು ಬಿಡಲಾಗಿತ್ತು.
ಹೊಸ ವರ್ಷದ ಶುಭಾಶಯ ಕೋರಿದ ನಮ್ಮ ಮೆಟ್ರೋ
“ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಎಲ್ಲ ಪ್ರಯಾಣಿಕರಿಗೆ ಹೊಸ ವರ್ಷ 2026ರ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ. ನಮ್ಮೊಂದಿಗೆ ಪ್ರಯಾಣಿಸುತ್ತಿರುವುದಕ್ಕೆ ಧನ್ಯವಾದಗಳು. ಎಂದು ಬಿಎಂಆರ್ ಸಿಎಲ್ ಟ್ವೀಟ್ ಮಾಡಿದೆ.

