HomeLatest NewsBREAKING : 15 ದಿನಗಳ ಹಿಂದಷ್ಟೇ ವರ್ಗಾವಣೆಯಾಗಿದ್ದ 'RFO' ಮೈಸೂರಿನಲ್ಲಿ ನಿಗೂಢ ಸಾವು.!

BREAKING : 15 ದಿನಗಳ ಹಿಂದಷ್ಟೇ ವರ್ಗಾವಣೆಯಾಗಿದ್ದ ‘RFO’ ಮೈಸೂರಿನಲ್ಲಿ ನಿಗೂಢ ಸಾವು.!

ಮೈಸೂರು : ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಆರ್ ಎಫ್ ಒ ಶವವಾಗಿ ಪತ್ತೆಯಾದ ಘಟನೆ ಮೈಸೂರು ಕೇಂದ್ರ ಬಸ್ ನಿಲ್ದಾಣದ ಬಳಿಯಿರುವ ಹೋಟೆಲ್ ನಲ್ಲಿ ನಡೆದಿದೆ.

ಟಿ ನರಸೀಪುರ ಆರ್ ಎಫ್ ಒ ಕಾಂತರಾಜ್ ಚೌಹಾಣ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕಾಂತರಾಜ್ ಅವರು 15 ದಿನದ ಹಿಂದೆಯಷ್ಟೇ ನರಸೀಪುರಕ್ಕೆ ವರ್ಗಾವಣೆಯಾಗಿದ್ದರು ಯುವರಾಜ್ ಗೆಲಾಕ್ಸಿ ಹೋಟೆಲ್ ಸಮೀಪದ ಕುಮಾರನ್ ಜ್ಯುವೆಲರ್ಸ್ ಹಿಂಭಾಗದ ಕಾರಿಡಾರ್ ನಲ್ಲಿ ಕಾಂತರಾಜ್ ಶವವಾಗಿ ಪತ್ತೆಯಾಗಿದ್ದಾರೆ. ಅವರ ಜೊತೆ ಸ್ನೇಹಿತ ಮಲ್ಲನಗೌಡ ಕೂಡ ಹೋಟೆಲ್ ರೂಂ ನಲ್ಲಿ ತಂಗಿದ್ದರು ಎನ್ನಲಾಗಿದ್ದು, ಸದ್ಯ ಅವರು ನಾಪತ್ತೆಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular