HomeLatest Newsಒತ್ತುವರಿ ಜಾಗ ಪರಿಶೀಲಿಸಲು ಹೋಗಿದ್ದ ಮಹಿಳಾ ಅಧಿಕಾರಿಗೆ ಧಮ್ಕಿ ಪ್ರಕರಣ: 20 ಎಕರೆ ಜಾಗ ವಶಕ್ಕೆ...

ಒತ್ತುವರಿ ಜಾಗ ಪರಿಶೀಲಿಸಲು ಹೋಗಿದ್ದ ಮಹಿಳಾ ಅಧಿಕಾರಿಗೆ ಧಮ್ಕಿ ಪ್ರಕರಣ: 20 ಎಕರೆ ಜಾಗ ವಶಕ್ಕೆ ಪಡೆದ ಸರ್ಕಾರ

ಮೈಸೂರು: ಒತ್ತುವರಿ ಜಾಗ ಪರಿಶೀಲನೆಗೆ ತೆರಳಿದ್ದ ಮಹಿಳಾ ಅಧಿಕಾರಿಗೆ ವ್ಯಕ್ತಿಯೋರ್ವ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲೇ ಧಮ್ಕಿ ಹಾಕಿ ಬೆದರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒತ್ತುವರಿಯಾಗಿದ್ದ 20 ಎಕರೆ ಜಾಗವನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆದುಕೊಂಡಿದೆ.

ಮೈಸೂರು ಜಿಲ್ಲೆಯ ಗುಡಮಾದನಹಳ್ಳಿಯ ಗ್ರಾಮದಲ್ಲಿ ಒತ್ತುವರಿಯಾಗಿದ್ದ 20 ಎಕರೆ ಜಾಗವನ್ನು ಮೈಸೂರು ತಹಶಿಲ್ದಾರ್ ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಒತ್ತುವರುಯಾಗಿದ್ದ ಜಾಗವನ್ನು ಸರ್ಕಾರದ ವಶಕ್ಕೆ ಪಡೆದಿದ್ದಾರೆ.

ಕೆಲ ದಿನಗಳ ಹಿಂದೆ ಗುಡಮಾದನಹಳ್ಳಿಯಲ್ಲಿ ಒತ್ತುವರಿಯಾಗಿದ್ದ ಜಾಗ ವೀಕ್ಷಣೆಗೆ ತೆರಳಿದ್ದ ಗ್ರಾಮ ಆಡಳಿತ ಮಹಿಳಾ ಅಧಿಕಾರಿ ಜಿ.ಭವ್ಯ ಅವರಿಗೆ ಜಿ.ಎಂ.ಪುಟ್ಟಸ್ವಾಮಿ ಎಂಬುವವರು ಬೆದರಿಕೆ ಹಾಕಿ ಧಮ್ಕಿ ಹಾಕಿದ್ದರು. ಮಹಿಳಾ ಅಧಿಕಾರಿ ಹಾಗೂ ಗ್ರಾಮ ಸಹಾಯಕ ಇಬ್ಬರಿಗೂ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದರು. ಭೂಮಿ ವಶಕ್ಕೆ ಪಡೆಯದಂತೆ ರೈತರು ಕೂಡ ಪ್ರತಿಭಟನೆ ನಡೆಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ತಹಶಿಲ್ದಾರ್ ಮಹೇಶ್, ಸ್ಥಳಕ್ಕೆ ತೆರಳಿ ರೈತರಿಗೆ ತಿಳಿ ಹೇಳಿ, ಇದು ಸರ್ಕಾರಿ ಜಾಗವಾಗಿದ್ದು, ಒತ್ತುವರುಯಾಗಿತ್ತು ಎಂದು ಸ್ಪಷ್ಟಪಡಿರೆ. ರೈತರು ಪ್ರತಿಭಟನೆ ಹಿಂಪಡೆದ ಬಳಿಕ ಒತ್ತುವರಿಯಾಗಿದ್ದ 20 ಎಕರೆ ಜಾಗವನ್ನು ಸರ್ಕಾರದ ವಶಕ್ಕೆ ಪಡೆದರು.

For Latest News Updates, Join Our Whatsapp Community🚩
RELATED ARTICLES

Most Popular