HomeKarnatakaBREAKING NEWS : ಆಸ್ತಿ ವಿವಾದ : ತಮ್ಮನನ್ನೇ ಕೊಚ್ಚಿ ಕೊಲೆಗೈದ ಅಣ್ಣಂದಿರು

BREAKING NEWS : ಆಸ್ತಿ ವಿವಾದ : ತಮ್ಮನನ್ನೇ ಕೊಚ್ಚಿ ಕೊಲೆಗೈದ ಅಣ್ಣಂದಿರು

ಗದಗ: ಆಸ್ತಿ ವಿವಾದಕ್ಕೆ ಆರಂಭವಾದ ಗಲಾಟೆ ಸಹೋದರನ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ. ಆಸ್ತಿ ವಿಚಾರವಾಗಿ ತಮ್ಮನನ್ನೇ ಕೊಚ್ಚಿ ಅಣ್ಣಂದಿರು ಕೊಲೆಗೈದಿರುವ ಅಮಾನವೀಯ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಕೊಡಲಿಯಿಂದ ಕೊಚ್ಚಿ ಶೇಖಪ್ಪ ನವಲಗುಂದ (35) ಎಂಬಾತನನ್ನು ಅಣ್ಣಂದಿರೇ ಬರ್ಬರವಾಗಿ ಹತ್ಯೆಗೈದಿದ್ದಾರೆ. ಸ್ಥಳದಲ್ಲಿ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.  ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular