HomeKarnatakaBREAKING : ಭೀಮಾ ನದಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ ತಾಯಿಯೂ ಸಾವು

BREAKING : ಭೀಮಾ ನದಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ ತಾಯಿಯೂ ಸಾವು

ವಿಜಯಪುರ: ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ದುರಂತ ಸಂಭವಿಸಿದ್ದು, ನದಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ ತಾಯಿಯೂ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲೆಯ ಇಂಡಿ ತಾಲೂಕಿನ ಖೇಡಗಿ ಗ್ರಾಮದಲ್ಲಿ ನಡೆದಿದೆ.

ಗೀತಾ ಹೊನ್ನರ (38) ಶೋಭಿತಾ (11), ವಾಸುದೇವ (10) ಮೃತರು. ಬೀಮಾ ನದಿಯ ಗುಂಡಿಯಲ್ಲಿ ತಾಯಿ ಗೀತಾ ಬಟ್ಟೆ ತೊಳೆಯುತ್ತಿದ್ದರು. ಈ ವೇಳೆ ಮಕ್ಕಳಾದ ಶೋಭಿತಾ ಹಾಗೂ ವಾಸುದೇವ ನೀರಿನ ಗುಂಡಿಗೆ ಬಿದ್ದಿದ್ದಾರೆ. ಮಕ್ಕಳಿಬ್ಬರನ್ನು ರಕ್ಷಿಸಲು ಹೋಗಿ ಸಾಧ್ಯವಾಗದೇ ಗೀತಾ ಕೂಡ ನೀರಿನಲ್ಲಿ ಮುಳುಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾಯಿ ಹಾಗೂ ಇಬ್ಬರು ಮಕ್ಕಳು ಬೀಮಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular