HomeBusinessಎನ್‌ಎಸ್‌ಇ ವೇದಿಕೆಯಲ್ಲಿ ಉದ್ಯೋಗಿಗಳಿಗೆ ಗೌರವ: 600 ಫೋಟೋಗಳೊಂದಿಗೆ ಕೋಟ್ ಧರಿಸಿದ ಉದ್ಯಮಿ

ಎನ್‌ಎಸ್‌ಇ ವೇದಿಕೆಯಲ್ಲಿ ಉದ್ಯೋಗಿಗಳಿಗೆ ಗೌರವ: 600 ಫೋಟೋಗಳೊಂದಿಗೆ ಕೋಟ್ ಧರಿಸಿದ ಉದ್ಯಮಿ

ಮುಂಬೈ: ಸಾಮಾನ್ಯವಾಗಿ ಕಂಪನಿಯೊಂದು ಷೇರು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ ಎಂದರೆ ಅಲ್ಲಿ ಸಂಭ್ರಮದ ಜೊತೆಗೆ ಗಾಂಭೀರ್ಯವೂ ಇರುತ್ತದೆ. ಆದರೆ ಕ್ಲೀನ್ ಮ್ಯಾಕ್ಸ್ ಎನ್ವಿರೋ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ ಕಂಪನಿಯ ಎನ್ಎಸ್ಇ ಲಿಸ್ಟಿಂಗ್ ವೇಳೆ ಕಂಡುಬಂದ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕುಲದೀಪ್ ಜೈನ್ ಅವರು ತಮ್ಮ ಯಶಸ್ಸಿನ ಹಿಂದಿರುವ 600 ಉದ್ಯೋಗಿಗಳನ್ನು ಗೌರವಿಸಲು ಅಳವಡಿಸಿಕೊಂಡ ಹಾದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಲಿಸ್ಟಿಂಗ್ ಸಮಾರಂಭದ ವೇಳೆ ಕುಲದೀಪ್ ಜೈನ್ ಅವರು ವಿಶೇಷವಾದ ಜಾಕೆಟ್ ಧರಿಸಿದ್ದರು. ಮೊದಲ ನೋಟಕ್ಕೆ ಇದು ಸಾಮಾನ್ಯ ವಿನ್ಯಾಸದಂತೆ ಕಂಡರೂ ಹತ್ತಿರದಿಂದ ನೋಡಿದಾಗ ಆ ಜಾಕೆಟ್ ಮೇಲೆ ಕಂಪನಿಯ ಎಲ್ಲಾ 600 ಉದ್ಯೋಗಿಗಳ ಭಾವಚಿತ್ರಗಳಿರುವುದು ಕಂಡುಬಂದಿದೆ. ಈ ಮೂಲಕ ತಾವು ಇಂದು ಈ ಹಂತಕ್ಕೆ ತಲುಪಲು ಪ್ರತಿಯೊಬ್ಬ ಉದ್ಯೋಗಿಯ ಶ್ರಮವಿದೆ ಎಂಬ ಸಂದೇಶವನ್ನು ಅವರು ಸಾರಿದ್ದಾರೆ.

ಈ ಬಗ್ಗೆ ಕಂಪನಿಯ ಮುಖ್ಯ ಸಂಸ್ಕೃತಿ ಅಧಿಕಾರಿ ಶ್ವೇತಾ ಸಜ್ನಾನಿ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು ಈ ವಿಶಿಷ್ಟ ಜಾಕೆಟ್ ಸಿದ್ಧಪಡಿಸಿದ ಹಿಂದಿನ ಶ್ರಮವನ್ನು ವಿವರಿಸಿದ್ದಾರೆ. ಕೇವಲ ಷೇರು ಮಾರುಕಟ್ಟೆಯ ಗಂಟೆ ಬಾರಿಸುವುದು ಕುಲದೀಪ್ ಅವರ ಉದ್ದೇಶವಾಗಿರಲಿಲ್ಲ ಬದಲಾಗಿ ಈ ಸಾಧನೆ ಪ್ರತಿಯೊಬ್ಬರದೂ ಎಂದು ತೋರಿಸುವುದು ಅವರ ಗುರಿಯಾಗಿತ್ತು. 600 ಜನರ ಫೋಟೋಗಳನ್ನು ಸಮರ್ಪಕವಾಗಿ ವಿನ್ಯಾಸಗೊಳಿಸಿ ಈ ಜಾಕೆಟ್ ಸಿದ್ಧಪಡಿಸುವುದು ದೊಡ್ಡ ಸವಾಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಅಪರೂಪದ ಗೌರವದಿಂದಾಗಿ ಉದ್ಯೋಗಿಗಳಲ್ಲಿ ಕಂಪನಿಯ ಬಗ್ಗೆ ಹೆಚ್ಚಿನ ಅಭಿಮಾನ ಮೂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ಹರಿದಾಡುತ್ತಿದ್ದು ಉದ್ಯೋಗಿ ಸ್ನೇಹಿ ನಾಯಕತ್ವಕ್ಕೆ ಇದು ಅತ್ಯುತ್ತಮ ಉದಾಹರಣೆ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಅಂದಹಾಗೆ ಕ್ಲೀನ್ ಮ್ಯಾಕ್ಸ್ ಎನ್ವಿರೋ ಎನರ್ಜಿ ಕಂಪನಿಯು ಸೌರ ಮತ್ತು ಮಾರುತ ಶಕ್ತಿಯಂತಹ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಸುಮಾರು 3,100 ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಕೊಡುಗೆಯೊಂದಿಗೆ ಈ ಸಂಸ್ಥೆ ಈಗ ಅಧಿಕೃತವಾಗಿ ಎನ್ಎಸ್ಇನಲ್ಲಿ ವಹಿವಾಟು ಆರಂಭಿಸಿದೆ.

https://www.linkedin.com/feed/?trk=public_post_embed_linkedin-logo-image

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular