ಶಿವಮೊಗ್ಗ : ಸೇನಾಧಿಕಾರಿಗಳು, ಸೇನಾ ನೇಮಕಾತಿ ಕಛೇರಿ, ಮಂಗಳೂರು ಇವರಿಂದ ಅಗ್ನಿಪಥ್ ಯೋಜನೆಯಡಿ ಸೇನೆಗೆ ಸೇರಬಯಸುವ ಆಸಕ್ತ ಯುವಕ/ಯುವತಿಯರಿಗಾಗಿ ಸೇನಾಪಡೆಗಳಲ್ಲಿ ಲಭ್ಯವಿರುವ ಸವಲತ್ತು-ಅವಕಾಶಗಳ ಕುರಿತ ಸಮಗ್ರ ಉಪನ್ಯಾಸವನ್ನು ಮಾ.06 ರಂದು ಬೆಳಿಗ್ಗೆ 10.30 ಕ್ಕೆ ಮಾಜಿ ಸೈನಿಕರ ಸಂಘಗಳ ಸಹಯೋಗದೊಂದಿಗೆ ಶ್ರೀ ಜಗದ್ಗುರು ಪಂಚಾಚಾರ್ಯ ಐ.ಟಿ.ಐ ಕಾಲೇಜು, ಬೈಪಾಸ್ ರಸ್ತೆ, ಶಿವಮೊಗ್ಗ ಹಾಗೂ ಮಧ್ಯಾಹ್ನ 2.00 ಕ್ಕೆ ಮತ್ತು ಮಾಜಿ ಸೈನಿಕರ ಕಲ್ಯಾಣ ಟ್ರಸ್ಟ್ ಇವರ ಸಹಯೋಗದೊಂದಿಗೆ ಎಲ್.ಬಿ.ಎಸ್. ಕಾಲೇಜ್, ಸಾಗರ ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ಆಸಕ್ತ ವಿದ್ಯಾರ್ಥಿಗಳು, ಯುವಕ/ಯುವತಿಯರು ಶೀಘ್ರದಲ್ಲಿಯೇ ಆರಂಭಗೊಳ್ಳಲಿರುವ ಸೇನಾ ನೇಮಕಾತಿ ಪ್ರಕ್ರಿಯೆ ಕುರಿತ ಈ ಉಚಿತ “ಮಾಹಿತಿ ಕಾರ್ಯಾಗಾರ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಯೋಜನವನ್ನು ಪಡೆಯುವಂತೆ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 08182-220925 ಸಂಖ್ಯೆಗೆ ಕಛೇರಿ ವೇಳೆಯಲ್ಲಿ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ .
ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಶಿವಮೊಗ್ಗ : ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಅಟೆಂಡೆಂಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
www.rbi.org.in/ ಎಂಬ ಬ್ಯಾಂಕಿನ ಜಾಲತಾಣದಲ್ಲಿ recruitment for the post of assistant-panel year 2025 ಎಂಬುದನ್ನು ಕ್ಲಿಕ್ ಮಾಡುವುದರ ಮೂಲಕ ಮಾರ್ಚ್ 08 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಬ್ಯಾಂಕಿನ ವೆಬ್‌ಸೈಟ್ www.rbi.org.in ನ್ನು ಸಂಪರ್ಕಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು(ಪ್ರಭಾರ) ಡಾ.ಸಿ.ಎ.ಹಿರೇಮಠ ತಿಳಿಸಿದ್ದಾರೆ

