ಲಖನೌ: ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿ ಬೆನ್ನಲ್ಲೇ ಹಲವೆಡೆ ಮಂಗನ ಕಾಟವೂ ಆರಂಭವಾಗಿದೆ. ಕೋತಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ವೃದ್ಧೆಯೊಬ್ಬರು ಮನೆಯ ಮಹಡಿಯಿಂದ ಹಾರಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರು ಘಟನೆ ನಡೆದಿದೆ.
ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಆದಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಪ್ಸರಾ ಗ್ರಾಮದಲ್ಲಿ ಘಟನೆ ನಡೆದಿದೆ. ವೃದ್ಧೆ ಮನೆಯ ಛಾವಣಿಯಲ್ಲಿ ಕುಳಿದಿದ್ದರು. ಈ ವೇಳೆ ಮಂಗಗಳ ಗುಂಪು ಛಾವಣಿಗೆ ಬಂದಿವೆ. ಆತಂಕಗೊಂಡ ವೃದ್ಧೆ ಮಂಗನ ದಾಳಿಯಿಂದ ತಪ್ಪಿಸಿಕೊಳ್ಳಲು ಛಾವಣಿಯಿಂದ ಕೆಳಗೆ ಹಾರಿದ್ದಾರೆ.
ಹೀಗೆ ಹಾರಿದ ವೃದ್ಧೆಯ ತಲೆಯ ಭಾಗಕ್ಕೆ ಗಂಭೀರವಾದ ಪೆಟ್ಟು ಬಿದ್ದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮುನ್ನಾ ಮೃತ ವೃದ್ಧೆ. ವರದಿಗಳ ಪ್ರಕಾರ ಪಪ್ಸರಾ ಗ್ರಾಮದ ನಿವಾಸಿ ಮುನ್ನಾ ಎಂಬುವವರು ತಮ್ಮ ಮನೆಯ ಛಾವಣಿಯ ಮೇಲೆ ಕುಳಿತಿದ್ದರು. ಈ ವೇಳೆಕೋತಿಗಳ ಗುಂಪು ಛಾವಣಿಯ ಮೇಲೆ ಓಡಿ ಬಂದಿವೆ. ಮಹಿಳೆ ಭಯಗೊಂಡು ಎದ್ದು ನಿಂತಿದ್ದರು. ಅಷ್ಟರಲ್ಲಿ ಕೋತಿಗಳು ಅವರ ಮೇಲೆ ದಾಳಿ ಮಾಡಿದ್ದವು. ಗಾಬರಿಗೊಂಡ ಮಹಿಳೆ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಸಾಧ್ಯವಾಗಿಲ್ಲ. ಈ ವೇಳೆ ಮೇಲಿನಿಂದ ಕೆಳಗೆ ಹಾರಿದ್ದಾರೆ.
ಬಿದ್ದ ಪರಿಣಾಮ ಅವರ ದೇಹದ ಹಲವು ಭಾಗಗಳು ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣ ಕುಟುಂಬದವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಘಟನೆಗಳ ಬಗ್ಗೆ ಮಾಹಿತಿ ಪಡೆದಿದ್ದಿದ್ದಾರೆ.

