HomeKarnataka‘ಪ್ಲೀಸ್ ನನ್ನನ್ನು ಬಂಧಿಸಿ’..! ; 'SIT' ಅಧಿಕಾರಿಗಳಿಗೆ ಮನವಿ ಮಾಡಿದ ಶಾಸಕ ದದ್ದಲ್

‘ಪ್ಲೀಸ್ ನನ್ನನ್ನು ಬಂಧಿಸಿ’..! ; ‘SIT’ ಅಧಿಕಾರಿಗಳಿಗೆ ಮನವಿ ಮಾಡಿದ ಶಾಸಕ ದದ್ದಲ್

ಬೆಂಗಳೂರು : ಎಸ್ಐಟಿ ವಶದಲ್ಲಿರುವ ಶಾಸಕ ಬಸವನಗೌಡ ದದ್ದಲ್ ‘ನನ್ನನ್ನು ಬಂಧಿಸಿ’ ಎಂದು ಎಸ್ ಐ ಟಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಸ್ ಐ ಟಿ ಅಧಿಕಾರಿಗಳ ಎದುರು ಶಾಸಕ ದದ್ದಲ್ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ವೇಳೆ ಶಾಸಕ ದದ್ದಲ್ ಅವರು ನನ್ನನ್ನು ಬಂಧಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಇಡಿ ಇಕ್ಕಳದಿಂದ ತಪ್ಪಿಸಿಕೊಳ್ಳಲು ತಮ್ಮನ್ನು ಬಂಧಿಸುವಂತೆ ಅವರು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಹೊರಗಡೆ ಬಂದರೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಶಾಸಕ ದದ್ದಲ್ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಈ ಹಿನ್ನೆಲೆ ಅವರು ಎಸ್ ಐ ಟಿ ಅಧಿಕಾರಿಗಳಿಗೆ ಈ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಮಾಜಿ ಸಚಿವ ಬಿ. ನಾಗೇಂದ್ರ ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್ ನಿವಾಸಗಳ ಮೇಲೆ ನಿನ್ನೆ ಆರಂಭವಾದ ಇಡಿ ಶೋಧಕಾರ್ಯ ನಿನ್ನೆ ರಾತ್ರಿ, ಇಂದು ಮುಂಜಾನೆ ಕೂಡ ಮುಂದುವರಿದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular