ಬೆಳಗಾವಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಖಣದಾಳ ಗ್ರಾಮದ ಹುಲಿ ಕಾಂತೇಶ್ವರ ದೇವರ ಹುಂಡಿಯಲ್ಲಿ ಹರಕೆ ಚೀಟಿ ಎಂದು ಪತ್ತೆಯಾಗಿದೆ.
ದೇವರೇ ನನ್ನ ಕಷ್ಟ ದೂರಮಾಡು, ಮುಂದಿನ ಜಾತ್ರೆಯೊಳಗೆ ನಮ್ಮ ಅತ್ತೆ ಸಾಯಲಿ ಎಂದು ಅದರಲ್ಲಿ ಬರೆಯಲಾಗಿದೆ. ಫೆಬ್ರವರಿ 11 ರಿಂದ 17ರ ವರೆಗೆ ಹುಲಿ ಕಾಂತೇಶ್ವರ ದೇವರ ಜಾತ್ರೆ ನಡೆದಿದ್ದು, ಈ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಫೆಬ್ರವರಿ 19ರಂದು ದೇವಾಲಯ ಕಮಿಟಿಯವರು ಹುಂಡಿ ತೆರೆದು ಕಾಣಿಕೆ ಹಣ ಎಣಿಸುವಾಗ ನೂರು ಮತ್ತು ಹತ್ತು ರೂಪಾಯಿ ನೋಟಿನೊಳಗೆ ಸುತ್ತಲಾಗಿದ್ದ ಚೀಟಿ ಪತ್ತೆಯಾಗಿದೆ. ಅದರಲ್ಲಿ, ದೇವರೇ ನನ್ನ ಕಷ್ಟ ದೂರ ಮಾಡು, ಮುಂದಿನ ಜಾತ್ರೆಯೊಳಗೆ ನಮ್ಮ ಅತ್ತೆ ಸಾಯಲಿ ಎಂದು ಬರೆಯಲಾಗಿದೆ. ಇದನ್ನು ಅತ್ತೆ ಮೇಲಿನ ದ್ವೇಷದಿಂದ ಸೊಸೆಯೋ ಅಥವಾ ಅಳಿಯನೋ ಬರೆದಿರಬಹುದು ಎಂದು ಹೇಳಲಾಗಿದೆ.

