HomeEntertainmentಸೆಪ್ಟಂಬರ್ ಮೂರಕ್ಕೆ ಬಿಡುಗಡೆಯಾಗಲಿದೆ 'ಮಾರ್ಟಿನ್' ಚಿತ್ರದ ಮೊದಲ ಹಾಡು

ಸೆಪ್ಟಂಬರ್ ಮೂರಕ್ಕೆ ಬಿಡುಗಡೆಯಾಗಲಿದೆ ‘ಮಾರ್ಟಿನ್’ ಚಿತ್ರದ ಮೊದಲ ಹಾಡು

ಎಪಿ ಅರ್ಜುನ್ ನಿರ್ದೇಶನದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ‘ಮಾರ್ಟಿನ್’ ಈಗಾಗಲೇ ತನ್ನ ಟೀಸರ್ ಹಾಗೂ ಟ್ರೈಲರ್ ನಿಂದಲೇ ಸಾಕಷ್ಟು ಸದ್ದು ಮಾಡಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ಧ್ರುವ ಸರ್ಜಾ ಅಭಿಮಾನಿಗಳಿಗೆ ಇದೀಗ ಸಿಹಿ ಸುದ್ದಿ ಒಂದನ್ನು ನೀಡಲಾಗಿದ್ದು, ಇದೇ ಸೆಪ್ಟೆಂಬರ್ ಮೂರರಂದು ಮಾರ್ಟಿನ್ ಚಿತ್ರದ ಮೊದಲ ಹಾಡು youtubeನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಈ ಚಿತ್ರವನ್ನು ವಾಸವಿ ಎಂಟರ್ಪ್ರೈಸಸ್ ಬ್ಯಾನರ್ ನಲ್ಲಿ ಉದಯ್ ಕೆ ಮೆಹ್ತಾ ಮತ್ತು ಸೂರಜ್ ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದು, ಧ್ರುವ ಸರ್ಜಾ ಅವರಿಗೆ ಜೋಡಿಯಾಗಿ ವೈಭವಿ ಶಾಂಡಿಲ್ಯ ಅಭಿನಯಿಸಿದ್ದಾರೆ. ಇನ್ನುಳಿದಂತೆ ಅನ್ವೇಶಿ ಜೈನ್, ಜಾರ್ಜಿಯಾ ಆಂಡ್ರಿಯಾನಿ, ಚಿಕ್ಕಣ್ಣ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ನಿಕಿತಿನ್ ಧೀರ್, ನವಾಬ್ ಷಾ, ರೋಹಿತ್ ಪಾಠಕ್, ನಾಥನ್ ಜೋನ್ಸ್, ರೂಬಿಲ್ ಮೂರ್ತಿ ಕೃಷ್ಣಾ ದಿಯಾಲಾಗ್ ಗೋಪಿ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಮಣಿ ಶರ್ಮಾ ಸಂಗೀತ ಸಂಯೋಜನೆ ನೀಡಿದ್ದು, ಕೆಎಮ್ ಪ್ರಕಾಶ್ ಸಂಕಲನ,ಇಮ್ರಾನ್ ಸರ್ಧಾರಿಯಾ ಹಾಗೂ ವಿ ಮುರಳಿ ಅವರ ನೃತ್ಯ ನಿರ್ದೇಶನ,   ಗೋಪಿನಾಥ್ ಕೃಷ್ಣಮೂರ್ತಿ ಮತ್ತು  ಎ.ಪಿ ಅರ್ಜುನ್  ಸಂಭಾಷಣೆ, ಸತ್ಯ ಹೆಗಡೆ  ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular