HomeEntertainmentಪವಿತ್ರಾಗೌಡ ಮನೆಯಲ್ಲಿದ್ದ ನಾಯಿಗಳು ದರ್ಶನ್ ಮನೆಗೆ ಸ್ಥಳಾಂತರ

ಪವಿತ್ರಾಗೌಡ ಮನೆಯಲ್ಲಿದ್ದ ನಾಯಿಗಳು ದರ್ಶನ್ ಮನೆಗೆ ಸ್ಥಳಾಂತರ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾಗೌಡ ಜೈಲು ಸೇರಿದ್ದು, ಎರಡೂ ಮನೆಯಲ್ಲಿದ್ದ ಶ್ವಾನಗಳು ಸೊರಗಿವೆ.

ದರ್ಶನ್ ಹಾಗೂ ಪವಿತ್ರಾಗೌಡ ಜೈಲು ಸೇರುತ್ತಿದ್ದಂತೆಯೇ ಪವಿತ್ರಾಗೌಡ ಮನೆಯಲ್ಲಿದ್ದ ನಾಯಿಗಳನ್ನು ನೋಡಿಕೊಳ್ಳುವವರು ಇಲ್ಲದೇ ಶ್ವಾನಗಳು ಪರಿತಪಿಸುವಂತಾಗಿವೆ. ಪವಿತ್ರಾ ಮನೆಯಲ್ಲಿದ್ದ ನಾಯಿಗಳನ್ನು ಪವನ್ ಎಂಬಾತ ನೋಡಿಕೊಳ್ಳುತ್ತಿದ್ದ. ಆದರೆ ಆತ ಕೂಡ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದರಿಂದ ನಾಯಿಗಳು ಅನಾಥವಾಗಿವೆ.

ಈ ವಿಷಯ ತಿಳಿಯುತ್ತಿದ್ದಂತೆ ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆಯ ಹರೀಶ್ ಹಾಗೂ ಲೀನಾ ಆರ್.ಆರ್.ನಗರ ಪೊಲೀಸರಿಗೆ ಹಾಗೂ ಪಶುಸಂಗೋಪನಾ ಇಲಾಖೆಯ ಗಮನಕ್ಕೆ ತಂದಿದ್ದರು. ಇದೀಗ ಅಧಿಕಾರಿಗಳ ನೆರವಿನಿಂದ ಪವಿತ್ರಾ ಗೌಡ ಮನೆಯಲ್ಲಿದ್ದ ಬುಲ್ ಡಾಗ್ ಹಾಗೂ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಶ್ವಾನಗಳನ್ನು ದರ್ಶನ್ ಮನೆಗೆ ಶಿಫ್ಟ್ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಳಿದ ಮತ್ತೊಂದು ಶ್ವಾನವನ್ನು ಪವಿತ್ರಾ ಗೌಡ ಸ್ನೇಹಿತರು ತೆಗೆದುಕೊಂಡು ಹೋಗಿದ್ದು, ಸಲಹುತ್ತಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular