HomeInternationalBREAKING NEWS: ಹೆದ್ದಾರಿ ಬಳಿಯೇ ಅಪ್ಪಳಿಸಿದ ವಿಮಾನ: ಕನಿಷ್ಟ 10 ಮಂದಿ ಸಾವು: ಭಯಾನಕ ದೃಶ್ಯ...

BREAKING NEWS: ಹೆದ್ದಾರಿ ಬಳಿಯೇ ಅಪ್ಪಳಿಸಿದ ವಿಮಾನ: ಕನಿಷ್ಟ 10 ಮಂದಿ ಸಾವು: ಭಯಾನಕ ದೃಶ್ಯ ಸೆರೆ

ಕೌಲಾಲಂಪುರ್: ಮಲೇಷಿಯಾದ ಚಾರ್ಟರ್ ಪ್ಲೇನ್ ಕೌಲಾಲಂಪುರ್ ಹೆದ್ದಾರಿ ಬಳಿ ಅಪಘಾತಕ್ಕೀಡಾಗಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ.

ಗುರುವಾರ ಮಲೇಷ್ಯಾದ ಕೌಲಾಲಂಪುರ್‌ ನ ಉತ್ತರಕ್ಕೆ ಎಕ್ಸ್‌ ಪ್ರೆಸ್‌ ವೇಗೆ ಚಾರ್ಟರ್ ವಿಮಾನವೊಂದು ಪತನಗೊಂಡ ನಂತರ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಂಕಾವಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಸುಲ್ತಾನ್ ಅಬ್ದುಲ್ ಅಜೀಜ್ ಷಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಆರು ಪ್ರಯಾಣಿಕರು ಮತ್ತು ಇಬ್ಬರು ವಿಮಾನ ಸಿಬ್ಬಂದಿ ಇದ್ದರು ಎಂದು ಮಲೇಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರದ ಹೇಳಿದೆ.

ಸುಬಾಂಗ್ ಏರ್ ಟ್ರಾಫಿಕ್ ಕಂಟ್ರೋಲ್ ಟವರ್ ನೊಂದಿಗೆ ವಿಮಾನ ಮೊದಲ ಸಂಪರ್ಕ ಪಡೆದು ಮಧ್ಯಾಹ್ನ 2:48 ಕ್ಕೆ ಲ್ಯಾಂಡಿಂಗ್ ಕ್ಲಿಯರೆನ್ಸ್ ನೀಡಲಾಯಿತು. ಮಧ್ಯಾಹ್ನ 2:51 ಕ್ಕೆ(ಸ್ಥಳೀಯ ಕಾಲಮಾನ) ಅಪಘಾತದ ಸ್ಥಳದಿಂದ ಹೊಗೆ ಹೊರಹೊಮ್ಮುತ್ತಿರುವುದನ್ನು ಕಂಟ್ರೋಲ್ ಟವರ್ ಗಮನಿಸಿದೆ ಎಂದು ಹೇಳಿದೆ.

ವಿಮಾನವು ಕಾರ್ ಮತ್ತು ಮೋಟಾರ್‌ ಸೈಕಲ್‌ಗೆ ಅಪ್ಪಳಿಸಿದೆ. ಫೊರೆನ್ಸಿಕ್ ಸಿಬ್ಬಂದಿಗಳು ಅವಶೇಷಗಳನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿದ್ದಾರೆ ಮತ್ತು ಮರಣೋತ್ತರ ಪರೀಕ್ಷೆ ಮತ್ತು ಗುರುತಿನ ಪ್ರಕ್ರಿಯೆಗಾಗಿ ಮೃತದೇಹಗಳನ್ನು ಕ್ಲಾಂಗ್‌ ನಲ್ಲಿರುವ ತೆಂಗು ಅಂಪುವಾನ್ ರಹಿಮಾ ಆಸ್ಪತ್ರೆಗೆ ತರಲಿದ್ದಾರೆ. ಅಪಘಾತದ ದೃಶ್ಯಗಳು ಸೆರೆಯಾದ ವಿಡಿಯೊಗಳು ವೈರಲ್ ಆಗಿವೆ.

https://twitter.com/11O12OO2/status/1692144181697982956

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular