HomeFeatured Newsರುಚಿಯಾದ ಜಲ್ಜೀರಾ ಮನೆಯಲ್ಲೇ ಸುಲಭವಾಗಿ ಮಾಡಿ

ರುಚಿಯಾದ ಜಲ್ಜೀರಾ ಮನೆಯಲ್ಲೇ ಸುಲಭವಾಗಿ ಮಾಡಿ

ಜಲ್ಜೀರಾ ಆರೋಗ್ಯಕ್ಕೆ ಹೇಳಿಮಾಡಿಸಿದಂತಹ ಪಾನೀಯ. ಆಯುರ್ವೇದದ ಔಷಧೀಯ ಗುಣವನ್ನು ಇದು ಹೊಂದಿದೆ. ಜಲ್ಜೀರಾ ಕುಡಿಯೋದ್ರಿಂದ ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತದೆ. ಭೂರಿ ಭೋಜನದ ನಂತರ ಜಲ್ಜೀರಾ ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆಯಾಗುವುದಿಲ್ಲ. ಜಲ್ಜೀರಾವನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು.

ಬೇಕಾಗುವ ಸಾಮಗ್ರಿ : ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಐಸ್ ಕ್ಯೂಬ್ಸ್, ಅರ್ಧ ಇಂಚು ತುರಿದ ಶುಂಠಿ, 2 ಚಮಚ ಜೀರಿಗೆ, ಅರ್ಧ ಚಮಚ ಮಾವಿನಕಾಯಿ ಪುಡಿ, ಬ್ಲಾಕ್ ಸಾಲ್ಟ್, ಎರಡೂವರೆ ಗ್ಲಾಸ್ ನೀರು, ಅರ್ಧ ನಿಂಬೆಹಣ್ಣು, ಅರ್ಧ ಚಮಚ ಕಾಳುಮೆಣಸಿನ ಪುಡಿ.

ತಯಾರಿಸುವ ವಿಧಾನ : ಜೀರಿಗೆಯನ್ನು ಹುರಿದು ಪುಡಿ ಮಾಡಿಕೊಳ್ಳಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸೊಪ್ಪನ್ನು ಬ್ಲೆಂಡರ್ ನಲ್ಲಿ ಹಾಕಿ ರುಬ್ಬಿಕೊಳ್ಳಿ. ದೊಡ್ಡ ಜಗ್ ತೆಗೆದುಕೊಂಡು ಅದರಲ್ಲಿ ನಾಲ್ಕಾರು ಐಸ್ ಕ್ಯೂಬ್ಸ್ ಹಾಕಿ. ತುರಿದ ಶುಂಠಿಯನ್ನು ಬೆರೆಸಿ. ರುಬ್ಬಿಕೊಂಡ ಸೊಪ್ಪಿನ ಮಿಶ್ರಣವನ್ನೂ ಹಾಕಿಕೊಳ್ಳಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೀರಿಗೆ ಪುಡಿ, ಆಮ್ ಚೂರ್ ಪೌಡರ್, ಉಪ್ಪು, 2 ಗ್ಲಾಸ್ ನಷ್ಟು ನೀರು, ನಿಂಬೆ ರಸ, ಕಾಳುಮೆಣಸಿನ ಪುಡಿ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಉಪ್ಪು, ಹುಳಿ ಸರಿಯಾಗಿದೆಯಾ ಅಂತಾ ಚೆಕ್ ಮಾಡಿಕೊಳ್ಳಿ. ಗ್ಲಾಸ್ ಗೆ ಹಾಕಿ ಒಂದೆರಡು ಐಸ್ ಕ್ಯೂಬ್ಸ್ ಬೆರೆಸಿ ಸರ್ವ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular