HomeLifestyleನಿದ್ರೆ ಬರ್ತಿಲ್ಲ, ಸ್ನಾಯು ಸೆಳೆತ ಆಗ್ತಿದೆಯೇ? ದೇಹದಲ್ಲಿ ಈ ಬದಲಾವಣೆಗಳನ್ನು ನಿರ್ಲಕ್ಷಿಸಬೇಡಿ ಮೆಗ್ನೀಸಿಯಮ್ ಕೊರತೆಯ ಪ್ರಮುಖ...

ನಿದ್ರೆ ಬರ್ತಿಲ್ಲ, ಸ್ನಾಯು ಸೆಳೆತ ಆಗ್ತಿದೆಯೇ? ದೇಹದಲ್ಲಿ ಈ ಬದಲಾವಣೆಗಳನ್ನು ನಿರ್ಲಕ್ಷಿಸಬೇಡಿ ಮೆಗ್ನೀಸಿಯಮ್ ಕೊರತೆಯ ಪ್ರಮುಖ ಲಕ್ಷಣಗಳಿವು

ಬೆಂಗಳೂರು: ಮಾನವನ ದೇಹಕ್ಕೆ ಪ್ರೋಟೀನ್, ವಿಟಮಿನ್ ಹಾಗೂ ಕ್ಯಾಲ್ಸಿಯಂ ಎಷ್ಟು ಮುಖ್ಯವೋ, ಹಾಗೆಯೇ ಅಗತ್ಯ ಖನಿಜಾಂಶಗಳ ಪೂರೈಕೆಯೂ ಅಷ್ಟೇ ಅಗತ್ಯ. ದೇಹದ ಪ್ರಮುಖ ದೈಹಿಕ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ಮೆಗ್ನೀಸಿಯಮ್ ಕೊರತೆಯಾದಾಗ ದೇಹದ ಸ್ವಾಸ್ಥ್ಯದಲ್ಲಿ ಏರುಪೇರಾಗುತ್ತದೆ. ಸ್ನಾಯುಗಳ ಕಾರ್ಯ, ನರಗಳ ಚಟುವಟಿಕೆ, ಮೂಳೆಗಳ ಬಲ ಮತ್ತು ದೇಹದಲ್ಲಿ ಶಕ್ತಿ ಉತ್ಪಾದನೆಗೆ ಮೆಗ್ನೀಸಿಯಮ್ ಅತ್ಯಗತ್ಯ. ಆದರೆ ಆಹಾರ ಕ್ರಮದಲ್ಲಿನ ಲೋಪದಿಂದ ದೇಹದಲ್ಲಿ ಮೆಗ್ನೀಸಿಯಮ್ ಮಟ್ಟ ಕಡಿಮೆಯಾದಾಗ, ಅನೇಕರು ಇದನ್ನು ಸಾಮಾನ್ಯ ಆಯಾಸವೆಂದು ಭಾವಿಸಿ ನಿರ್ಲಕ್ಷಿಸುತ್ತಾರೆ.

ಮೆಗ್ನೀಸಿಯಮ್ ಕೊರತೆಯ ಪ್ರಮುಖ ಲಕ್ಷಣಗಳು:

ಸ್ನಾಯುಗಳ ಸೆಳೆತ ಹಾಗೂ ನೋವು: ಮೆಗ್ನೀಸಿಯಮ್ ಸ್ನಾಯುಗಳ ಸಂಕೋಚನ ಮತ್ತು ವಿಶ್ರಾಂತಿಗೆ ನೆರವಾಗುತ್ತದೆ. ಇದರ ಅಭಾವದಿಂದ ಕಾಲುಗಳಲ್ಲಿ ಸೆಳೆತ, ಹಠಾತ್ ನೋವು ಅಥವಾ ಸ್ನಾಯುಗಳಲ್ಲಿ ಒತ್ತಡ ಉಂಟಾಗುತ್ತದೆ.

ನಿರಂತರ ಆಯಾಸ ಮತ್ತು ದೌರ್ಬಲ್ಯ: ಸಾಕಷ್ಟು ನಿದ್ರೆ ಮಾಡಿದ ನಂತರವೂ ದೇಹದಲ್ಲಿ ಆಲಸ್ಯ ಹಾಗೂ ನಿರಂತರ ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿದ್ರಾಹೀನತೆ: ನರಮಂಡಲವನ್ನು ಶಾಂತಗೊಳಿಸುವ ಸಾಮರ್ಥ್ಯ ಮೆಗ್ನೀಸಿಯಮ್‌ಗಿದೆ. ಇದರ ಕೊರತೆಯಿಂದ ಸರಿಯಾಗಿ ನಿದ್ರೆ ಬಾರದಿರುವುದು ಅಥವಾ ರಾತ್ರಿ ಆಗಾಗ್ಗೆ ಎಚ್ಚರಗೊಳ್ಳುವ ಸಮಸ್ಯೆ ಎದುರಾಗುತ್ತದೆ.

ಮನಸ್ಥಿತಿಯಲ್ಲಿ ದಿಢೀರ್ ಬದಲಾವಣೆ: ಮೆದುಳಿನ ಸಮತೋಲನ ತಪ್ಪಿ ಕಿರಿಕಿರಿ, ಚಡಪಡಿಕೆ ಹಾಗೂ ಉದ್ವೇಗ ಕಾಣಿಸಿಕೊಳ್ಳಬಹುದು.

ಹಸಿವಿನ ಅಭಾವ ಹಾಗೂ ಜೀರ್ಣಕ್ರಿಯೆ ತೊಂದರೆ: ಖನಿಜಗಳ ಸಮತೋಲನ ತಪ್ಪುವುದರಿಂದ ಹಸಿವಾಗದಿರುವುದು, ವಾಕರಿಕೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ.

ಮೆಗ್ನೀಸಿಯಮ್ ಕೊರತೆ ನೀಗಿಸಲು ಸೇವಿಸಬೇಕಾದ ಆಹಾರಗಳು:

ಸೊಪ್ಪುಗಳು: ಪಾಲಕ್‌ನಂತಹ ಹಸಿರು ತರಕಾರಿಗಳು.

ಒಣ ಹಣ್ಣುಗಳು: ಬಾದಾಮಿ ಮತ್ತು ಗೋಡಂಬಿ.

ಬೀಜಗಳು : ವಿಶೇಷವಾಗಿ ಕುಂಬಳಕಾಯಿ ಬೀಜಗಳು (ಮೆಗ್ನೀಸಿಯಮ್‌ನ ಮುಖ್ಯ ಆಗರ).

ಇತರ ಆಹಾರಗಳು: ಧಾನ್ಯಗಳು, ಮಸೂರ ಬೇಳೆ ಮತ್ತು ಡಾರ್ಕ್ ಚಾಕೊಲೇಟ್.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular