HomeRecipiesಮತ್ತೆ ಮತ್ತೆ ಸವಿಯಬೇಕೆನಿಸುವ ಮದ್ರಾಸ್ ಮಸಾಲ ಪಾಲ್

ಮತ್ತೆ ಮತ್ತೆ ಸವಿಯಬೇಕೆನಿಸುವ ಮದ್ರಾಸ್ ಮಸಾಲ ಪಾಲ್

ಮಸಾಲ ಸಾಮಾಗ್ರಿಗಳನ್ನು ಬಳಸಿ ಮಾಡುವ ಮದ್ರಾಸ್ ಮಸಾಲ ಪಾಲ್ ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಬೇಕು ಅನಿಸುವ ಒಂದು ಪಾನೀಯ. ಒಮ್ಮೆ ಮನೆಯಲ್ಲಿ ಮಾಡಿ ಇದರ ರುಚಿ ಸವಿದು ನೋಡಿ.

3 ಕಪ್-ಹಾಲು, 3 ಟೇಬಲ್ ಸ್ಪೂನ್-ಸಕ್ಕರೆ, ¼ ಕಪ್-ಬಾದಾಮಿ, ½ ಟೀ ಸ್ಪೂನ್-ಏಲಕ್ಕಿ ಪುಡಿ, 3-ಲವಂಗ, 1 ಪೀಸ್-ಚಕ್ಕೆ, 1 ಟೇಬಲ್ ಸ್ಪೂನ್-ಪಿಸ್ತಾ, ಸ್ವಲ್ಪ ಕೇಸರಿದಳ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾದಾಮಿಯನ್ನು ಅರ್ಧ ಗಂಟೆಗಳ ಕಾಲ ಬಿಸಿ ನೀರಿನಲ್ಲಿ ನೆನೆಸಿಟ್ಟು ಅದರ ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಹಾಲು ಹಾಕಿ ಚಕ್ಕೆ ಪೀಸ್, ಏಲಕ್ಕಿ ಪುಡಿ, ಲವಂಗ ಹಾಕಿ ಸಣ್ಣ ಉರಿಯಲ್ಲಿ ಕುದಿಸಿಕೊಳ್ಳಿ, 3 ಕಪ್ ಹಾಲು 2 ಕಪ್ ಆಗುವವರಗೆ ಕುದಿಸಿಕೊಳ್ಳಿ.

ನಂತರ ಇದಕ್ಕೆ ರುಬ್ಬಿಕೊಂಡ ಬಾದಾಮಿ ಮಿಶ್ರಣ ಹಾಕಿ ಕೇಸರಿದಳ, ಸಕ್ಕರೆ ಸೇರಿಸಿ ಕುದಿಸಿಕೊಳ್ಳಿ. ನಂತರ ಪಿಸ್ತಾ ಚೂರುಗಳನ್ನು ಹಾಕಿ ಗ್ಯಾಸ್ ಆಫ್ ಮಾಡಿದರೆ ರುಚಿಕರವಾದ ಮದ್ರಾಸ್ ಮಸಾಲ ಪಾಲ್ ರೆಡಿ.

For Latest News Updates, Join Our Whatsapp Community🚩
RELATED ARTICLES

Most Popular