HomeKarnatakaBIG NEWS: ನಿಮ್ಮ ವಿಡಿಯೋ ಇದರಲ್ಲಿದೆ; 8 ಜನರ ಸಹಿಯನ್ನೂ ಒಬ್ಬರೇ ಮಾಡಿದ್ದಾರೆ; ಪೆನ್ ಡ್ರೈವ್...

BIG NEWS: ನಿಮ್ಮ ವಿಡಿಯೋ ಇದರಲ್ಲಿದೆ; 8 ಜನರ ಸಹಿಯನ್ನೂ ಒಬ್ಬರೇ ಮಾಡಿದ್ದಾರೆ; ಪೆನ್ ಡ್ರೈವ್ ಬಾಂಬ್ ಸಿಡಿಸಿದ್ದ HDKಗೆ ಎಂ.ಲಕ್ಷ್ಮಣ್ ತಿರುಗೇಟು

ಮೈಸೂರು: ರಾಜ್ಯ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪ ಮಾಡಿ, ಪೆನ್ ಡ್ರೈವ್ ಬಾಂಬ್ ಸಿಡಿಸಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಎಂ.ಲಕ್ಷ್ಮಣ್, ಪೆನ್ ಡ್ರೈವ್ ತೋರಿಸಿ ದಾಖಲೆ ಇದೆ ಎಂದ ಮಾಜಿ ಸಿಎಂ ಕುಮರಸ್ವಾಮಿಯವರಿಗೆ, ’ನಿಮ್ಮ 18 ನಿಮಿಷದ ವಿಡಿಯೋ ಇಲ್ಲಿದೆ’ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೇ ಕುಮಾರಸ್ವಾಮಿ ಪೆನ್ ಡ್ರೈವ್ ಇಟ್ಟುಕೊಂಡು ಮಾತನಾಡುತ್ತ ಹಿಟ್ ಆಂಡ್ ರನ್ ಮಾಡುತ್ತಿದ್ದಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಕೃಷಿ ಅಧಿಕಾರಿಗಳು ಪತ್ರ ಬರೆದು ರಾಜ್ಯಪಲರಿಗೆ ದೂರು ನೀಡಿರುವ ವಿಚಾರವಾಗಿಯೂ ಕಿಡಿಕಾರಿದ ಲಕ್ಷ್ಮಣ್, ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ 8 ಮಂದಿಯ ಸಹಿಯನ್ನು ಒಬ್ಬರೇ ಮಾಡಿದ್ದಾರೆ. ಕೃಷಿ ನಿರ್ದೇಶಕರು, ಜಂಟಿ ನಿರ್ದೇಶಕರು ತಮಗೂ ಪತ್ರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.

For Latest News Updates, Join Our Whatsapp Community🚩
RELATED ARTICLES

Most Popular