HomeKarnatakaಬಿಜೆಪಿ ನಾಯಕರಿಗೆ ನನ್ನದೊಂದೇ ಪ್ರಶ್ನೆ: ಡಿಕೆಶಿ ತುರ್ತು ಸುದ್ದಿಗೋಷ್ಠಿ!

ಬಿಜೆಪಿ ನಾಯಕರಿಗೆ ನನ್ನದೊಂದೇ ಪ್ರಶ್ನೆ: ಡಿಕೆಶಿ ತುರ್ತು ಸುದ್ದಿಗೋಷ್ಠಿ!

“ಯುದ್ಧಗಳ ನೆಪವೊಡ್ಡಿ ಕೇಂದ್ರ ಸರ್ಕಾರವು ದೇಶದಲ್ಲಿ ಉಂಟಾಗುತ್ತಿರುವ ಬೆಲೆ ಏರಿಕೆಯ ಸಮಸ್ಯೆಯನ್ನು ಕಡೆಗಣಿಸುತ್ತಿದೆ. ಕೇಂದ್ರದ ವಿದೇಶಾಂಗ ನೀತಿಯ ವೈಫಲ್ಯಗಳಿಂದಾಗಿ ಬಡ ಜನರ ಬದುಕು ಹೇಗೆ ದುಸ್ತರವಾಗಿದೆ” ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದರು.

“ಈಗ ‘ಉಜ್ವಲ’ ಯೋಜನೆ ಹೋಗಿ ಮತ್ತೆ ‘ಸೌದೆ’ ಯೋಜನೆ ಬಂದಂತಾಗಿದೆ. ಅಡುಗೆ ಅನಿಲದ ಸಮರ್ಪಕ ಪೂರೈಕೆ ಇಲ್ಲದೆ ಸಾಮಾನ್ಯ ಜನರಿಗೆ ಹಾಗೂ ಹೋಟೆಲ್ ಉದ್ಯಮಕ್ಕೆ ಬಹಳ ತೊಂದರೆಯಾಗುತ್ತಿದೆ. ಕೇಂದ್ರ ಸರ್ಕಾರ ನಮಗೆ ಇಂದು ‘ಸೌದೆ ಭಾಗ್ಯ’ ನೀಡಿದೆ” ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಅಡುಗೆ ಅನಿಲದಿಂದ ಹಿಡಿದು ಪೆಟ್ರೋಲ್, ಡೀಸೆಲ್ ಹಾಗೂ ಇನ್ನಿತರ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಇಂದು ಗಗನಕ್ಕೇರಿದೆ. ಇಂತಹ ಕಷ್ಟದ ದಿನಗಳಲ್ಲಿ ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನಮ್ಮ ಸರ್ಕಾರ ಜಾರಿಗೆ ತಂದ ‘ಗ್ಯಾರೆಂಟಿ’ ಯೋಜನೆಗಳು ಜನರಿಗೆ ಹೇಗೆ ಆಸರೆಯಾಗಿವೆ ಎಂಬುದಕ್ಕೆ ನೀವೆಲ್ಲರೂ ಸಾಕ್ಷಿಯಾಗಿದ್ದೀರಿ” ಎಂದರು.

“ಇಂದಿನಿಂದ ಟೋಲ್ ದರ ಕೂಡ ಏರಿಕೆಯಾಗಿದೆ. ಈಗಾಗಲೇ ಪೆಟ್ರೋಲ್ ದರ ಏರಿಕೆಯಿಂದ ತತ್ತರಿಸಿರುವ ಜನರಿಗೆ ಕೇಂದ್ರ ಸರ್ಕಾರವು ಇದೀಗ ಮತ್ತೊಂದು ಹೊಸ ಹೊರೆಯನ್ನು ಹೊರಿಸಿದೆ. ಸುಮಾರು 900ಕ್ಕೂ ಹೆಚ್ಚು ಅಗತ್ಯ ಔಷಧಿಗಳ ಬೆಲೆಯನ್ನು ಹೆಚ್ಚಿಸುವ ಮೂಲಕ, ಈ ಬಡ ಜನವಿರೋಧಿ ಸರ್ಕಾರವು ಸಾಮಾನ್ಯ ಜನರ ಬದುಕನ್ನು ಮತ್ತಷ್ಟು ಕಷ್ಟಕ್ಕೆ ದೂಡಿದೆ” ಎಂದು ದೂರಿದರು.

“ಸಂಕಷ್ಟದ ಸಮಯದಲ್ಲಿ ಜನರ ಬದುಕನ್ನು ಆರ್ಥಿಕ ಸವಾಲುಗಳಿಂದ ಹೇಗೆ ಮುಕ್ತಗೊಳಿಸಬೇಕು? ಎಂಬ ಯೋಜನೆ ರೂಪಿಸಬೇಕಾದ ಕೇಂದ್ರ ಸರ್ಕಾರವು, ಏಪ್ರಿಲ್ ಒಂದರಿಂದಲೇ ವಿವಿಧ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರನ್ನು ಏಪ್ರಿಲ್ ಫೂಲ್ ಮಾಡಿದೆ. ಈ ಮೂಲಕ ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ” ಎಂದರು.

“ಬಿಜೆಪಿ ನಾಯಕರಿಗೆ ನನ್ನದೊಂದೇ ಪ್ರಶ್ನೆ, ಮೋದಿಯವರು ‘ಅಚ್ಛೇ ದಿನಗಳುʼ ಬರುತ್ತವೆ ಎಂದು ಹೇಳಿದ್ದರಲ್ಲ, ಏನಾಯಿತು ಆ ಭರವಸೆ?. ನೀವು ನೀಡಿದ ಆ ‘ಅಚ್ಛೇ ದಿನಗಳುʼ ಈಗ ಎಲ್ಲಿವೆ?. ಈಗ ‘ಅಚ್ಛೇ ದಿನಗಳು’ ಹೋಗಿ ‘ಕಚ್ಚಾ ದಿನ’ಗಳು ಬಂದಿವೆ ಎಂದು ಹೇಳಬೇಕೇ?” ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular