HomeLatest Newsಮಧ್ಯರಾತ್ರಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಪ್ರೇಮಿಗಳು; ಯುವಕನನ್ನು ಕಟ್ಟಿಹಾಕಿ ಇಟ್ರು ಈ 'ಡಿಮ್ಯಾಂಡ್'

ಮಧ್ಯರಾತ್ರಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಪ್ರೇಮಿಗಳು; ಯುವಕನನ್ನು ಕಟ್ಟಿಹಾಕಿ ಇಟ್ರು ಈ ‘ಡಿಮ್ಯಾಂಡ್’

ಉತ್ತರ ಪ್ರದೇಶದ ಡಿಯೋರಿಯ ಜಿಲ್ಲೆ ತರ್ಕುಲ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಭಿನ್ನ ಪ್ರಕರಣವೊಂದು ನಡೆದಿದೆ. ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದ ಒಂದೇ ಗ್ರಾಮದ ಯುವಕ – ಯುವತಿ ಮಧ್ಯರಾತ್ರಿ ನಿರ್ಜನ ಪ್ರದೇಶದಲ್ಲಿ ಸಂಧಿಸಲು ಹೋಗಿ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರಿಗೂ ಥಳಿಸಲಾಗಿದ್ದು, ಅಂತಿಮವಾಗಿ ಪ್ರಕರಣ ಸುಖಾಂತ್ಯಗೊಂಡಿದೆ.

ಘಟನೆಯ ವಿವರ: ಗ್ರಾಮದ ಯುವಕ – ಯುವತಿ ಕಳೆದ ಕೆಲ ತಿಂಗಳುಗಳಿಂದ ಪ್ರೀತಿಸುತ್ತಿದ್ದು, ಆರಂಭದಲ್ಲಿ ಇವರಿಬ್ಬರ ಪ್ರೀತಿ ಗುಟ್ಟಾಗಿತ್ತಾದರೂ ಇತ್ತೀಚೆಗೆ ಗುಸು-ಗುಸು ಆರಂಭವಾಗಿತ್ತು. ಹೀಗಾಗಿ ಗ್ರಾಮದ ಕೆಲ ಯುವಕರು ಇವರುಗಳ ಮೇಲೆ ಒಂದು ಕಣ್ಣಿಟ್ಟಿದ್ದು, ಮೂರು ದಿನಗಳ ಹಿಂದೆ ಇವರಿಬ್ಬರು ಗ್ರಾಮದ ಹೊರವಲಯದಲ್ಲಿದ್ದ ಹೊಲದಲ್ಲಿ ಭೇಟಿಯಾಗಿ ಮಾತುಕತೆ ನಡೆಸುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಈ ಸಂದರ್ಭದಲ್ಲಿ ಇಬ್ಬರಿಗೂ ಥಳಿಸಿ ಗ್ರಾಮದ ಹಿರಿಯರು ಹಾಗೂ ಯುವಕ – ಯುವತಿಯ ಪೋಷಕರನ್ನು ಸ್ಥಳಕ್ಕೆ ಕರೆಯಿಸಲಾಗಿದೆ. ಆಗ ಯುವತಿ ಕುಟುಂಬಸ್ಥರು, ಯುವಕ ತಮ್ಮ ಮಗಳನ್ನು ಕೂಡಲೇ ಮದುವೆಯಾಗಬೇಕೆಂಬ ಒತ್ತಾಯ ಮುಂದಿಟ್ಟಿದ್ದು, ಆದರೆ ಇದಕ್ಕೆ ಯುವಕನ ಕಡೆಯವರು ನಿರಾಕರಿಸಿದ್ದಾರೆ. ಬೇರೆ ಉಪಾಯವಿಲ್ಲದ ಯುವತಿ ಕುಟುಂಬಸ್ಥರು ಯುವಕನನ್ನು ಒತ್ತೆಯಾಗಿಟ್ಟುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಡೆಗೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಉಭಯ ಕುಟುಂಬಗಳ ಸದಸ್ಯರು ಒಮ್ಮತಕ್ಕೆ ಬಂದಿದ್ದು, ಯುವಕ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾಗಲು ಒಪ್ಪಿದ್ದಾನೆ. ಈ ವಿಚಾರ ಸ್ಥಳೀಯ ಪೊಲೀಸರ ಗಮನಕ್ಕೂ ಬಂದಿದ್ದು ಆದರೆ ಗ್ರಾಮದ ಹಿರಿಯರೇ ಇದನ್ನು ಬಗೆ ಹರಿಸಿಕೊಂಡಿರುವ ಕಾರಣ ಮಧ್ಯಪ್ರವೇಶಿಸಿಲ್ಲ. ಅಂತಿಮವಾಗಿ ಪ್ರಕರಣ ಸುಖಾಂತ್ಯ ಕಂಡಿದೆ.

For Latest News Updates, Join Our Whatsapp Community🚩
RELATED ARTICLES

Most Popular