HomeEntertainment'ಗೌರಿ' ಚಿತ್ರದ ''ಲವ್ ಯು ಸಮಂತಾ'' ವಿಡಿಯೋ ಹಾಡು ರಿಲೀಸ್

‘ಗೌರಿ’ ಚಿತ್ರದ ”ಲವ್ ಯು ಸಮಂತಾ” ವಿಡಿಯೋ ಹಾಡು ರಿಲೀಸ್

ಸಮರ್ಜಿತ್ ಲಂಕೇಶ್ ಅಭಿನಯದ ಬಹುನಿರೀಕ್ಷಿತ ‘ಗೌರಿ’ ಚಿತ್ರ ಇದೇ ಆಗಸ್ಟ್ 15ರಂದು ತೆರೆಯ ಮೇಲೆ ಅಪ್ಪಳಿಸಲಿದ್ದು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಗೌರಿ ಚಿತ್ರತಂಡ ನಿನ್ನೆಯಷ್ಟೇ ‘ಲವ್ ಯು ಸಮಂತಾ’ ಎಂಬ ವಿಡಿಯೋ ಹಾಡೊಂದನ್ನು  ಬಿಡುಗಡೆ ಮಾಡಿದೆ. ಜಾವಿದ್ ಅಲಿ ಧ್ವನಿಯಾಗಿರುವ ಈ ಹಾಡಿಗೆ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜನೆ ನೀಡಿದ್ದು, ಕವಿರಾಜ್ ಸಾಹಿತ್ಯವಿದೆ.

ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಅವರ ಪುತ್ರ ಸಮರ್ಜಿತ್ ಚೊಚ್ಚಲ ಬಾರಿ ನಾಯಕ ನಟನಾಗಿ ಅಭಿನಯಿಸಿದ್ದು, ಸನ್ಯಾ ಅಯ್ಯರ್ ಇವರಿಗೆ ಜೋಡಿಯಾಗಿದ್ದಾರೆ. ಇನ್ನುಳಿದಂತೆ  ಮಾನಸಿ ಸುಧೀರ್, ಸಂಪತ್ ಮೈತ್ರೇಯ, ರಾಜೀವ್ ಪಿಲ್ಲೆ ತೆರೆ ಹಂಚಿಕೊಂಡಿದ್ದಾರೆ. ಲಾಫಿಂಗ್ ಬುದ್ಧ ಫಿಲಂಸ್ ಬ್ಯಾನರ್ ನಡಿ ಇಂದ್ರಜಿತ್ ಲಂಕೇಶ್ ಅವರೇ ನಿರ್ಮಾಣ ಮಾಡಿದ್ದು, ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಬರ್ಗಿ, ಅನಿರುದ್ಧ ಶಾಸ್ತ್ರಿ ಸಂಗೀತ ಸಂಯೋಜನೆ ನೀಡಿದ್ದಾರೆ. ಬಿ.ಎ ಮಧು, ರಾಜಶೇಖರ್ ಕೆ.ಎಲ್, ಮಾಸ್ತಿ , ಮನು ತಪಸ್ವಿ ಅವರ ಸಂಭಾಷಣೆ, ಕೆ.ಎಂ. ಪ್ರಕಾಶ್ ಸಂಕಲನ, ಎ.ವಿ.ಕೃಷ್ಣ ಕುಮಾರ್ ಛಾಯಾಗ್ರಹಣವಿದೆ,

For Latest News Updates, Join Our Whatsapp Community🚩
RELATED ARTICLES

Most Popular