HomeEntertainment29 ನೇ ವಸಂತಕ್ಕೆ ಕಾಲಿಟ್ಟ ನಟಿ ಸೋನಾಲ್ ಮೊಂಟೆರೊ

29 ನೇ ವಸಂತಕ್ಕೆ ಕಾಲಿಟ್ಟ ನಟಿ ಸೋನಾಲ್ ಮೊಂಟೆರೊ

ಮಂಗಳೂರು ಬೆಡಗಿ ನಟಿ ಸೋನಾಲ್ ಮೊಂಟೆರೊ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅವರ ಅಭಿಮಾನಿಗಳಿಂದ ಹಾಗೂ ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

2015 ರಲ್ಲಿ ಬಿಡುಗಡೆಯಾದ ಕೆ. ಸೂರಜ್ ಶೆಟ್ಟಿ ತೆಲುಗಿನ ‘ಎಕ್ಕ ಸಾಕ’ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು ಕನ್ನಡದಲ್ಲಿ ‘ಅಭಿಸಾರಿಕೆ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸೈಮಾ ಪ್ರಶಸ್ತಿಯನ್ನು ಪಡೆದುಕೊಂಡರು.

ನಂತರ ‘ಮದುವೆ ದಿಬ್ಬಣ’ ‘ಪಂಚತಂತ್ರ’ ‘ರಾಬರ್ಟ್’ ‘ಬನಾರಸ್’ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಪ್ರಿಯ ನಟಿಯಾಗಿ ಹೊರಹೊಮ್ಮಿದರು. ಸೋನಾಲ್ ಮೊಂಟೆರೊ ಇತ್ತೀಚಿಗೆ ‘ಬುದ್ಧಿವಂತ 2’ ಸೇರಿದಂತೆ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಶೂಟಿಂಗ್ ನಲ್ಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular