7 ವರ್ಷ 240 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡುವ ಜನವರಿ 6, 2026ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ದಾಖಲೆ ನಿರ್ಮಿಸಿದ್ದಾರೆ. ಈಗ ಸಿದ್ದರಾಮಯ್ಯ ರಾಜ್ಯದಲ್ಲಿ ಅತಿ ಹೆಚ್ಚು ಅವಧಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದ ನಾಯಕ.
ಈ ಕುರಿತು ಮಾತನಾಡಿದ ಅವರು, “ಇಷ್ಟು ವರ್ಷಗಳ ರಾಜಕಾರಣ ತೃಪ್ತಿ ತಂದಿದೆ. ಜನರ ಕೆಲಸ ಮಾಡುವುದು ಖುಷಿಯ ಸಂಗತಿ. ರಾಜಕಾರಣ ಎಂದರೆ ಬಡವರು, ದಲಿತರು, ಹಿಂದುಳಿದವರ ಕೆಲಸ ಮಾಡಿಕೊಡುವುದು. ಹೆಚ್ಚೆಂದರೆ ಶಾಸಕನಾಗಬೇಕೆಂದು ಅಂದುಕೊಂಡಿದ್ದೆ. ಶಾಸಕನಾದೆ, ಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿಯೂ ಆದೆ. ಅವಕಾಶಗಳು ಸಿಕ್ಕಿದ್ದರಿಂದ ಇವೆಲ್ಲ ಆಗಲು ಸಾಧ್ಯವಾಯಿತು” ಎಂದು ಹೇಳಿದ್ದಾರೆ.
ಬಿಜೆಪಿ ನಾಯಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಸಿದ್ದರಾಮಯ್ಯ ಸುಧೀರ್ಘ ಅವಧಿಯ ಮುಖ್ಯಮಂತ್ರಿ ಆಡಳಿತದ ಕುರಿತು ಪೋಸ್ಟ್ ಹಾಕಿದ್ದಾರೆ. ಸಿದ್ದರಾಮಯ್ಯ ಸಾಧನೆಗಳನ್ನು ಪಟ್ಟಿ ಮಾಡಿದ್ದಾರೆ.
ಛಲವಾದಿ ನಾರಾಯಣ ಸ್ವಾಮಿ ಅವರು, “ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರೇ, ಕೊನೆಗೂ ಕುಂಟುತ್ತಾ, ತೆವಳುತ್ತಾ, ರಾಜೀನಾಮೆ ನೀಡುವ ಭಯದಲ್ಲಿಯೇ ತಾವು ಅತಿ ಹೆಚ್ಚು ವರ್ಷಗಳ ಕಾಲ ಸಿಎಂ ಆದ ದಾಖಲೆಗೆ ಪಾತ್ರರಾಗಿದ್ದಿರಿ. ಹೀಗಾಗಿ ನಿಮಗೆ ಮೊದಲು ನಮ್ಮ ಅಭಿನಂದನೆಗಳು. ಈ ಸಮಯದಲ್ಲಿ ನೀವು ಸಿಎಂ ಆದ ಅವಧಿಯಲ್ಲಿನ ನಿಮ್ಮ ಮಹಾನ್ ಸಾಧನೆಗಳನ್ನು ಒಮ್ಮೆ ಮೆಲುಕು ಹಾಕೋಣ ಬನ್ನಿ” ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.
- ಸಿಎಂ ಆದ ಕೆಲವು ದಿನಗಳಲ್ಲಿಯೇ ಮತಾಂಧ ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ನಿರ್ಧರಿ”ಸಿದ್ದು”!!
- ಸಿಎಂ ಆದ ಕೆಲವು ದಿನಗಳಲ್ಲಿಯೇ ಕರ್ನಾಟಕಕ್ಕೆ ಕಂಡು ಕೇಳರಿಯದಂತಹ ಬರಗಾಲ ಆವರಿ”ಸಿದ್ದು”!!
- ಸಮರ್ಥವಾಗಿದ್ದ ಲೋಕಾಯುಕ್ತಕ್ಕೆ ಮೊಳೆ ಹೊಡೆದು ದುರ್ಬಲ ಎಸಿಬಿ ಸ್ಥಾಪಿ”ಸಿದ್ದು”!!
- ದಕ್ಷ ಹಿರಿಯ ಅಧಿಕಾರಿಗಳಿಗೆ ಸಾವಿನ ಭಾಗ್ಯ ಕರುಣಿ”ಸಿದ್ದು”!!
- ಅತಿಯಾದ ಓಲೈಕೆ ರಾಜಕಾರಣಕ್ಕೆ ಕುಮ್ಮಕ್ಕು ನೀಡಿ”ಸಿದ್ದು”!!
- ಮಹಾದಾಯಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡಿ”ಸಿದ್ದು”!!
- ರಾಜ್ಯದಲ್ಲಿ ಅನೇಕ ಹಿಂದೂ ಕಾರ್ಯಕರ್ತರ ಹತ್ಯೆಗೆ ಅನುಕೂಲವಾಗುವಂತಹ ವಾತಾವರಣ ನಿರ್ಮಿ”ಸಿದ್ದು”!!
- ಸಿಎಂ ಆದ ಮೊದಲ ಅವಧಿಯಲ್ಲಿ ಕರ್ನಾಟಕದ 4257 ರೈತರಿಗೆ ಆತ್ಮಹತ್ಯೆ ಭಾಗ್ಯ ಕರುಣಿ”ಸಿದ್ದು”!!
- ವೀರಶೈವ-ಲಿಂಗಾಯತ ಎಂದು ಸಮುದಾಯದೊಳಗೆ ಬೆಂಕಿ ಹಚ್ಚಿ”ಸಿದ್ದು”!!
- ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ಮಾಡಿ”ಸಿದ್ದು”!!
- ಸಮಾಜವಾದಿ ಎಂದು ಹೇಳಿ ದುಬಾರಿ ಹ್ಯುಬ್ಲೋಟ್ ವಾಚ್ ಧರಿ”ಸಿದ್ದು”!!
- ಗೌಡ-ಲಿಂಗಾಯತ-ಬ್ರಾಹ್ಮಣ(ಜಿಲೇಬಿ)ಫೈಲುಗಳನ್ನು ದೂರವಿರಿ”ಸಿದ್ದು”!!
- ಅರ್ಕಾವತಿ ಲೇಔಟ್ ನ ರೀ-ಡೂ ಹಗರಣ ಮಾಡಿ”ಸಿದ್ದು”!!
- ಅವಾಸ್ತವಿಕ ಗ್ಯಾರಂಟಿಗಳ ಅಪ್ರಬುದ್ಧ ಅನುಷ್ಠಾನ ಮಾಡಿ”ಸಿದ್ದು”!!
- ಅತಿ ಹೆಚ್ಚು ಸಾಲ ಮಾಡಿ ಕರ್ನಾಟವನ್ನು ದಿವಾಳಿ ಮಾಡಿ”ಸಿದ್ದು”!!
- ಮುಡಾದಲ್ಲಿ ಅಕ್ರಮವಾಗಿ 14 ಸೈಟು ಕಬಳಿ”ಸಿದ್ದು”!!
- ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ₹187 ಕೋಟಿಯನ್ನು ಎಗರಿ”ಸಿದ್ದು”!!
- ಕಾವೇರಿಯನ್ನು ಸ್ಟಾಲಿನ್ ನಾಡಿಗೆ ಹರಿ”ಸಿದ್ದು”!!
- ಕನ್ನಡಿಗರನ್ನು ಕಡೆಗಣಿಸಿ ವಯನಾಡಿಗೆ ಮನೆ ಹಂಚಿ”ಸಿದ್ದು”!!
- ತಮ್ಮ ವೈಫಲ್ಯಗಳಿಗೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿ”ಸಿದ್ದು”!!
- ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗಿ”ಸಿದ್ದು”!!
- ಭಯೋತ್ಪಾದಕರಿಗೆ ಅಮಯಾಕ ಪಟ್ಟ ಕಟ್ಟಲು ಪೂರಕ ವಾತಾವರಣ ಕಲ್ಪಿ”ಸಿದ್ದು”!!
- ಮತಾಂಧ ಔರಂಗಜೇಬನ ಕಟೌಟ್ ಹಾಕಲು ಪ್ರೇರೆಪಿ”ಸಿದ್ದು”!!
- ದಲಿತರ ಪಾಲಿನ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಹಣವನ್ನು ದುರ್ಬಳಕೆ ಮಾಡಿ”ಸಿದ್ದು”!!
- ಮಕ್ಕಳಿಗೆ ಹುಳುಯುಕ್ತ ಊಟವನ್ನು ಹಾಕಿ”ಸಿದ್ದು”!!
- ಪಂಚಮಸಾಲಿಗಳ ಮೇಲೆ ಲಾಠಿಚಾರ್ಜ್ ಮಾಡಿ”ಸಿದ್ದು”!!
- ಬರ ಹಾಗೂ ನೆರೆ ನಿರಾಶ್ರಿತರಿಗೆ ಪರಿಹಾರ ನೀಡದೆ ವಂಚಿ”ಸಿದ್ದು”!!
- ಕಾರ್ಮಿಕರಿಗೆ ನೀಡುವ ಕಿಟ್ ನಲ್ಲಿ ಹಗರಣ ಮಾಡಿ”ಸಿದ್ದು”
- ಬಡವರಿಗೆ ಹಂಚುವ ಮನೆಗೆ ಲಂಚ ಕೇಳಿ”ಸಿದ್ದು”!!
- SDPI/PFI ಮತಾಂಧರ ಕೇಸ್ ವಜಾ ಮಾಡಿ”ಸಿದ್ದು”!!
- ಗುತ್ತಿಗೆದಾರರ ಬಳಿ 60 ಪರ್ಸೆಂಟ್ ಕಮಿಷನ್ ಗೆ ಕೈ ಚಾಚಿ”ಸಿದ್ದು”!!
- ವಕ್ಫ್ ಹೆಸರಿನಲ್ಲಿ ರೈತರ ಭೂಮಿ ಕಬಳಿಕೆಗೆ ಸ್ಕೆಚ್ ಹಾಕಿ”ಸಿದ್ದು”!!
- ಅಬಕಾರಿ ಲೈಸೆನ್ಸ್ ನವೀಕರಣದ ಹೆಸರಿನಲ್ಲಿ ಲಂಚಾವತಾರ ಸ್ಥಾಪಿ”ಸಿದ್ದು”!!
- ಗೃಹಲಕ್ಷ್ಮಿ ಹಣವನ್ನು ಎಗರಿ”ಸಿದ್ದು”!!
- ಎಲ್ಲಾ ವಸ್ತುಗಳ ಬೆಲೆಯೇರಿಕೆ ಮಾಡಿ”ಸಿದ್ದು”!!
- ರೈತರ ಬೋರ್ವೆಲ್‌ಗಳ ಟಿಸಿ ಶುಲ್ಕ ಏರಿ”ಸಿದ್ದು”!!
- ಜನೌಷಧಿ ಕೇಂದ್ರಗಳನ್ನು ಮುಚ್ಚಲು ಷಡ್ಯಂತ್ರ ರೂಪಿ”ಸಿದ್ದು”!!
- ಸ್ಮಾರ್ಟ್ ಮೀಟರ್ ಹಗರಣದ ಮೂಲಕ ಜನರನ್ನು ದೋಚಲು ಯತ್ನಿ”ಸಿದ್ದು”!!
- ಗಂಧದ ನಾಡಾಗಿದ್ದ ಕರ್ನಾಟಕವನ್ನು ನಶೆಯ ನಾಡನ್ನಾಗಿ”ಸಿದ್ದು”!!
- ದಸರಾ ಕಲಾವಿದರ ಬಳಿ ಮಾಮೂಲು ಕೇಳಿ”ಸಿದ್ದು”!!
- ಹಿಂದೂ ದೇವಾಲಯಗಳ ಹುಂಡಿ ಕಾಸನ್ನು ಎಗರಿ”ಸಿದ್ದು”!!
- ಸಾರಿಗೆ ಇಲಾಖೆಗೆ ಡಕೋಟಾ ಬಸ್ಸುಗಳನ್ನು ಕರುಣಿ”ಸಿದ್ದು”!!
- ಕೊಗಿಲು ಅಕ್ರಮವಾಸಿಗಳಿಗೆ ಐಷಾರಾಮಿ ಫ್ಲ್ಯಾಟ್ ಹಂಚಿ”ಸಿದ್ದು”!!
- ನೀರಿನ ದರ ಏರಿ”ಸಿದ್ದು” – ಕಸಕ್ಕೆ ಟ್ಯಾಕ್ಸ್ ಹಾಕಿ”ಸಿದ್ದು”!!
- ಬಾಣಂತಿಯರಿಗೆ ಸಾವಿನ ಭಾಗ್ಯ ಕರುಣಿ”ಸಿದ್ದು”!!
- ಅನ್ನಭಾಗ್ಯದ 10 ಕೆಜಿ ಅಕ್ಕಿ ನೀಡದೆ ವಂಚಿ”ಸಿದ್ದು”!!
- ದ್ವೇಷ ಭಾಷಣ ಕಾಯ್ದೆ ಜಾರಿಗೆ ತರಿ”ಸಿದ್ದು”!!
- ಆರ್ಸಿಬಿ ವಿಜಯೋತ್ಸವದಲ್ಲಿ ಕನ್ನಡಿಗರ ಕೊಲೆ ಮಾಡಿ”ಸಿದ್ದು”!!
- ಬಡವರಿಗೆ ಕಲುಷಿತ ನೀರು ಕುಡಿಸಿ ಸಾಯಿ”ಸಿದ್ದು”!!
- ಪರಪ್ಪನ ಅಗ್ರಹಾರವನ್ನು ಐಷಾರಾಮಿ ರೆಸಾರ್ಟ್ ಆಗಿ”ಸಿದ್ದು”!!
ಇವಿಷ್ಟು ಸಾಧನೆಗಳು ನಮ್ಮ ಕಣ್ಣ ಮುಂದೆ ಕಾಣಿ”ಸಿದ್ದು”!!. ಇವುಗಳನ್ನು ಹೊರತುಪಡಿಸಿ ಯಾವುದಾದರೂ ಸಾಧನೆ ಬಿಟ್ಟುಹೋದಲ್ಲಿ ದಯವಿಟ್ಟು ನಮೂದಿಸತಕ್ಕದ್ದು ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

