HomeIndia75 ಸೀಟು: ದೇವೇಗೌಡ, ಖರ್ಗೆ ಸೇರಿ ಹಲವರ ನಿವೃತ್ತಿ: ರಾಜ್ಯಸಭೆ ಚುನಾವಣೆ ಕದನ

75 ಸೀಟು: ದೇವೇಗೌಡ, ಖರ್ಗೆ ಸೇರಿ ಹಲವರ ನಿವೃತ್ತಿ: ರಾಜ್ಯಸಭೆ ಚುನಾವಣೆ ಕದನ

75 ರಾಜ್ಯಸಭಾ ಸೀಟುಗಳಿಗೆ ನಡೆಯುವ ಚುನಾವಣೆ 2026ರಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಈ ವರ್ಷ ನಡೆಯುವ ವಿಧಾನಸಭೆ ಚುನಾವಣೆಗಳ ಮಾದರಿಯಲ್ಲಿಯೇ ಈ ಚುನಾವಣೆಯ ಲೆಕ್ಕಾಚಾರವೂ ಸಾಗಿದೆ. ಈಗಾಗಲೇ ಎನ್‌ಡಿಎ ಮೈತ್ರಿಕೂಟ ರಾಜ್ಯಸಭೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಂಡಿದ್ದು, ಈ ಚುನಾವಣೆಗಳಲ್ಲಿ  ಎಷ್ಟು ಸೀಟು ಗೆಲ್ಲಲಿದೆ? ಎಂಬುದು ಚರ್ಚೆಯ ವಿಚಾರ.

ರಾಜ್ಯಸಭೆಯ 75 ಸದಸ್ಯರ ಅವಧಿ  ಈ ವರ್ಷ ಪೂರ್ಣಗೊಳ್ಳಲಿದೆ. ಏಪ್ರಿಲ್, ಜೂನ್ ಮತ್ತು ನವೆಂಬರ್‌ನಲ್ಲಿ ಚುನಾವಣೆಗಳು ನಡೆಯಬೇಕಿದೆ. ರಾಜ್ಯಸಭೆಯಲ್ಲಿ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ನಡುವಿನ ಸಂಖ್ಯಾಬಲದ ದೃಷ್ಟಿಯಿಂದ ಚುನಾವಣೆಗೆ ಪ್ರಾಮುಖ್ಯತೆ ಪಡೆದುಕೊಂಡಿದೆ.

ಯಾವ ರಾಜ್ಯ ಎಷ್ಟು ಸೀಟು?; ಉತ್ತರ ಪ್ರದೇಶದ 10, ಬಿಹಾರದ 5, ಮಹಾರಾಷ್ಟ್ರದ 7, ಜಾರ್ಖಂಡ್, ಪಶ್ಚಿಮ ಬಂಗಾಳ, ತಮಿಳುನಾಡು, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಹಲವಾರು ಈಶಾನ್ಯ ರಾಜ್ಯಗಳ ರಾಜ್ಯಸಭೆಗಳ ಸೀಟುಗಳಿಗೆ ಚುನಾವಣೆಗಳು ನಡೆಯಬೇಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಲವು ಪ್ರಮುಖ ನಾಯಕರ ಸದಸ್ಯತ್ವದ ಅವಧಿ ಅಂತ್ಯವಾಗಲಿದೆ. ಆದ್ದರಿಂದ ಪಕ್ಷಗಳು ಅವರಿಗೆ ಮತ್ತೊಮ್ಮೆ ಅವಕಾಶ ನೀಡುತ್ತವೆಯೇ? ಎಂಬುದು ಪ್ರಶ್ನೆಯಾಗಿದೆ. 92 ವರ್ಷದ ಎಚ್‌.ಡಿ.ದೇವೇಗೌಡ,  87 ವರ್ಷದ ಮಲ್ಲಿಕಾರ್ಜುನ ಖರ್ಗೆ, ಶರದ್ ಪವಾರ್, ದಿಗ್ವಿಜಯ್ ಸಿಂಗ್ ಅವಧಿ ಅಂತ್ಯವಾಗಲಿದೆ.

ಅಲ್ಲದೇ ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಬಿಎಲ್‌ ವರ್ಮಾ, ರಣ್ವೀತ್ ಸಿಂಗ್ ಬಿಟ್ಟು, ಜಾರ್ಜ್ ಕುರಿಯನ್ ಅವಧಿ ಅಂತ್ಯವಾಗಲಿದ್ದು, ಇವರನ್ನು ಪುನಃ ಆಯ್ಕೆ ಮಾಡದಿದ್ದರೆ ಸಚಿವ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ.

ಹಿರಿಯ ನಾಯಕರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡುವ ಕುರಿತು ಪಕ್ಷದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಇನ್ನೂ ಸಹ ಅಂತಿಮ ತೀರ್ಮಾನವಾಗಿಲ್ಲ. ಈಗಾಗಲೇ ಎನ್‌ಡಿಎ ಮೈತ್ರಿಕೂಟ ರಾಜ್ಯಸಭೆಯಲ್ಲಿ ಸಂಖ್ಯಾಬಲದಲ್ಲಿ ಹೆಚ್ಚಿನ ಸೀಟುಗಳನ್ನು ಹೊಂದಿದೆ.

ಮುಂಬರುವ ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ರಾಷ್ಟ್ರೀಯ ಚುನಾವಣೆಗಳ ಹಿನ್ನಲೆಯಲ್ಲಿ ರಾಜ್ಯಸಭೆಯಲ್ಲಿನ ಬಲಾಬಲವು ಬಹಳ ಕುತೂಹಲದ ವಿಚಾರವಾಗಿದೆ. ಆದ್ದರಿಂದ ರಾಜಕೀಯ ಪಕ್ಷಗಳು ಸಹ ತಂತ್ರವನ್ನು ರೂಪಿಸಬೇಕಿದೆ.

2026ರಲ್ಲಿ ಪಶ್ಚಿಮ ಬಂಗಾಳ, ಪುದುಚೇರಿ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರ ಜೊತೆಗೆ ರಾಜ್ಯಸಭೆ ಚುನಾವಣೆಗೆ ಪಕ್ಷಗಳು ತಯಾರಿಯನ್ನು ಮಾಡಬೇಕಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular