HomeKarnatakaBREAKING: ಡೀಲ್ ವೇಳೆಯಲ್ಲೇ ಲೋಕಾಯುಕ್ತ ದಾಳಿ: ಪರಾರಿಯಾದ ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಇನ್ಸ್ ಪೆಕ್ಟರ್

BREAKING: ಡೀಲ್ ವೇಳೆಯಲ್ಲೇ ಲೋಕಾಯುಕ್ತ ದಾಳಿ: ಪರಾರಿಯಾದ ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಇನ್ಸ್ ಪೆಕ್ಟರ್

ಬೆಂಗಳೂರು: ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾದ ಇನ್ಸ್ಪೆಕ್ಟರ್ ಗೆ ಲೋಕಾಯುಕ್ತ ಪೊಲೀಸರು ಶಾಕ್ ನೀಡಿದ್ದಾರೆ.

ಲೋಕಾಯುಕ್ತ ಬಂಧನ ಭೀತಿಯಲ್ಲಿ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಪರಾರಿಯಾಗಿದ್ದಾರೆ. ಲೋಕಾಯುಕ್ತ ಕಾರ್ಯಾಚರಣೆ ವೇಳೆಯಲ್ಲಿ ಇನ್ಸ್ಪೆಕ್ಟರ್ ಕುಮಾರ್ ಪರಾರಿಯಾಗಿದ್ದಾರೆ.

ಸುಳ್ಳು ಪ್ರಕರಣ ದಾಖಲಿಸಿ 4 ಕೋಟಿ ರೂಪಾಯಿ ಮೌಲ್ಯದ ಮನೆ ಮಾರಾಟಕ್ಕೆ ಒತ್ತಡ ಹಾಕಿದ್ದರು. ನಾಗರಬಾವಿಯ ಖಾಸಗಿ ಹೋಟೆಲ್ ನಲ್ಲಿ ಡೀಲ್ ನಡೆಸುವ ವೇಳೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಡೀಲ್ ಮಾಡುವ ವೇಳೆ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಧಿಕಾರ ದುರ್ಬಳಕೆ ಆರೋಪದಡಿ ಇಬ್ಬರು ಪಿಸಿಗಳು ಸೇರಿ ಐವರನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭ್ರಷ್ಟಾಚಾರ ತಡೆ ಕಾಯ್ದೆಯಡಿ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಗಳನ್ನು ಬಂಧಿಸಲಾಗಿದೆ. ಸಿವಿಲ್ ಗುತ್ತಿಗೆದಾರ ಚನ್ನೇಗೌಡರ ಪತ್ನಿ ಅನುಷಾಗೆ ಅನ್ನಪೂರ್ಣೇಶ್ವರಿ ನಗರ ಠಾಣೆ ಪಿಎಸ್ಐ ಕುಮಾರ್ ಅವರು ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.

ಸುಳ್ಳು ಪ್ರಕರಣ ದಾಖಲಿಸಿ ಸಿವಿಲ್ ಗುತ್ತಿಗೆದಾರ ಚನ್ನೇಗೌಡರಿಗೆ ಸೇರಿದ 4 ಕೋಟಿ ರೂಪಾಯಿ ಮೌಲ್ಯದ ಮನೆ ಮಾರಾಟಕ್ಕೆ ಒತ್ತಡ ಹಾಕಿದ್ದರು. ಕಡಿಮೆ ಮೊತ್ತಕ್ಕೆ ನೋಂದಣಿ ಮಾಡಿಕೊಡುವಂತೆ ಇನ್ಸ್ಪೆಕ್ಟರ್ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿದೆ.

ಸರ್ಕಾರಿ ಉದ್ಯೋಗದಲ್ಲಿರುವ ಗುತ್ತಿಗೆದಾರ ಚನ್ನೇಗೌಡರ ಪತ್ನಿ ಅನುಷಾ ಅವರ ವಿರುದ್ಧ ಈ ಹಿಂದೆ ದಾಖಲಾಗಿದ್ದ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕುತ್ತೇನೆ. ಮನೆ ಬರೆದು ಕೊಡಿ ಎಂದು ಇನ್ಸ್ಪೆಕ್ಟರ್ ಕುಮಾರ್ ಕಿರುಕುಳ ನೀಡುತ್ತಿದ್ದರು. ಈ ಹಿಂದೆ ಚನ್ನೇಗೌಡರ ಮನೆಗೆ ಕೆಲವು ಗೂಂಡಾಗಳನ್ನು ನುಗ್ಗಿಸಿದ್ದರು. ಈ ವೇಳೆಗೆ ಸಿವಿಲ್ ಕಂಟ್ರಾಕ್ಟರ್ ಚನ್ನೇಗೌಡ ವಿಡಿಯೋ ಮಾಡಿಕೊಂಡಿದ್ದರು.

ಠಾಣೆಗೆ ಚನ್ನೇಗೌಡನ ಕರೆಸಿ ಒತ್ತಾಯ ಪೂರ್ವಕವಾಗಿ ಅಗ್ರಿಮೆಂಟ್ ಗೆ ಸಹಿ ಹಾಕಿಸಿದ್ದರು. ಆನ್ಲೈನ್ ಮೂಲಕ 4 ಲಕ್ಷ ರೂಪಾಯಿ ವರ್ಗಾವಣೆ ಮಾಡಿ ಅಗ್ರಿಮೆಂಟ್ ಮಾಡಲಾಗಿತ್ತು. ಸೋದರ ಸಂಬಂಧಿ ಗವಿ ಗೌಡ ಮತ್ತು ದಿವ್ಯಾ ಹೆಸರಿಗೆ ಮನೆ ನೋಂದಣಿ ಮಾಡುವಂತೆ ಒತ್ತಡ ಹೇರಿದ್ದರು.

ನಿನ್ನೆ ಸಂಜೆ ಅಗ್ರಿಮೆಂಟ್ ಗೆ ಸಹಿ ಹಾಕಿಸಲು ಇನ್ಸ್ಪೆಕ್ಟರ್ ಕುಮಾರ್ ಕರೆಸಿದ್ದ. ನಾಗರಬಾವಿಯ ಖಾಸಗಿ ಹೋಟೆಲ್ ಗೆ ಇನ್ಸ್ಪೆಕ್ಟರ್ ಕುಮಾರ್ ಕರೆಸಿದ್ದರು. ಚನ್ನೇಗೌಡನ ಪತ್ನಿ ಅನುಷಾ ಸಹಿ ಹಾಕಿಸಿಕೊಳ್ಳಲು ಕರೆಸಿದ್ದ ವೇಳೆ ಲೋಕಾಯುಕ್ತ ದಾಳಿ ವಿಚಾರ ತಿಳಿದು ಇನ್ಸ್ಪೆಕ್ಟರ್ ಕುಮಾರ್ ಪರಾರಿಯಾಗಿದ್ದಾರೆ. ಇಬ್ಬರು ಕಾನ್ಸ್ ಟೇಬಲ್ ಗಳು ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮುಂಜಾನೆ 3 ಗಂಟೆಗೆ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular