HomeBusinessಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಸಾರ್ವಕಾಲಿಕ ಹೊಸ ದಾಖಲೆ ಬರೆದ ಚಿನ್ನದ ದರ 95,000 ರೂ.ಗೆ ಏರಿಕೆ

ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಸಾರ್ವಕಾಲಿಕ ಹೊಸ ದಾಖಲೆ ಬರೆದ ಚಿನ್ನದ ದರ 95,000 ರೂ.ಗೆ ಏರಿಕೆ

ನವದೆಹಲಿ: ಮಂಗಳವಾರ ಒಂದೇ ದಿನ 10 ಗ್ರಾಂ ಚಿನ್ನದ ಎರಡು ಸಾವಿರ ರೂಪಾಯಿ ಏರಿಕೆಯಾಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 94,000 ರೂ., ಬೆಂಗಳೂರಿನಲ್ಲಿ 95,000 ರೂ.ಗೆ ತಲುಪಿ ಹೊಸ ದಾಖಲೆ ಬರೆದಿದೆ ಒಂದು ಕೆಜಿ ಬೆಳ್ಳಿ ದರ 500 ರೂಪಾಯಿ ಏರಿಕೆಯಾಗಿದ್ದು, 1,05,500 ರೂ.ಗೆ ತಲುಪಿದೆ.

ಬೆಂಗಳೂರಿನಲ್ಲಿ 10 ಗ್ರಾಂ ಪರಿಶುದ್ಧ ಚಿನ್ನದ ಗಟ್ಟಿಯ ದರ 95,890 ರೂಪಾಯಿಗೆ ತಲುಪಿದೆ. ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 94,150 ರೂಪಾಯಿಗೆ ತಲುಪಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ, ದೇಶಿಯ ಮಾರುಕಟ್ಟೆಯಲ್ಲಿ ಆಭರಣ ವರ್ತಕರಿಂದ ಹೆಚ್ಚಿನ ಖರೀದಿ, ಷೇರು ಮಾರುಕಟ್ಟೆಗಳ ಕುಸಿತ ಹಿನ್ನೆಲೆ ಚಿನ್ನದ ದರ ಏರಿಕೆಯಾಗಿದೆ ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಗಟ್ಟಿ ದರ 95,890 ರೂಪಾಯಿಗೆ ತಲುಪಿದೆ. ಆಭರಣ ಮಳಿಗೆಗಳಲ್ಲಿ ಜಿಎಸ್‌ಟಿ ಹೊರತುಪಡಿಸಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ ಸರಾಸರಿ 9285 ರೂಪಾಯಿ ಇದೆ. 22 ಕ್ಯಾರೆಟ್ ಚಿನ್ನದ ದರ 8510 ರೂ. ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೆಹಲಿಯಲ್ಲಿ ಆಭರಣ ಚಿನ್ನದ ದರ ಒಂದೇ ದಿನ 10 ಗ್ರಾಂ ಗೆ 2 ಸಾವಿರ ರೂಪಾಯಿ ಏರಿಕೆಯಾಗಿದ್ದು, 93,700 ರೂ. ಗೆ ತಲುಪಿದೆ. 99.9 ರಷ್ಟು ಶುದ್ಧತೆಯ ಗಟ್ಟಿ ಚಿನ್ನ 10 ಗ್ರಾಂ ಗೆ 2,000 ರೂ.ಏರಿಕೆಯಾಗಿ 94,150 ರೂಪಾಯಿಗೆ ತಲುಪಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನದ ದರದಲ್ಲಿ ಶೇಕಡ 35ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಈ ಸಮಯದಲ್ಲಿ 68,000 ರೂ.ಇದ್ದ ಚಿನ್ನದ ದರ ಈಗ 95,000 ರೂ.ಗೆ ತಲುಪಿದ್ದು, 27 ಸಾವಿರ ರೂಪಾಯಿ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಂದು ಕೆಜಿ ಬೆಳ್ಳಿ ದರ 77,000 ರೂ.ನಷ್ಟು ಇತ್ತು. ಈ ವರ್ಷ ಅದು 1.05 ಲಕ್ಷ ರೂ.ಗೆ ಏರಿಕೆಯಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular