HomeKarnatakaದೇಶದ 93 ಕ್ಷೇತ್ರಗಳಲ್ಲಿ ಇಂದು 3ನೇ ಹಂತದ ಮತದಾನ: ಪ್ರಧಾನಿ ಮೋದಿಯಿಂದ ಮತ ಚಲಾವಣೆ

ದೇಶದ 93 ಕ್ಷೇತ್ರಗಳಲ್ಲಿ ಇಂದು 3ನೇ ಹಂತದ ಮತದಾನ: ಪ್ರಧಾನಿ ಮೋದಿಯಿಂದ ಮತ ಚಲಾವಣೆ

ನವದೆಹಲಿ: ಮೇ 7ರಂದು ಮಂಗಳವಾರ ದೇಶದಲ್ಲಿ ಮೂರನೇ ಹಂತದ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ. 12 ರಾಜ್ಯಗಳ 93 ಲೋಕಸಭಾ ಕ್ಷೇತ್ರಗಳಲ್ಲಿ ಮತ ದಾನ ನಡೆಯಲಿದ್ದು, 17 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. ಗುಜರಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಲಿದ್ದಾರೆ.

ಮೂರನೇ ಹಂತದಲ್ಲಿ ದಿಗ್ವಿಜಯ್ ಸಿಂಗ್, ಅಮಿತ್ ಶಾ, ಜ್ಯೋತಿರಾದಿತ್ಯ ಸಿಂಧಿಯಾ, ಸುಪ್ರಿಯಾ ಸುಳೆ, ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ ಕಣದಲ್ಲಿರುವ ಪ್ರಮುಖರಾಗಿದ್ದಾರೆ. ಗುಜರಾತ್ 25 ಸ್ಥಾನಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರ 11, ಕರ್ನಾಟಕದ 14 ಸೇರಿ 93 ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೂರನೇ ಹಂತದ ಚುನಾವಣೆಯೊಂದಿಗೆ ಒಟ್ಟು 543 ಸ್ಥಾನಗಳ ಪೈಕಿ 284 ಸ್ಥಾನಗಳ ಚುನಾವಣೆ ಪೂರ್ಣಗೊಳ್ಳಲಿದೆ.. ಇಂದು ಕರ್ನಾಟಕ, ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗೋವಾ, ಗುಜರಾತ್ ಸೇರಿ ಹಲವೆಡೆ ಚುನಾವಣೆ ನಡೆಯಲಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular