ಕನ್ನಡ ಚಿತ್ರರಂಗದಲ್ಲಿ ಹೊಸತನದ ಕಥಾಹಂದರ ಹೊಂದಿರುವ ‘ರಿಯಲ್ ಫೈಟರ್ಸ್’ ಚಿತ್ರದ ಟೀಸರ್ ಈಗ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಸಿನಿರಂಗದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಚಾಮರಾಜ್ ಸೈನ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಡಾ. ಚಾಮರಾಜ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಇತರೆ ಪ್ರಚಾರ ಸಾಮಗ್ರಿಗಳು ಗಮನ ಸೆಳೆದಿದ್ದವು, ಈಗ ಟೀಸರ್ ಬಿಡುಗಡೆಯಾಗುತ್ತಿದ್ದಂತೆ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಈ ಚಿತ್ರದಲ್ಲಿ ಡಾ. ಎನ್. ಚಂದ್ರಶೇಖರ್, ಡಾ. ಎಸ್. ಮಂಜುನಾಥ್, ಜ್ಯೋತಿರಾಜ (ಕೋತಿರಾಜ್), ಡಾ. ವಿ. ನಾಗೇಂದ್ರ ಪ್ರಸಾದ್, ಎಂ.ಎಸ್. ಜಹಾಂಗೀರ್, ಡ್ಯಾನಿ ಕುಟ್ಟಪ್ಪ, ಚೆಲುವರಾಜ್ ಮತ್ತು ಅದ್ಭುತ್ ಆರ್.ಕೆ ಸೇರಿದಂತೆ ದೊಡ್ಡ ಕಲಾವಿದರ ಬಳಗ ನಟಿಸಿದೆ.
ಸತೀಶ್ ಆರ್ಯನ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಡಾ. ವಿ. ನಾಗೇಂದ್ರ ಪ್ರಸಾದ್, ಸತೀಶ್ ಆರ್ಯನ್ ಹಾಗೂ ಶಿವರಾಮ್ ಸಾಹಿತ್ಯ ಒದಗಿಸಿದ್ದಾರೆ. ವಿಕ್ರೇಶ್ ಮಲೈಚಾಮಿ ಮತ್ತು ಯುಜೀನ್ ಡಿಸೋಜಾ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಹಾಗೂ ಗೋಪಾಲ್ ಬಿ.ಎಚ್. ಅವರ ಸಂಭಾಷಣೆ ಚಿತ್ರಕ್ಕೆ ಪ್ರಮುಖ ಬಲವಾಗಿ ನಿಂತಿವೆ. ಗುಟ್ಟಳ್ಳಿ ಸುರೇಶ್, ಬಿ. ಧನಂಜಯ್ ಹಾಗೂ ನಿರ್ದೇಶಕ ಚಾಮರಾಜ್ ಅವರ ನೃತ್ಯ ನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿವೆ.
ಎನ್‌ಕೆಎಂ ಅಂಡ್ ಸನ್ಸ್, ಡಾ. ಎಸ್. ಮಂಜುನಾಥ್, ಗಗನ್ ಸತೀಶ್ ಹಾಗೂ ಜಗದೀಶ್ ಎಲ್. ಅವರು ನಿರ್ಮಾಣಕ್ಕೆ ಸಾಥ್ ನೀಡಿದ್ದು, ಹರೀಶ್ ಅರುಸ್ ಪಿಆರ್ಒ ಜವಾಬ್ದಾರಿ ನಿರ್ವಹಿಸಿದ್ದಾರೆ. ಸ್ಟುಡಿಯೋ ಹೆಡ್ ಆಂಡ್ರ್ಯೂ ಶಿಬಿ, ಬಿಸಿನೆಸ್ ಹೆಡ್ ಮುತ್ತುಬಾಲಕೃಷ್ಣನ್, ಕಲರಿಸ್ಟ್ ಬಾಬು ಬಿ. ಮತ್ತು ಕನ್ಫರ್ಮಿಸ್ಟ್ ಮಂಜುನಾಥನ್ ಡಿಐ ವಿಭಾಗವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪುರುಷೋತ್ತಮ್ ಹಾಗೂ ಮಹೇಶ್ ಗಂಜಾಂ ಕಲಾ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಟೀಸರ್ ಸದ್ಯ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

