alex Certify ಟ್ವಿಟರ್​ ಸಂಖ್ಯೆ ತಪ್ಪಾಗಿದ್ದಕ್ಕೆ ಕ್ಷಮೆ ಕೋರಿದ ಅಮಿತಾಭ್​: ಜೊಮೆಟೊದಿಂದ ತಮಾಷೆಯ ಬರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ ಸಂಖ್ಯೆ ತಪ್ಪಾಗಿದ್ದಕ್ಕೆ ಕ್ಷಮೆ ಕೋರಿದ ಅಮಿತಾಭ್​: ಜೊಮೆಟೊದಿಂದ ತಮಾಷೆಯ ಬರಹ

ನೀವು ಅತ್ಯಾಸಕ್ತಿಯ ಟ್ವಿಟರ್ ಬಳಕೆದಾರರಾಗಿದ್ದರೆ, ಅಮಿತಾಭ್​ ಬಚ್ಚನ್ ಅವರ ಟ್ವೀಟ್‌ಗಳನ್ನು ನೀವು ಖಂಡಿತವಾಗಿ ನೋಡಿರಬಹುದು. ಬಿಗ್​ ಬಿ ತಮ್ಮ ಟ್ವೀಟ್​ಗಳಿಗೆ ನಂಬರ್​ ನೀಡುತ್ತಾರೆ. ಆದರೆ ಅಮಿತಾಭ್​ ಅವರು ತಮ್ಮ ಟ್ವಿಟರ್​ಗೆ ನಂಬರ್​ ಕೊಡುವಲ್ಲಿ ಮಿಸ್ಟೇಕ್​ ಮಾಡಿದ್ದರು.

ಅದರ ಬಗ್ಗೆ ಉಲ್ಲೇಖಿಸಿದ್ದ ಅವರು, “ಭಯಾನಕ ದೋಷ” ಆಗಿದೆ ಎಂದಿದ್ದರು. ತಮ್ಮ ಟ್ವಿಟರ್​ನಲ್ಲಿ ತಾವು T 4514 ಟ್ವೀಟ್​ನ ಬಳಿಕ ನಮೂದು ಮಾಡಿರುವ ಸಂಖ್ಯೆಗಳೆಲ್ಲವೂ ತಪ್ಪಾಗಿವೆ. T 4514 ಬಳಿಕ ಇರುವ ಟ್ವೀಟ್​ಗಳನ್ನು T4515,4516,4517,4518,4519 4520,4521 ಎಂದು ಓದಿಕೊಳ್ಳಬೇಕು ಎಂದು ಬರೆದಿದ್ದರು.

ಸದಾ ಒಂದಿಲ್ಲೊಂದು ಹಾಸ್ಯಮಯ ಟ್ವೀಟ್​ಗಳನ್ನು ಮಾಡುವ ಜೊಮ್ಯಾಟೋ ಕಂಪೆನಿ ಅಮಿತಾಭ್​ ಅವರ ಈ ಟ್ವೀಟ್​ ಅನ್ನು ಬದಲಿಸಿ ಒಂದು ಹಾಸ್ಯಮಯ ಟ್ವೀಟ್​ ಮಾಡಿದ್ದು ಅದೀಗ ವೈರಲ್​ ಆಗಿದೆ. ಅಮಿತಾಭ್​ ಬಚ್ಚನ್​ ಅವರು ಹೇಳುವ ರೀತಿಯಲ್ಲಿಯೇ ಬರೆದು, “ಕ್ಷಮಿಸಿ ಭಯಾನಕ ದೋಷವಾಗಿದೆ. ಚಾಯ್​ ಅತ್ಯುತ್ತಮ ಎಂದು ಹೇಳುವ ನನ್ನ ಎಲ್ಲಾ ಟ್ವೀಟ್​ಗಳು ತಪ್ಪಾಗಿವೆ, ಅವು ಮೊಮೋಸ್​ ಆಗಿರಬೇಕಿತ್ತು” ಎಂದಿದೆ.
ಈ ತಮಾಷೆಯ ಟ್ವೀಟ್​ಗೆ ನೆಟ್ಟಿಗರು ಥಹರೇವಾರಿ ಕಮೆಂಟ್​ ನೀಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...