
ಅದರ ಬಗ್ಗೆ ಉಲ್ಲೇಖಿಸಿದ್ದ ಅವರು, “ಭಯಾನಕ ದೋಷ” ಆಗಿದೆ ಎಂದಿದ್ದರು. ತಮ್ಮ ಟ್ವಿಟರ್ನಲ್ಲಿ ತಾವು T 4514 ಟ್ವೀಟ್ನ ಬಳಿಕ ನಮೂದು ಮಾಡಿರುವ ಸಂಖ್ಯೆಗಳೆಲ್ಲವೂ ತಪ್ಪಾಗಿವೆ. T 4514 ಬಳಿಕ ಇರುವ ಟ್ವೀಟ್‌ಗಳನ್ನು T4515,4516,4517,4518,4519 4520,4521 ಎಂದು ಓದಿಕೊಳ್ಳಬೇಕು ಎಂದು ಬರೆದಿದ್ದರು.
ಸದಾ ಒಂದಿಲ್ಲೊಂದು ಹಾಸ್ಯಮಯ ಟ್ವೀಟ್‌ಗಳನ್ನು ಮಾಡುವ ಜೊಮ್ಯಾಟೋ ಕಂಪೆನಿ ಅಮಿತಾಭ್ ಅವರ ಈ ಟ್ವೀಟ್ ಅನ್ನು ಬದಲಿಸಿ ಒಂದು ಹಾಸ್ಯಮಯ ಟ್ವೀಟ್ ಮಾಡಿದ್ದು ಅದೀಗ ವೈರಲ್ ಆಗಿದೆ. ಅಮಿತಾಭ್ ಬಚ್ಚನ್ ಅವರು ಹೇಳುವ ರೀತಿಯಲ್ಲಿಯೇ ಬರೆದು, “ಕ್ಷಮಿಸಿ ಭಯಾನಕ ದೋಷವಾಗಿದೆ. ಚಾಯ್ ಅತ್ಯುತ್ತಮ ಎಂದು ಹೇಳುವ ನನ್ನ ಎಲ್ಲಾ ಟ್ವೀಟ್ಗಳು ತಪ್ಪಾಗಿವೆ, ಅವು ಮೊಮೋಸ್ ಆಗಿರಬೇಕಿತ್ತು” ಎಂದಿದೆ.
ಈ ತಮಾಷೆಯ ಟ್ವೀಟ್ಗೆ ನೆಟ್ಟಿಗರು ಥಹರೇವಾರಿ ಕಮೆಂಟ್ ನೀಡುತ್ತಿದ್ದಾರೆ.