alex Certify ʼಚಿನ್ನʼ ಖರೀದಿದಾರರಿಗೊಂದು ಮಹತ್ವದ ಮಾಹಿತಿ: ಹಾಲ್‌ ಮಾರ್ಕ್‌ ಕುರಿತು ನಿಮ್ಮ ಗಮನದಲ್ಲಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಚಿನ್ನʼ ಖರೀದಿದಾರರಿಗೊಂದು ಮಹತ್ವದ ಮಾಹಿತಿ: ಹಾಲ್‌ ಮಾರ್ಕ್‌ ಕುರಿತು ನಿಮ್ಮ ಗಮನದಲ್ಲಿರಲಿ ಈ ವಿಷಯ

ಕೋವಿಡ್ ಕಾರಣದಿಂದಾಗಿ ಚಿನ್ನಾಭರಣಗಳ ಮೇಲೆ ಹಾಲ್‌ಮಾರ್ಕ್ ಲಗತ್ತಿಸಲು ಸಿದ್ಧತೆ ಮಾಡಿಕೊಳ್ಳಲು ಆಭರಣ ವರ್ತಕರಿಗೆ ಸರ್ಕಾರವು ಕಾಲಾವಕಾಶ ಕೊಟ್ಟಿದೆ. ಈ ಕಾರಣದಿಂದಾಗಿ ಚಿನ್ನಾಭರಣಗಳ ಹಾಲ್‌ಮಾರ್ಕ್ ಮಾಡುವ ಪ್ರಕ್ರಿಯೆಯು ಈ ಹಿಂದೆ ನಿಗದಿ ಪಡಿಸಿದ್ದ ಜೂನ್ 1ಕ್ಕೆ ಬದಲಾಗಿ ಜೂನ್ 16ರಿಂದ ಆರಂಭಗೊಳ್ಳಲಿದೆ.

ಚಿನ್ನಾಭರಣಗಳ ಮೇಲೆ ಕಡ್ಡಾಯವಾಗಿ ಹಾಲ್‌ಮಾರ್ಕ್ ಹಾಕಲೇಬೇಕೆಂದು ಸರ್ಕಾರ ಹೇಳಿರುವುದರಿಂದ ಏನೆಲ್ಲಾ ಆಗಬಹುದು ಎಂಬ ಕುರಿತಂತೆ ಐಐಎಂ-ಅಹಮದಾಬಾದ್‌ನ ಇಂಡಿಯಾ ಗೋಲ್ಡ್ ಪಾಲಿಸಿ ಕೇಂದ್ರದ ಮುಖ್ಯಸ್ಥರಾದ ಸುಧೀಶ್ ನಂಬಿಯಾತ್‌ ಮಾತನಾಡಿದ್ದಾರೆ. ಈ ಬಗ್ಗೆ ಅವರಿಂದ ಕೇಳಿ ಬಂದು ಕೆಲವು ಮುಖ್ಯಾಂಶಗಳು ಇಂತಿವೆ:

ಶೇವ್‌ ಮಾಡಿಸಿಕೊಳ್ಳಲು ಪ್ರಧಾನಿಗೆ 100 ರೂ. ಕಳುಹಿಸಿದ ಚಹಾ ವ್ಯಾಪಾರಿ

1. ಚಿನ್ನದ ಗುಣಮಟ್ಟ ಖಾತ್ರಿ ಪಡಿಸುವ ಹಾಲ್‌ಮಾರ್ಕಿಂಗ್‌ ಗ್ರಾಹಕರಿಗೆ ಚಿನ್ನಾಭರಣಗಳನ್ನು ಕಡಿಮೆ ಕ್ಯಾರೆಟ್ ಶುದ್ಧತೆಯಲ್ಲಿ ಮಾಡಿದ್ದಲ್ಲಿ ಸೂಚನೆ ಕೊಡುತ್ತದೆ. ಒಂದು ವೇಳೆ 22ಕೆ ಹಾಲ್‌ಮಾರ್ಕ್ ಚಿನ್ನವನ್ನು ಗ್ರಾಹಕರು ಖರೀದಿ ಮಾಡುತ್ತಿದ್ದಲ್ಲಿ, 22/24 ಕ್ಯಾರೆಟ್‌ಗಳು ಚಿನ್ನದ್ದಾಗಿದ್ದು, ಮಿಕ್ಕಿದ್ದೆಲ್ಲಾ ಮಿಶ್ರ ಲೋಹ ಎಂದಾಗಿದ್ದು, ಅಂಥ ಆಭರಣದ ಮರುಮಾರಾಟದ ಮೌಲ್ಯವನ್ನು ಮೊದಲೇ ನಿರ್ಧಾರ ಮಾಡಿಕೊಳ್ಳಲು ಖರೀದಿದಾರರಿಗೆ ಅವಕಾಶ ಕೊಡುತ್ತದೆ.

ಇಂಥ ಸಂದರ್ಭದಲ್ಲಿ, ಖರೀದಿದಾರರೇನಾದರೂ ತಮ್ಮಲ್ಲಿರುವ ಚಿನ್ನವನ್ನು ಬೇರೊಂದು ಆಭರಣಕ್ಕೆ ಬದಲಾಯಿಸಿಕೊಳ್ಳಲು ಬಯಸಿದಾಗ, ಮತ್ತೊಬ್ಬ ವರ್ತಕರು ಚಿನ್ನದ ಶುದ್ಧತೆಯನ್ನು ಪ್ರಶ್ನಿಸುವ ಪ್ರಮೇಯ ಬರುವುದಿಲ್ಲ. ತಮ್ಮಲ್ಲಿರುವ ಆಭರಣದ ಎಲ್ಲಾ ಮಾಹಿತಿಗಳಿದ್ದಲ್ಲಿ ಗ್ರಾಹಕರು, ಮಾರಾಟಗಾರರು ತಮ್ಮನ್ನು ವಂಚಿಸಿದರೆ ಕೋರ್ಟ್ ಮೆಟ್ಟಿಲೇರಬಹುದು.

ಕೇಂದ್ರಿಯ ವಿದ್ಯಾಲಯದ 1 ನೇ ತರಗತಿ ಪ್ರವೇಶ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

2. ಸದ್ಯದ ಮಟ್ಟಿಗೆ ಬಿಐಎಸ್‌ ಹಾಲ್‌ಮಾರ್ಕಿಂಗ್ ಕೇವಲ 14ಕೆ, 18ಕೆ ಹಾಗೂ 22ಕೆ ಆಭರಣಗಳಿಗೆ ಮಾತ್ರವೇ ಇದೆ. ಅಂತಾರಾಷ್ಟ್ರೀಯ ಮಾನದಂಡಗಳು ಎಲ್ಲಾ ರೀತಿಯ ಕ್ಯಾರೆಟೇಜ್‌ಗೂ (9ಕೆ ಇಂದ 24ಕೆ) ಅನುಮೋದನೆ ಕೊಟ್ಟಿದ್ದು, ಯಾವುದೇ ನಿರ್ಬಂಧವಿಲ್ಲ. ಚಿನ್ನಕ್ಕೆ ಭಾರತದಲ್ಲಿ ಸಾಂಪ್ರದಾಯಿಕ ಮೌಲ್ಯವಿದ್ದು, ದೇಶದ ವಿವಿಧ ಭಾಗಗಳಲ್ಲಿ ಭಿನ್ನ ರೀತಿಯ ಕ್ಯಾರೆಟೇಜ್‌ಗಳಿಗೆ ಭಿನ್ನ ರೀತಿಯ ಬೇಡಿಕೆಗಳು ಇರುತ್ತದೆ.

ಕೆಲವೊಂದು ಪ್ರದೇಶಗಳಲ್ಲಿ 24ಕೆ ಆಭರಣಗಳಿಲ್ಲದೇ ಮದುವೆಯ ಆಭರಣಗಳು ಪೂರ್ಣಗೊಳ್ಳುವುದಿಲ್ಲ. ನೆರೆಯ ಚೀನಾ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಥಾಯ್ಲೆಂಡ್‌ಗಳಲ್ಲಿ ಮಾರಾಟವಾಗುವ ಚಿನ್ನದಲ್ಲಿ ಬಹುತೇಕ 24ಕೆ ಶುದ್ಧತೆಯವೇ ಆಗಿವೆ. ಹೀಗಾಗಿ, ಮುಂದಿನ ದಿನಗಳಲ್ಲಿ, ಸೂಕ್ತ ಉಪಕರಣಗಳು ಹಾಗೂ ಉತ್ಪಾದನೆ ಮಾಡುವ ಕೌಶಲ್ಯವಿರುವ ಆಭರಣಗಳ ವರ್ತಕರಿಗೆ ಬಿಐಎಸ್‌ ಇತರೆ ಕ್ಯರೆಟೇಜ್‌ಗೆ ಮಾರಾಟ ಮಾಡುವ ಸ್ವತಂತ್ರ‍್ಯ ಕೊಡುತ್ತದೆ.

3. ಚಿನ್ನ ಖರೀದಿ ಮಾಡುವವರು ಯಾವಾಗಲೂ ಬಿಐಎಸ್‌ ಪ್ರಮಾಣೀಕೃತ ಚಿನ್ನದ ವರ್ತಕರಿಂದಲೇ ಖರೀದಿ ಮಾಡಬೇಕು. ಎರಡನೇಯದಾಗಿ, ಸೂಕ್ಷ್ಮದರ್ಶಕದ ನೆರವಿನಿಂದ ಹಾಲ್‌ಮಾರ್ಕಿಂಗ್‌ನ ನಾಲ್ಕೂ ಚಿಹ್ನೆಗಳನ್ನು ಕೂಲಂಕಷವಾಗಿ ಗಮನಿಸಬೇಕು. ಈ ಚಿಹ್ನೆಗಳೆಂದರೆ; ಬಿಐಎಸ್‌ ಗುರುತು, ಕ್ಯಾರೆಟ್‌ಗಳಲ್ಲಿ ಶುದ್ಧತೆ ಹಾಗೂ ಚಿನ್ನದ ಗುಣಮಟ್ಟ ಹಾಗೂ ಅಸ್ಸೆ ಕೇಂದ್ರದ ಗುರುತು/ ಸಂಖ್ಯೆ, ಆಭರಣ ಮಾಡುವವರ ಗುರುತು/ಸಂಖ್ಯೆ. ಮೂರನೇಯದಾಗಿ, ಗ್ರಾಹಕರು ಯಾವಾಗಲೂ ತಮ್ಮ ಖರೀದಿಯ ಬಿಲ್ ಪಡೆದುಕೊಂಡು, ಅದರಲ್ಲಿ ಹಾಲ್‌ಮಾರ್ಕಿಂಗ್ ಬೆಲೆ ಇದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು (35 ರೂ.ಗಳಿಗಿಂತ ಹೆಚ್ಚಾಗಿರಬಾರದು + ಜಿಎಸ್‌ಟಿ/ಚಿನ್ನದ ತುಂಡಿಗೆ) ಜೊತೆಗೆ ಚಿನ್ನದ ತೂಕ, ಕ್ಯಾರೆಟ್‌ಗಳಲ್ಲಿ ಶುದ್ಧತೆ ಹಾಗೂ ಬಿಲ್ ಮೇಲಿರುವ ಫೈನ್‌ನೆಸ್‌ ಅನ್ನೂ ಸಹ ಖಾತ್ರಿ ಮಾಡಿಕೊಳ್ಳಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...